ಬಾಗಿಲು ತೆಗೆಯುತ್ತಿಲ್ಲ ಎಂದು ಪೊಲೀಸರಿಗೆ ಫೋನ್​ ಮಾಡಿದ ತಾಯಿ, ಜೀವ ಉಳಿಸಿದ ಪೊಲೀಸರು

This Article Written by / Prathapa thirthahalli / ಏಪ್ರಿಲ್ 1, 2026

Shivamogga 112 Police Save Youth's Life

ಶಿವಮೊಗ್ಗ : ಬಾತ್ರೂಮ್​ ನೊಳಗೆ ಸೇರಿಕೊಂಡ ಮಗ ಎಷ್ಟೇ ಕರೆದರೂ ಬಾಗಿಲು ತೆಗೆಯುತ್ತಿಲ್ಲ ಎಂದು ತಾಯಿಯೊಬ್ಬರು 112 ಪೊಲೀಸರಿಗೆ ಪೋನ್​​ ಮಾಡಿರುವ ಘಟನೆ ಜಯನಗರ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಈ ಹಿನ್ನೆಲೆ ಸ್ಥಳಕ್ಕೆ ಬಂದು ಯುವಕನ್ನು ವಿಚಾರಿಸಿದ ಪೊಲೀಸರಿಗೆ ಶಾಕ್​ ಎದುರಾಗಿದೆ.

ಶಿವಮೊಗ್ಗ: ಶಾಲಾ ಬಸ್ ಹರಿದು 18 ತಿಂಗಳ ಮಗು ಸಾವು

ಹೌದು ಈ ಘಟನೆ ಮಾರ್ಚ್​ 30 ಕ್ಕೆ ನಡೆದಿದ್ದು, ಮಗ ಮನೆಯ ಬಾತ್ರೂಮ್​ನೊಳಗೆ ಸೇರಿಕೊಂಡು ಬಾಗಿಲನ್ನು ಹಾಕಿಕೊಂಡಿದ್ದಾನೆ, ಸುಮಾರು ಸಮಯ ಕಳೆದರೂ ಸಹ ಮಗ ಬಾಗಿಲು ತೆರೆಯದ್ದಿದ್ದನ್ನು ಕಂಡು ಗಾಬರಿಯಾದ ತಾಯಿ ಬಾಗಿಲನ್ನು ಬಡೆದಿದ್ದಾರೆ, ಅಷ್ಟೇ ಅಲ್ಲದೆ ಬಾಗಿಲು ತೆರೆ ಎಂದು ಕೇಳಿಕೊಂಡಿದ್ದಾರೆ, ಎಷ್ಟೇ ಬಾಗಿಲು ಬಡೆದರು ಸಹ ಮಗ ಬಾಗಿಲು ತೆರೆಯದ ಕಾರಣ ತಾಯಿ ಗಾಬರಿಯಿಂದ ಕೂಡಲೇ 112 ಇ ಆರ್​ ವಿ ಪೊಲೀಸರಿಗೆ ಪೋನ್ ಮಾಡಿದ್ದಾರೆ.

ತಕ್ಷಣ ಸ್ಥಳಕ್ಕೆ ಧಾವಿಸಿದ ಪೊಲೀಸರು ಬಾಗಿಲನ್ನು ತೆರೆಸಿದ್ದಾರೆ. ಆಗ ಯುವಕ ನಾನು ಫಿನಾಯಿಲ್​ ಕುಡಿದಿದ್ದೇನೆ ಎಂದು ತಿಳಿಸಿದ್ದಾನೆ. ಕೂಡಲೇ ಸಮಯ ಪ್ರಜ್ಞೆ ಮೆರೆದ ಪೊಲೀಸರು  ಆತನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ ಪೊಲೀಸರು ಯುವಕನ ಜೀವವನ್ನು ಉಳಿಸಿದ್ದಾರೆ. 

Shivamogga 112 Police Save Youth’s Life

Shivamogga 112 Police Save Youth's Life
Shivamogga 112 Police Save Youth’s Life
shivamogga car decor sun control house
shivamogga car decor sun control house

This Article Written by / Prathapa thirthahalli - Malenadu Today : ತೀರ್ಥಹಳ್ಳಿ ತಾಲ್ಲೂಕು ಗಬಡಿ ಮೂಲದ ಪತ್ರಕರ್ತ ಪ್ರತಾಪ್ ತೀರ್ಥಹಳ್ಳಿ ಕಳೆದ ಮೂರು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸದ್ಯ ಮಲೆನಾಡು ಟುಡೆಯಲ್ಲಿ content producer ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

112 ERV Karnataka,Life saved by police,shivamogga police

ಮುಂದಿನ ಸುದ್ದಿ ಒದಿ