ಐಪಿಎಲ್ ಉಚಿತ ಟಿಕೆಟ್ ನಿರಾಕರಿಸಿದ ಶಾಸಕ ಚನ್ನಿ. ಕಾರಣವೇನು

This Article Written by / Prathapa thirthahalli / ಏಪ್ರಿಲ್ 8, 2026

MLA SN Channabasappa Rejects Free IPL Tickets

ಶಿವಮೊಗ್ಗ : ಕಳೆದ ಬಾರಿಐಪಿಎಲ್ ನಲ್ಲಿ 11 ಜನ ಅಮಾಯಕರು ಸಾವನ್ನಪ್ಪಿದ್ದು, ಆ ನೋವಿನ ನಡುವೆ ನಾವು ಐಪಿಎಲ್ ಟಿಕೆಟ್‌ಗಾಗಿ ಪಟ್ಟು ಹಿಡಿಯುವುದು ನಮ್ಮನ್ನು ಜನರ ದೃಷ್ಠಿಯಲ್ಲಿ ಇನ್ನಷ್ಟು ಕನಿಷ್ಠರನ್ನಾಗಿಸುತ್ತದೆ ಎಂದು ಶಾಸಕ ಎಸ್ ಎನ್ ಚನ್ನಬಸಪ್ಪ ಐಪಿಎಲ್ ಟಿಕೆಟ್​​​ ಅನ್ನು ತಿರಸ್ಕರಿಸಿದ್ದಾರೆ.

ಶಿವಮೊಗ್ಗದ ವಿವಿಧೆಡೆ ಬೆಳ್ಳಂ ಬೆಳಿಗ್ಗೆ ಲೋಕಾಯುಕ್ತ ದಾಳಿ!

ಈ ಬಾರಿ ಪ್ರತಿ ಶಾಸಕರಿಗೆ ರಾಜ್ಯ ಸರ್ಕಾರ  3 ಉಚಿತ ಐಪಿಎಲ್ ಟಿಕೆಟ್ಗಳನ್ನು ನೀಡುತ್ತಿದ್ದು, ಇದೀಗ  ಆ ಟಿಕೇಟ್ ಅನ್ನು ನಿರಾಕರಿಸಿ ಪತ್ರಿಕಾ ಪ್ರಕಟಣೆಯನ್ನು ಬಿಡುಗಡೆ ಮಾಡಿದ್ದಾರೆ

ಹೌದು ಹಿಂದೆ ಸದನದಲ್ಲಿ ಸ್ಪೀಕರ್ ಬಳಿ ಕೆಲ ಶಾಸಕರು ನಮಗೆ ಉಚಿತವಾಗಿ ಐಪಿಎಲ್  ಟಿಕೆಟ್ ಅನ್ನು ನೀಡಬೇಕೆಂದು ಪಟ್ಟು ಹಿಡಿದಿದ್ದರು. ಈ ಹಿನ್ನೆಲೆ ರಾಜ್ಯ ಸರ್ಕಾರ ಪ್ರತಿ ಶಾಸಕರಿಗೂ ಸಹ 3 ಟಿಕೆಟ್ ಅನ್ನು ಮೀಸಲಿಡಲು ನಿರ್ಧರಿಸಿತ್ತು. ಆದರೆ ಕೆಲ ಶಾಸಕರು ಅದನ್ನು ನಿರಾಕರಿಸಿದ್ದರು. ಇದೀಗ ಆ ಸಾಲಿಗೆ ಶಿವಮೊಗ್ಗ ಶಾಸಕ ಎಸ್ ಎನ್ ಚನ್ನಬಸಪ್ಪ ಸಹ ಸೇರ್ಪಡೆಯಾಗಿದ್ದಾರೆ.

MLA SN Channabasappa ಚೆನ್ನಿ ಟಿಕೆಟ್ ನಿರಾಕರಿಸಲು ಕಾರಣವೇನು.

ಈ ಕುರಿತು ಪತ್ರಿಕಾ ಪ್ರಕಟಣೆ ಬಿಡುಗಡೆಮಾಡಿರುವ ಅವರು ಕಳೆದ ವರ್ಷ ಇದೇ ಐಪಿಎಲ್ ಪಂದ್ಯದ ಸಂದರ್ಭದಲ್ಲಿ ನಡೆದ ದುರಂತದಲ್ಲಿ 11 ಜನ ಅಮಾಯಕರು ಪ್ರಾಣ ಕಳೆದುಕೊಂಡ ಘಟನೆಯ ಆಕ್ರಂದನ ಇಂದಿಗೂ ನನ್ನ ಕಿವಿಯಲ್ಲಿ ಮಾರ್ದನಿಸುತ್ತಿದೆ. ಆ ನೋವಿನ ನಡುವೆ ನಾವು ಐಪಿಎಲ್ ಟಿಕೆಟ್‌ಗಾಗಿ ಸದನದಲ್ಲಿ ಪಟ್ಟು ಹಿಡಿಯುವುದು ನಮ್ಮನ್ನು ಜನರ ದೃಷ್ಠಿಯಲ್ಲಿ ಇನ್ನಷ್ಟು ಕನಿಷ್ಠರನ್ನಾಗಿಸುತ್ತದೆ.

ಈ ಎಲ್ಲಾ ಹಿನ್ನಲೆಯಲ್ಲಿ ಹಾಗೂ ನನ್ನ ಆತ್ಮಸಾಕ್ಷಿಗೆ ಅನುಗುಣವಾಗಿ ಸರ್ಕಾರ ಅಥವಾ ಕೆ.ಎಸ್.ಸಿ.ಎ ವತಿಯಿಂದ ಶಾಸಕರಿಗೆ ನೀಡಲಾಗುವ ಐಪಿಎಲ್ ಪಂದ್ಯದ ಯಾವುದೇ ಪಾಸ್ ಅಥವಾ ಟಿಕೆಟ್‌ಗಳನ್ನು ನಾನು ಸವಿನಯವಾಗಿ ನಿರಾಕರಿಸುತ್ತಿದ್ದೇನೆ.

ಆದ್ದರಿಂದ, ದಯವಿಟ್ಟು ಮುಂಬರುವ ಐಪಿಎಲ್ ಪಂದ್ಯಗಳಿಗೆ ಸಂಬಂಧಿಸಿದಂತೆ  ನನ್ನ ಹೆಸರಿನಲ್ಲಿ ಯಾವುದೇ ಟಿಕೆಟ್ ಅಥವಾ ಪಾಸ್‌ಗಳನ್ನು ವಿತರಿಸಬಾರದೆಂದು ತಮ್ಮಲ್ಲಿ ಕೋರುತ್ತೇನೆ. ಎಂದು ಹೇಳಿದ್ದಾರೆ.

MLA SN Channabasappa Rejects Free IPL Tickets

MLA SN Channabasappa Rejects Free IPL Tickets
MLA SN Channabasappa Rejects Free IPL Tickets
shivamogga car decor sun control house
shivamogga car decor sun control house

This Article Written by / Prathapa thirthahalli - Malenadu Today : ತೀರ್ಥಹಳ್ಳಿ ತಾಲ್ಲೂಕು ಗಬಡಿ ಮೂಲದ ಪತ್ರಕರ್ತ ಪ್ರತಾಪ್ ತೀರ್ಥಹಳ್ಳಿ ಕಳೆದ ಮೂರು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸದ್ಯ ಮಲೆನಾಡು ಟುಡೆಯಲ್ಲಿ content producer ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

IPL Free Tickets,IPL Tragedy,Karnataka Politics,KSCA Passes,Shivamogga MLA,sn channabasappa

ಮುಂದಿನ ಸುದ್ದಿ ಒದಿ