ಸೊರಬ: ಮನೆಯಲ್ಲಿ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದ ತಾಲ್ಲೂಕಿನ ಹೊಡಬಟ್ಟೆ ಗ್ರಾಮದ 5 ತಿಂಗಳ ಗರ್ಭಿಣಿಯೊಬ್ಬರು ಆಸ್ಪತ್ರೆಯಲ್ಲಿ ಗುರುವಾರ ಮೃತಪಟ್ಟಿರುವ ಬಗ್ಗೆ ಮಲೆನಾಡು ಟುಡೆ ನಿನ್ನೆ ದಿನ ವರದಿ ಮಾಡಿತ್ತು. ಇದೀಗ ಅವರ ಸಾವಿನ ಪ್ರಕರಣದಲ್ಲಿ ಮತ್ತಷ್ಟು ಮಾಹಿತಿ ಲಭ್ಯವಾಗಿದೆ.

ಮಲೆನಾಡು ಟುಡೆಯಲ್ಲಿ ಈ ಸಂಬಂದ ಈ ಮೊದಲಿನ ವರದಿ : ಸೊರಬ: ಬೆಂಕಿ ಹಚ್ಚಿಕೊಂಡು ಆತ್ಮ*ಹತ್ಯೆಗೆ ಯತ್ನಿಸಿದ್ದ ನರ್ಸ್ ಸಾವು
ಉಡುಪಿಯ ಮಣಿಪಾಲ ಆಸ್ಪತ್ರೆಯಲ್ಲಿ ಕೊನೆಯುಸಿರು
ಮೃತ ಶ್ವೇತಾ(30) ಮಾ.29ರಂದು ಆತ್ಮಹತ್ಯೆಗೆ ಪ್ರಯತ್ನಿಸಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಉಡುಪಿಯ ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮೂಲತಃ ಶಿಕಾರಿಪುರ ತಾಲ್ಲೂಕು ಸಂಡಾ ಗ್ರಾಮದವರಾದ ಶ್ವೇತಾ ಅವರನ್ನು ಹೊಡಬಟ್ಟೆ ಗ್ರಾಮದ ನವೀನ್ ಎಂಬುವವರಿಗೆ 2020ರ ಮೇ ತಿಂಗಳಲ್ಲಿ ಮದುವೆ ಮಾಡಿ ಕೊಡಲಾಗಿತ್ತು. ದಂಪತಿಗೆ ಒಂದು ಹೆಣ್ಣು ಮಗುವಿದ್ದು, ಖಾಸಗಿ ಆಸ್ಪತ್ರೆಯೊಂದರಲ್ಲಿ ಶ್ವೇತಾ ಸ್ಟಾಪ್ ನರ್ಸ್ ಆಗಿ ಕೆಲಸ ಮಾಡುತ್ತಿದ್ದರು.
ನಾಲ್ವರ ಬಂಧನ ಉಳಿದವರಿಗಾಗಿ ಹುಡುಕಾಟ
ಇದೀಗ ಶ್ವೇತಾ ಕುಟುಂಬಸ್ಥರು ಮಗಳ ಸಾವಿನ ವಿಚಾರದಲ್ಲಿ, ಕೊಲೆ ಆಗಿರಬಹುದು ಎಂಬ ಶಂಕೆ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಸೊರಬ ಪೊಲೀಸ್ ಠಾಣೆಯಲ್ಲಿ ಆರು ಜನರ ವಿರುದ್ಧ ಪ್ರಕರಣ ದಾಖಲಾಗಿದೆ. ಶ್ವೇತಾ ಮಾವ ಸಣ್ಣಪ್ಪ, ಅತ್ತೆ ಜಾನಕಿ, ಹೇಮಂತ್ ದಿವ್ಯಾ ಎಂಬುವವರನ್ನು ಬಂಧಿಸಿರುವ ಪೊಲೀಸರು, ತಲೆಮರೆಸಿಕೊಂಡವರಿಗಾಗಿ ಹುಡುಕಾಟ ನಡೆಸಿದ್ದಾರೆ.

ಆಸ್ತಿ ವಿಚಾರಕ್ಕೆ ಪತಿ ಮನೆಯವರಿಂದ ಕಿರುಕುಳ
ಮೃತರ ಕುಟುಂಬಸ್ಥರ ಪ್ರಕಾರ ಶ್ವೇತಾ ಅವರಿಗೆ ಅತ್ತೆ, ಮಾವ, ಬಾವ ಹಾಗೂ ಆತನ ಪತ್ನಿ ಕಿರುಕುಳ ನೀಡುತ್ತಿದ್ದರು. ಆಸ್ತಿ ವಿಚಾರದಲ್ಲಿ ಪ್ರತಿ ದಿನ ಜಗಳ ಆಡುತ್ತಿದ್ದರು. ಈ ವಿಚಾರವನ್ನು ನಮಗೆ ತಿಳಿಸಿದ್ದಳು. ಮನೆಯಲ್ಲಿ ಯಾರು ಇಲ್ಲದ ವೇಳೆ ಅವರೇ ಬೆಂಕಿ ಹಚ್ಚಿ ನಮ್ಮ ಮಗಳನ್ನು ಕೊಲೆ ಮಾಡಿದ್ದಾರೆ ಎಂಧು ದೂರಿದ್ದಾರೆ.
ಆತ್ಮಹತ್ಯೆಯಲ್ಲ ಕೊಲೆ ಶಂಕೆ! ಕುಟುಂಬಸ್ಥರ ಆತಂಕ
ತಮ್ಮ ಮಗಳು ಶ್ವೇತಾ ಆತ್ಮಹತ್ಯೆ ಮಾಡಿಕೊಳ್ಳುವಷ್ಟು ಹೇಡಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.ಆಕೆಯ ಅತ್ತೆ ಮತ್ತು ಮಾವ ತಮ್ಮ ಹಿರಿಯ ಮಗ ಹೇಮಂತ್ ಹಾಗೂ ಆತನ ಪತ್ನಿ ದಿವ್ಯಾ ಅವರ ಮೇಲಿನ ಒಲವಿನಿಂದಾಗಿ ಶ್ವೇತಾ ಇವರನ್ನು ಮನೆಯಿಂದ ಹೊರಹಾಕುವ ಉದ್ದೇಶ ಹೊಂದಿದ್ದರು. ಇದೇ ಕಾರಣಕ್ಕಾಗಿ ಆಕೆಯೊಂದಿಗೆ ಜಗಳವಾಡಿ ಬೆಂಕಿ ಹಚ್ಚಿ ಹತ್ಯೆಗೈದಿದ್ದಾರೆ ಎಂದು ದೂರಿದ್ದಾರೆ.
ಸೊರಬದಲ್ಲಿ 4 ತಿಂಗಳ ಗರ್ಭಿಣಿ ನರ್ಸ್ ಸಾವು: 4 ಆರೋಪಿಗಳ ಬಂಧನ 4 Months Pregnant Nurse Dies in Soraba 4 Arrested Over Murder Allegations
ನಮ್ಮ ಮಲೆನಾಡು ಟುಡೆಯ ವಿಡಿಯೋಗಳನ್ನು ನೀವಿಲ್ಲಿ ನೋಡಬಹುದು: https://www.youtube.com/shorts/x8I63rpLvyw