SHIVAMOGGA CRIME NEWS TODAY

ರವೀಂದ್ರ ನಗರ ರೈಲ್ವೆ ಹಳಿ ಬಳಿ ಯುವತಿಯ ಅನುಮಾನಾಸ್ಪದ ಸಾವು!

ajjimane ganesh ಅಥಾರಿಟಿ: ಮಲೆನಾಡು ಟುಡೆ ಡೆಸ್ಕ್

ನಗರದ ರವೀಂದ್ರ ನಗರ ಬಳಿಯಿರುವ ರೈಲ್ವೆ ಹಳಿಯ ಸಮೀಪ ಯುವತಿಯೊಬ್ಬಳ ಮೃತದೇಹ ಪತ್ತೆಯಾಗಿದೆ. ಯುವತಿ ಮೃತದೇಹ ಪತ್ತೆಯಾಗಿರುವುದು ಸ್ವಲ್ಪ ಅನುಮಾನಾಸ್ಪದವಾಗಿದೆ. ಘಟನೆ ಹೇಗೆ ನಡೆಯಿತು ಇನ್ನೂ ಸಹ ಸ್ಪಷ್ಟವಾಗಿಲ್ಲವಾದರೂ ಮೇಲ್ನೋಟಕ್ಕೆ ರೈಲಿಗೆ ಸಿಲುಕಿ ಯುವತಿ ಸಾವನ್ನಪ್ಪಿರುವ ಸಾಧ್ಯತೆ ಇದೆ ಅಂತಾ ಹೇಳಲಾಗುತ್ತಿದೆ.ಈ ಸಂಬಂಧ ಸ್ಥಳಕ್ಕೆ ರೈಲ್ವೆ ರಕ್ಷಣಾ ದಳದ ಸಿಬ್ಬಂದಿ ತೆರಳಿ ಪರಿಶೀಲನೆ ನಡೆಸಿದ್ದಾರೆ.

Suspicious Death of Young Woman Near Ravindra Nagar Railway Track
Suspicious Death of Young Woman Near Ravindra Nagar Railway Track

ಮಲೆನಾಡು ಟುಡೆಗೆ ಸಿಕ್ಕ ಮಾಹಿತಿಯಂತೆ, ಇಂದು ಸಂಜೆ 5 ಗಂಟೆಯ ನಂತರ ಈ ಘಟನೆ ಬೆಳಕಿಗೆ ಬಂದಿದೆ. ಅದಕ್ಕೂ ಮೊದಲು ಇದೇ ಟ್ರ್ಯಾಕ್​ನಲ್ಲಿ ತಾಳಗುಪ್ಪ-ಮೈಸೂರು ರೈಲು ಗಾಡಿಗೆ ಸಂಚರಿಸುತ್ತದೆ. ಆ ರೈಲಿಗೆ ಸಿಲುಕಿ ಸಾವನ್ನಪ್ಪಿರುವ ಸಾಧ್ಯತೆ ಅಂತಾ ಶಂಕಿಸಲಾಗಿದೆ. ಇನ್ನೂ ಘಟನೆ ಬಗ್ಗೆ ರೈಲ್ವೆ ಸಿಬ್ಬಂದಿಯೇ ರೈಲ್ವೆ ರಕ್ಷಣಾ ದಳದ ಸಿಬ್ಬಂದಿಗೆ ಮಾಹಿತಿ ರವಾನಿಸಿದ್ದು, ಸ್ಥಳದಲ್ಲಿ ಮಹಜರ್ ನಡೆಸಲಾಗಿದೆ.

ನಮ್ಮ ಮಲೆನಾಡು ಟುಡೆಯ ವಿಡಿಯೋಗಳನ್ನು ನೀವಿಲ್ಲಿ ನೋಡಬಹುದು: https://www.youtube.com/shorts/x8I63rpLvyw

ರವೀಂದ್ರ ನಗರ ರೈಲ್ವೆ ಹಳಿ ಬಳಿ ಯುವತಿಯ ಅನುಮಾನಾಸ್ಪದ ಸಾವು Suspicious Death of Young Woman Near Ravindra Nagar Railway Track
ರವೀಂದ್ರ ನಗರ ರೈಲ್ವೆ ಹಳಿ ಬಳಿ ಯುವತಿಯ ಅನುಮಾನಾಸ್ಪದ ಸಾವು Suspicious Death of Young Woman Near Ravindra Nagar Railway Track

Related News

🔔 Breaking News Alerts

ತಾಜಾ ಸುದ್ದಿಗಳನ್ನು ಮೊದಲು ಪಡೆಯಲು ನಮ್ಮ ನೋಟಿಫಿಕೇಶನ್ ಸೇವೆಯನ್ನು ಸಬ್‌ಸ್ಕ್ರೈಬ್ ಮಾಡಿ.

END OF STORY