ನಾರಾಯಣ ಹೃದಯಾಲಯದ ನರ್ಸ್ ಹೊಳೆಗೆ ಬಿದ್ದು ಸಾವು! ಮುಡುಬಾ ಬಳಿ ನಡೆದಿದ್ದೇನು!

ಹಂಚಿಕೊಳ್ಳಿ
WhatsApp Facebook X Telegram
Narayana Hrudayalaya Shivamogga Nurse dais jump into the river near Muduba ಶಿವಮೊಗ್ಗದ ನಾರಾಯಣ ಹೃದಯಾಲಯದಲ್ಲಿ ನರ್ಸ್ ಸಾವು
Narayana Hrudayalaya Shivamogga Nurse dais jump into the river near Muduba ಶಿವಮೊಗ್ಗದ ನಾರಾಯಣ ಹೃದಯಾಲಯದಲ್ಲಿ ನರ್ಸ್ ಸಾವು

ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್.ಪುರ ತಾಲೂಕಿನಲ್ಲಿ ನಿನ್ನೆ ನಡೆದ ಘಟನೆಯೊಂದು ಶಿವಮೊಗ್ಗದಲ್ಲಿಯು ಆಘಾತ ಮೂಡಸ್ತಿದೆ. ಶಿವಮೊಗ್ಗದ ನಾರಾಯಣ ಹೃದಯಾಲಯ ಆಸ್ಪತ್ರೆ ಯ ಉದ್ಯೋಗಿಯೊಬ್ಬರು ನಿನ್ನೆ ದಿನ ಹೊಳೆಗೆ ಹಾರಿ ಸಾವನ್ನಪ್ಪಿದ್ದಾರೆ. ಮುತ್ತಿನಕೊಪ್ಪ ಗ್ರಾಮದ ನಿವಾಸಿಯಾಗಿದ್ದ ನರ್ಸ್ ರನ್ಯಾ ಮೃತ ಗೃಹಿಣಿ. ಪತಿ ಹಾಗೂ 2 ಮಕ್ಕಳನ್ನು ಅಗಲಿರುವ ರನ್ಯಾ ತಮ್ಮ ಕುಟುಂಬದೊಂದಿಗೆ ಮುತ್ತಿನಕೊಪ್ಪದಲ್ಲಿ ವಾಸವಿದ್ದರು. ಅಲ್ಲಿಂದ ನಾರಾಯಣ ಹೃದಯಾಲಯಕ್ಕೆ ಓಡಾಡುತ್ತಾ ಕೆಲಸ ಮಾಡಿಕೊಂಡಿದ್ದರು.

Narayana Hrudayalaya Shivamogga Nurse dais jump into the river near Muduba ಶಿವಮೊಗ್ಗದ ನಾರಾಯಣ ಹೃದಯಾಲಯದಲ್ಲಿ ನರ್ಸ್ ಸಾವು
Narayana Hrudayalaya Shivamogga Nurse dais jump into the river near Muduba

ನಾರಾಯಣ ಹೃದಯಾಲಯದ ನರ್ಸ್ ರನ್ಯಾ ಸಾವು

ಮೃತ ರನ್ಯಾ ಬೇಸಿಲ್ ಸಂಜೆಯವರೆಗೂ ಆಸ್ಪತ್ರೆಯಲ್ಲಿ ಕೆಲಸವನ್ನು ಮುಗಿಸಿ, ಎಂದಿನಂತೆ ತಮ್ಮ ಮನೆಗೆ ಹಿಂದಿರುಗಿದ್ದರು. ಆನಂತರ ಮನೆಯಿಂದ ಮತ್ತೆ ಹೊರಬಂದ ಅವರು ಮುಡುಬ ಸಮೀಪವಿರುವ ಸೇತುವೆಯ ಮೇಲಿಂದ ಹೊಳೆಗೆ ಜಿಗಿದು ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದಾರೆ ಎಂದು ಸ್ಥಳೀಯರು ಹೇಳುತ್ತಿದ್ದಾರೆ.

ಈ ನಡುವೆ ಅವರಿಗೆ ಏನಾಯ್ತು! ಏಕಾಯೇಕಿ ಸಾಯುವಂತಹ ನಿರ್ಧಾರಕ್ಕೆ ಏಕೆ ಬಂದರು ಎಂಬುದು ಕುಟುಂಬಸ್ಥರಿಗೂ ಅನುಮಾನ ಮೂಡಿಸಿದೆ. ಸದ್ಯ ಪೊಲೀಸರು ಪ್ರತಿ ಆಯಾಮದಲ್ಲಿ ತನಿಖೆ ಆರಂಭಿಸಿದ್ದು ಮೃತರ ಮೊಬೈಲ್​ನಲ್ಲಿ ಇನ್ನಷ್ಟು ವಿಚಾರಗಳು ಸಿಗುವ ಸಾಧ್ಯತೆ ಇದೆ. ಎನ್.ಆರ್.ಪುರ ಪೊಲೀಸ್ ಠಾಣೆಯ ಅಧಿಕಾರಿಗಳು ಪ್ರಕರಣವನ್ನು ದಾಖಲಿಸಿಕೊಂಡಿದ್ದು, ತನಿಖೆಯನ್ನು ಮುಂದುವರಿಸಿದ್ದಾರೆ.

ನಮ್ಮ ಮಲೆನಾಡು ಟುಡೆಯ ವಿಡಿಯೋಗಳನ್ನು ನೀವಿಲ್ಲಿ ನೋಡಬಹುದು: https://www.youtube.com/shorts/x8I63rpLvyw

ಹಂಚಿಕೊಳ್ಳಿ
WhatsApp Facebook X Telegram
ajjimane ganesh
ಲೇಖಕರ ಬಗ್ಗೆ

ajjimane ganesh

Malenadu Today Contributor