ಇವತ್ತು ಬೆಳಗ್ಗೆ ಕೂಡ ನಾಳೆ ಸುಮಾರು ಕಡೆಗಳಲ್ಲಿ ಕರೆಂಟ್ ಇರಲ್ಲ ಎಂದು ಮಲೆನಾಡು ಟುಡೆಯ ವರದಿಗಾರನಾಗಿ ವರದಿ ಮಾಡಿದ್ದೆ. ಇದೀಗ ಈ ಸುದ್ದಿಗೆ ಸಂಬಂಧಿಸಿದಂತೆ ನಾಳೆ ಇನ್ನಷ್ಟು ಏರಿಯಾಗಳಲ್ಲಿ ಕರೆಂಟ್ ಇರಲ್ಲ ಎಂಬ ಮಾಹಿತಿ ಅಧಿಕೃತ ವಾರ್ತಾ ಇಲಾಖೆಯಿಂದ ಲಭ್ಯವಾಗಿದೆ.
ಮಲೆನಾಡು ಟುಡೆಗೆ ಲಭ್ಯವಾಗಿರುವ ಮಾಹಿತಿ ಪ್ರಕಾರ, ನಾಳೆ ಶಿವಮೊಗ್ಗ ನಗರದ ವಿವಿಧ ಪ್ರದೇಶಗಳಲ್ಲಿ ಮೆಸ್ಕಾಂ ಶಿವಮೊಗ್ಗ ವಿಭಾಗ ನಿರ್ವಹಣಾ ಕಾಮಗಾರಿಗಳನ್ನು ಹಮ್ಮಿಕೊಂಡಿದೆ. ಹಾಗಾಗಿ ನಾಳೆ ಅಂದರೆ ಏಪ್ರಿಲ್ 15 ಹಾಗೂ 16ರಂದು ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಮಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತ (ಮೆಸ್ಕಾಂ) ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. ವಿದ್ಯುತ್ ಕಂಬಗಳ ತೆರವು ಕಾರ್ಯಾಚರಣೆ ಹಾಗೂ ವಿದ್ಯುತ್ ಪರಿವರ್ತಕಗಳ ಸ್ಥಳಾಂತರ ಕಾಮಗಾರಿ ನಡೆಯಲಿರುವ ಕರೆಂಟ್ ಇರದು ಎಂದು ತಿಳಿಸಿದೆ.
ಶಿವಮೊಗ್ಗ ನಗರ ಉಪವಿಭಾಗ-1 ದಲ್ಲಿ ವಿದ್ಯುತ್ ವ್ಯತ್ಯಯ
ಶಿವಮೊಗ್ಗ ನಗರ ಉಪವಿಭಾಗ-1ರ ಘಟಕ-2ರ ವ್ಯಾಪ್ತಿಯಲ್ಲಿ ಬರುವ ಪ್ರದೇಶಗಳಲ್ಲಿ ಎರಡು ದಿನ ಬೆಳಿಗ್ಗೆ 10.00 ಗಂಟೆಯಿಂದ ಮಧ್ಯಾಹ್ನ 2.00 ಗಂಟೆಯವರೆಗೆ ಕರೆಂಟ್ ಇರಲ್ಲ. ಜಯನಗರದ ಮುಖ್ಯರಸ್ತೆ, ಮೆಟ್ರೋ ಆಸ್ಪತ್ರೆಯಿಂದ ಸರ್ವೋದಯ ಶಾಲೆವರೆಗಿನ ಪ್ರದೇಶ, ರಾಮಮಂದಿರ ರಸ್ತೆ, ಕಮಲ ನರ್ಸಿಂಗ್ ಹೋಂನಿಂದ ಜಯಮ್ಮ ಆಸ್ಪತ್ರೆಗೆ ತೆರಳುವ ರಸ್ತೆ, ವಂದನಾ ಬೇಕರಿ ರಸ್ತೆ ಸೇರಿದಂತೆ ಈ ಮಾರ್ಗದ ಸುತ್ತಮುತ್ತಲಿನ ಬಡಾವಣೆಗಳಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಳ್ಳಲಿದೆ.
ವಿದ್ಯಾನಗರದಲ್ಲಿಯು ನಾಳೆ ವಿದ್ಯುತ್ ವ್ಯತ್ಯಯ
ಇದೇ ರೀತಿ, ಶಿವಮೊಗ್ಗ ನಗರ ಉಪವಿಭಾಗ-1ರ ಘಟಕ-1ರ ವ್ಯಾಪ್ತಿಗೆ ಒಳಪಡುವ 11 ಕೆವಿ ವಿದ್ಯುತ್ ಮಾರ್ಗದಲ್ಲಿ ವಿದ್ಯುತ್ ಪರಿವರ್ತಕವನ್ನು ಸ್ಥಳಾಂತರಿಸುವ ಮಹತ್ವದ ಕಾಮಗಾರಿಯನ್ನು ಮೆಸ್ಕಾ ನಡೆಸ್ತಿದೆ. ಪರಿಣಾಮ ಏಪ್ರಿಲ್ 15ರಂದು ಅಂದರೆ ನಾಳೆ ಬೆಳಿಗ್ಗೆ 9.30ರಿಂದ ಸಂಜೆ 6.00 ಗಂಟೆಯವರೆಗೆ ವಿದ್ಯಾನಗರದ ಮುಖ್ಯ ರಸ್ತೆ, ದುರ್ಗಮ್ಮನ ಬೀದಿ, ಜಗದಾಂಬ ಬೀದಿ, ಜನರಲ್ ಹಾಸ್ಟೆಲ್ ಹಾಗೂ ಈ ವ್ಯಾಪ್ತಿಗೆ ಬರುವ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ಅಡಚಣೆ ಉಂಟಾಗಲಿದೆ.
ತೀರ್ಥಹಳ್ಳಿಯಲ್ಲಿ ಮೆಸ್ಕಾಂ ಸಭೆ
ಮತ್ತೊಂದೆಡೆ, ಗ್ರಾಹಕರ ಕುಂದುಕೊರತೆಗಳನ್ನು ಆಲಿಸುವ ಉದ್ದೇಶದಿಂದ ತೀರ್ಥಹಳ್ಳಿಯ ಮೆಸ್ಕಾಂ ಉಪವಿಭಾಗ ಕಚೇರಿಯಲ್ಲಿ ಏಪ್ರಿಲ್ 18ರಂದು ಜನಸಂಪರ್ಕ ಸಭೆಯನ್ನು ಆಯೋಜಿಸಲಾಗಿದೆ. ಅಂದು ಬೆಳಿಗ್ಗೆ 11.00 ಗಂಟೆಯಿಂದ ಮಧ್ಯಾಹ್ನ 1.00 ಗಂಟೆಯವರೆಗೆ ನಡೆಯಲಿರುವ ಈ ಸಭೆಯಲ್ಲಿ ಮೆಸ್ಕಾಂ ಇಲಾಖೆಯ ಹಿರಿಯ ಅಧಿಕಾರಿಗಳು ಖುದ್ದಾಗಿ ಭಾಗವಹಿಸಲಿದ್ದಾರೆ.
ಈ ಭಾಗದ ವಿದ್ಯುತ್ ಗ್ರಾಹಕರು ತಮ್ಮ ಅಹವಾಲುಗಳನ್ನು ಹಾಗೂ ದೂರುಗಳನ್ನು ನೇರವಾಗಿ ಅಧಿಕಾರಿಗಳ ಗಮನಕ್ಕೆ ತರಲು ಇದೊಂದು ಉತ್ತಮ ವೇದಿಕೆಯಾಗಿದ್ದು, ಸಾರ್ವಜನಿಕರು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳುವಂತೆ ಮೆಸ್ಕಾಂ ಇಲಾಖೆ ಕೋರಿದೆ. ಸಭೆ ಹಾಗೂ ಇತರೆ ಮಾಹಿತಿಗಳಿಗೆ ಸಾರ್ವಜನಿಕರು ದೂರವಾಣಿ ಸಂಖ್ಯೆ 9448289508 ಅನ್ನು ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ಸ್ಪಷ್ಟಪಡಿಸಿದೆ.
ನಮ್ಮ ಮಲೆನಾಡು ಟುಡೆಯ ವಿಡಿಯೋಗಳನ್ನು ನೀವಿಲ್ಲಿ ನೋಡಬಹುದು: https://www.youtube.com/shorts/x8I63rpLvyw
