WILDLIFE

ಕಾಣೆಯಾಗ್ತಿವೆ ಹುಲಿ ಹಿಡಿವ ಕ್ಯಾಮೆರಾ! ವಾರದಲ್ಲಿ 2 ಲಕ್ಷ ಲಾಸು! ಮಲ್ನಾಡ್​ ಕಾಡಿನ ಕಥೆಗೆ ಹೊಸ ವಹಿವಾಟಿನ ಟ್ವಿಸ್ಟು!

ajjimane ganesh ಅಥಾರಿಟಿ: ಮಲೆನಾಡು ಟುಡೆ ಡೆಸ್ಕ್

ಮಲ್ನಾಡ್​ ಕಾಡಿನ ಕಥೆ / ಅರಣ್ಯ ಇಲಾಖೆ ಹುಲೆ ಎಣಿಸ್ತಿರುವ ಬೆನ್ನಲ್ಲೆ ಫಾರೆಸ್ಟ್ ಸಿಬ್ಬಂದಿಗೆ ಕ್ಯಾಮರಾ ಕಾಯೋ ಕೆಲಸ ತಾಪತ್ರಯ ತಂದಿಟ್ಟಿದೆ. ವಿಷಯ ಎಂತ ಅಂದ್ರೆ, ಕಾಡಲ್ಲಿ ಹುಲಿ ಕಾಣಲಿ ಅಂತಾ ಕಟ್ಟಿದ್ದ ಕ್ಯಾಮರಾವನ್ನೆ ಹೊತ್ತುಕೊಂಡು ಹೋಗ್ತಿದ್ದಾರೆ ಮಂದಿ. ಕಾಡಿಗೆ ಬರುವ ಮಂದಿಗೆ ಕ್ಯಾಮರಾ ಇದೆ ಅಂತಾ ಗೊತ್ತಾಗದೇನೋ? ಅಥವಾ ಕ್ಯಾಮರಾ ಕಣ್ಣಿಗೆ ಬಿದ್ವಲ್ಲಾ ಮಾರಾಯ! ವ್ಯಾಪಾರ ಹದಗೆಡ್ತು ಅಂತನೋ!? ಅಥವಾ ಕಾಡಿನ ವಹಿವಾಟು ಗೊತ್ತಾಗುತ್ತೆ ಅಂತಾನೋ ಫಾರೆಸ್ಟ್​ನೋರು ಗುಟ್ಟಾಗಿ ಇಟ್ಟಿರೋ ಕ್ಯಾಮೆರಾಗಳನ್ನ ಗುಟ್ಟಾಗಿಯೇ ಕದ್ಕೊಂಡು ಹೋಗ್ತಿದ್ದಾರಂತೆ.

ಇತ್ತೀಚೆಗೆ ಎರಡು ಕಂಪ್ಲೇಂಟ್ ಆಗಿದ್ದ ವರದಿ ನಾವೆ ಮಾಡಿದ್ವು! ಇದೀಗ ಕಾರ್ಗಲ್​ ಲಿಮಿಟ್ಸ್​ನಲ್ಲಿ ಮತ್ತೆರಡು ಹುಲಿ ಕ್ಯಾಮರಾ ಕದ್ದ ಸುದ್ದಿ ಬಂದಿದೆ. ಅಖಿಲ ಭಾರತ ಹುಲಿ ಗಣತಿ 2025-26ರ ಅಂಗವಾಗಿ ಅರಣ್ಯ ಇಲಾಖೆ ವತಿಯಿಂದ ಅರಣ್ಯ ಪ್ರದೇಶದಲ್ಲಿ ಅಳವಡಿಸಲಾಗಿದ್ದ 2,00,000 ರೂಪಾಯಿ ಮೌಲ್ಯದ ಒಟ್ಟು 5 ಕ್ಯಾಮೆರಾಗಳನ್ನು ಕಳ್ಳತನ ಮಾಡಲಾಗಿದೆ.

ಸಾಗರ ತಾಲೂಕಿನ ಕಾರ್ಗಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ವರದಿಯಾಗಿದ್ದು, ಕಾರ್ಗಲ್ ವನ್ಯಜೀವಿ ವಲಯದ ಅರಣ್ಯಾಧಿಕಾರಿ ನವೀನ್ ಕುಮಾರ್ ಆರ್ ಕೊಟ್ಟ ದೂರಿನ ಆಧಾರದ ಮೇಲೆ ಕಾರ್ಗಲ್ ಪೊಲೀಸ್ ಠಾಣೆಯಲ್ಲಿ ಎರಡು ಪ್ರತ್ಯೇಕ ಎಫ್‌ಐಆರ್ ದಾಖಲಾಗಿವೆ.

ಮಲ್ನಾಡ್​ ಕಾಡಿನ ಕಥೆ / ಕಾರ್ಗಲ್​ ಪೊಲೀಸ್ ಠಾಣೆಯಲ್ಲಿನ ಪ್ರಕರಣ ನಂಬರ್ 01

ಮೊದಲನೇ ಪ್ರಕರಣದಲ್ಲಿ, ಕಣಪಗಾರು ಗಸ್ತಿನ ಕಲ್ಲುರಾಶಿ ಎಂಬ ಪ್ರದೇಶದಲ್ಲಿ ಏಪ್ರಿಲ್ 1, 2026ರಂದು ಅಳವಡಿಸಲಾಗಿದ್ದ 40,000 ರೂಪಾಯಿ ಮೌಲ್ಯದ ಕ್ಯಾಮೆರಾವನ್ನು ಕಳ್ಳತನ ಮಾಡಲಾಗಿದೆ. ಮಾಹಿತಿ ಸಂಗ್ರಹಿಸಲು ತೆರಳಿದಾಗ ಕಳ್ಳತನವಾಗಿರುವುದು ಬೆಳಕಿಗೆ ಬಂದಿದೆ. ವಿಶೇಷ ಅಂದರೆ ಕಳ್ಳತನ ನಡೆಯುವ ಎರಡು ದಿನಗಳ ಮುನ್ನ, ವ್ಯಕ್ತಿಯೊಬ್ಬ ಬಂದೂಕು ಸಮೇತ ನಡೆದುಕೊಂಡು ಹೋಗುತ್ತಿರುವ ದೃಶ್ಯ ಕ್ಯಾಮಾರದಲ್ಲಿ ಸೆರೆಯಾಗಿದೆ. ಅಲ್ಲದೆ ಆತನೇ ಕ್ಯಾಮೆರಾವನ್ನು ಕದಿಯುತ್ತಿರುವ ದೃಶ್ಯ ಮತ್ತೊಂದು ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಮಲ್ನಾಡ್​ ಕಾಡಿನ ಕಥೆ / ಕಾರ್ಗಲ್​ ಪೊಲೀಸ್ ಠಾಣೆಯಲ್ಲಿನ ಪ್ರಕರಣ ನಂಬರ್ 02

ಮತ್ತೊಂದು ಪ್ರಕರಣದಲ್ಲಿ, ಸಾಗರ ತಾಲೂಕಿನ ಬ್ರಾಹ್ಮಣ ಕೊಪ್ಪರಿಗೆ ಗ್ರಾಮದ ಸರ್ವೆ ನಂಬರ್ 67 ಹಾಗೂ ತಳಕಳಲೆ ಗ್ರಾಮದ ಸರ್ವೆ ನಂಬರ್ 39ರ ಅರಣ್ಯ ಪ್ರದೇಶದಲ್ಲಿ ಏಪ್ರಿಲ್ 1, 2026ರಂದು ಅಳವಡಿಸಲಾಗಿದ್ದ 1,60,000 ರೂಪಾಯಿ ಮೌಲ್ಯದ ಒಟ್ಟು 4 ಕ್ಯಾಮೆರಾಗಳನ್ನು ಕಳ್ಳತನ ಮಾಡಲಾಗಿದೆ.

ಒಟ್ಟಾರೆ, ವಿಚಾರ ಗೊತ್ತಾತಲ್ಲ! ಕ್ಯಾಮರಾ ಎಂತಕ್ಕೆ ಕಳ್ತನ ಆಗ್ತಿದೆ ಅನ್ನದಕ್ಕೆ ಮೇಲೆ ಮೇಲೆ ಕಾರಣ ಸಫಾ ಸಪಾಟಾಗಿ ಗೊತ್ತಾಗ್ತಿದೆಯಾದರೂ, ಅದೆ ಹೌದು ಅನ್ನಕ್ಕಾಗಲ್ಲ. ಆದ್ರೂ ಫಾರೆಸ್ಟ್​ನವರಿಗೆ ಈಗ ಹುಲಿ ಹಿಡಿಯುವ ಕ್ಯಾಮರಾ ಕಾಯೋದೆ ದೊಡ್ಡ ಕೆಲಸ ಆಗಿದೆ

ನಮ್ಮ ಮಲೆನಾಡು ಟುಡೆಯ ವಿಡಿಯೋಗಳನ್ನು ನೀವಿಲ್ಲಿ ನೋಡಬಹುದು: https://www.youtube.com/shorts/x8I63rpLvyw

Tiger Census Cameras Stolen in Kargal story ಕಾಣೆಯಾಗ್ತಿವೆ ಹುಲಿ ಹಿಡಿವ ಕ್ಯಾಮೆರಾ! ವಾರದಲ್ಲಿ 2 ಲಕ್ಷ ಲಾಸು! ಮಲ್ನಾಡ್​ ಕಾಡಿನ ಕಥೆಗೆ ಹೊಸ ವಹಿವಾಟಿನ ಟ್ವಿಸ್ಟು!
Tiger Census Cameras Stolen in Kargal story ಕಾಣೆಯಾಗ್ತಿವೆ ಹುಲಿ ಹಿಡಿವ ಕ್ಯಾಮೆರಾ! ವಾರದಲ್ಲಿ 2 ಲಕ್ಷ ಲಾಸು! ಮಲ್ನಾಡ್​ ಕಾಡಿನ ಕಥೆಗೆ ಹೊಸ ವಹಿವಾಟಿನ ಟ್ವಿಸ್ಟು! 

Related News

🔔 Breaking News Alerts

ತಾಜಾ ಸುದ್ದಿಗಳನ್ನು ಮೊದಲು ಪಡೆಯಲು ನಮ್ಮ ನೋಟಿಫಿಕೇಶನ್ ಸೇವೆಯನ್ನು ಸಬ್‌ಸ್ಕ್ರೈಬ್ ಮಾಡಿ.

END OF STORY
ಮಲೆನಾಡು ಟುಡೆ ಫಾಲೋ ಮಾಡಿ

ತಾಜಾ ಸ್ಥಳೀಯ ಸುದ್ದಿಗಳಿಗಾಗಿ ನಮ್ಮ ಅಧಿಕೃತ ಚಾನೆಲ್‌ಗಳಿಗೆ ಸೇರಿ.

ajjimane ganesh

ಅಜ್ಜಮನೆ ಗಣೇಶ, ಪತ್ರಕರ್ತ, ಸಮಯ, ಟಿವಿ9, ನ್ಯೂಸ್​ ಫಸ್ಟ್​ನಲ್ಲಿ ವೃತ್ತಿ ನಿರ್ವಹಿಸಿರುವ ಅನುಭವವಿದೆ. ಗಳಿಸಿದ ಅನುಭವದ ಅನುಭಾವದ ಜೊತೆಗೆ ಮಲೆನಾಡು ಟುಡೆಯಲ್ಲಿ ಸೀನಿಯರ್​​ ಜರ್ನಲಿಸ್ಟ್​ ಆಗಿ ಕೆಲಸ ನಿರ್ವಹಿಸುತ್ತಿರುವೆ