ಬೇಕರಿ ಉತ್ಪನ್ನಗಳ ತಯಾರಿಕೆಯ ಬಗ್ಗೆ ಆಸಕ್ತಿ ಇದೆಯೇ. ಹಾಗಾದ್ರೆ ಈ ಸುದ್ದಿ ಓದಿ

This Article Written by / Prathapa thirthahalli / ಮಾರ್ಚ್ 31, 2026

bakery Course Shimoga Learn Cake & Biscuit Making

bakery Course Shimoga ಶಿವಮೊಗ್ಗ : ನಿಮ್ಮಲ್ಲಿ ಅಡುಗೆ ಕಲೆ ಅಥವಾ ಬೇಕರಿ ಉದ್ಯಮದ ಬಗ್ಗೆ ಆಸಕ್ತಿ ಇದೆಯೇ? ಹಾಗಿದ್ದಲ್ಲಿ ಶಿವಮೊಗ್ಗದ ನವಿಲೆ ಕೃಷಿ ಮಹಾವಿದ್ಯಾಲಯವು ನಿಮಗಾಗಿ ವಿಶೇಷ ಕೌಶಲ್ಯಾಭಿವೃದ್ಧಿ ತರಬೇತಿಯನ್ನು ಆಯೋಜಿಸಿದೆ. ಏಪ್ರಿಲ್ 8ರಿಂದ ಮೇ 7ರವರೆಗೆ ಒಂದು ತಿಂಗಳ ಕಾಲ ವಿವಿಧ ಬೇಕರಿ ಖಾದ್ಯಗಳ ತಯಾರಿಕೆಯ ಬಗ್ಗೆ ತಜ್ಞರಿಂದ ಮಾರ್ಗದರ್ಶನ ನೀಡಲಾಗುವುದು.

ಪ್ರಖ್ಯಾತ ಜಾಹಿರಾತು ಉದ್ಯಮಿ, ಶಿವಮೊಗ್ಗದ ಆನಂದ್ ಸುಬ್ಬರಾವ್ ಇನ್ನಿಲ್ಲ! ಗುರುಗ್ರಾಮದಲ್ಲಿ 13ನೇ ಮಹಡಿಯಿಂದ ಜಿಗಿದು ಸಾವು!

ಈ ತರಬೇತಿಯಲ್ಲಿ ಬೆಣ್ಣೆ ಬಿಸ್ಕತ್ತು, ಕೋಕೊನಟ್ ಕುಕಿಸ್, ಮಸಾಲ ಬಿಸ್ಕತ್ತು ಸೇರಿದಂತೆ ವಿವಿಧ ಬಗೆಯ ಬಿಸ್ಕತ್ತುಗಳು ಹಾಗೂ ಬನಾನಾ ಕೇಕ್, ಪೇಸ್ಟ್ರೀ ಕೇಕ್, ಜೆಲ್ ಕೇಕ್ ಮುಂತಾದ ಕೇಕ್ ವೆರೈಟಿಗಳ ತಯಾರಿಕೆಯನ್ನು ಕಲಿಸಲಾಗುತ್ತದೆ. ಅಲ್ಲದೆ, ಬ್ರೆಡ್, ಪಿಜ್ಜಾ, ಪಪ್ ಪೇಸ್ಟ್ರೀ, ದಿಲ್ ಪಸಂದ್ ಹಾಗೂ ರಸ್ಕ್‌ನಂತಹ ವಾಣಿಜ್ಯ ಉತ್ಪನ್ನಗಳ ಬಗ್ಗೆಯೂ ಮಾಹಿತಿ ನೀಡಲಾಗುವುದು. 

ತರಬೇತಿಗೆ ಸೇರಬಯಸುವ ಆಸಕ್ತರು 4,500 ರೂಪಾಯಿಗಳ ಶುಲ್ಕವನ್ನು ಪಾವತಿಸಿ ಏಪ್ರಿಲ್ 7ರ ಒಳಗಾಗಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬೇಕು. ನೆನಪಿಡಿ, ಶಿಬಿರದ ಅವಧಿಯಲ್ಲಿ ಊಟ ಮತ್ತು ವಸತಿ ಸೌಲಭ್ಯವನ್ನು ಅಭ್ಯರ್ಥಿಗಳೇ ಸ್ವಂತವಾಗಿ ಮಾಡಿಕೊಳ್ಳಬೇಕಾಗುತ್ತದೆ. 

ಹೆಚ್ಚಿನ ವಿವರಗಳಿಗಾಗಿ ಮತ್ತು ನೋಂದಾವಣೆಗಾಗಿ ನವಿಲೆ ಕೃಷಿ ಮಹಾವಿದ್ಯಾಲಯದ ಡಾ. ಜಯಶ್ರೀ ಎಸ್. (ಮೊ: 94491 87763) ಅಥವಾ ಜಯಶಂಕರ (ಮೊ: 96865 55897) ಅವರನ್ನು ಸಂಪರ್ಕಿಸುವಂತೆ ಪ್ರಕಟಣೆಯಲ್ಲಿ ಕೋರಲಾಗಿದೆ. ಸ್ವಂತ ಉದ್ಯೋಗ ಪ್ರಾರಂಭಿಸುವ ಗುರಿ ಹೊಂದಿರುವವರಿಗೆ ಇದು ಉತ್ತಮ ವೇದಿಕೆಯಾಗಿದೆ.

bakery Course Shimoga Learn Cake & Biscuit Making

bakery Course Shimoga Learn Cake & Biscuit Making
bakery Course Shimoga Learn Cake & Biscuit Making
shivamogga car decor sun control house
shivamogga car decor sun control house

This Article Written by / Prathapa thirthahalli - Malenadu Today : ತೀರ್ಥಹಳ್ಳಿ ತಾಲ್ಲೂಕು ಗಬಡಿ ಮೂಲದ ಪತ್ರಕರ್ತ ಪ್ರತಾಪ್ ತೀರ್ಥಹಳ್ಳಿ ಕಳೆದ ಮೂರು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸದ್ಯ ಮಲೆನಾಡು ಟುಡೆಯಲ್ಲಿ content producer ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

Bakery training in Shimoga,how to make bakery items,Navile Agriculture College courses

ಮುಂದಿನ ಸುದ್ದಿ ಒದಿ