ರಾಗಿಗುಡ್ಡ ಸರ್ಕಲ್ ಬಳಿ ನಿಂತಿದ್ದವನ್ನ ಸ್ಟೇಷನ್​ಗೆ ಕರೆದೊಯ್ದ ಪೊಲೀಸ್! ಆಮೇಲೆ ಗೊತ್ತಾಯ್ತು ಅಸಲಿ ಸತ್ಯ!

ಹಂಚಿಕೊಳ್ಳಿ
WhatsApp Facebook X Telegram
112 Police Warn Garage Owner Over Delay in Bike Repair
shivamogga police

ಶಿವಮೊಗ್ಗ: ನಗರದ ರಾಗಿಗುಡ್ಡ ಸರ್ಕಲ್ ಬಳಿ ಸಾರ್ವಜನಿಕ ಸ್ಥಳದಲ್ಲಿ ಅನುಮಾನಾಸ್ಪದವಾಗಿ ವರ್ತಿಸುತ್ತಿದ್ದ ಯುವಕನೊಬ್ಬನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬಳಿಕ ತನಿಖೆ ನಡೆಸಿದಾಗ ಆತ ಗಾಂಜಾ ಸೇವಿಸಿರುವುದು ಗೊತ್ತಾಗಿದ್ದು ಆತನ ವಿರುದ್ಧ NDPS ಕಾಯಿದೆ ಅಡಿಯಲ್ಲಿ ಗ್ರಾಮಾಂತರ ಠಾಣೆಯ ಪೊಲೀಸರು ಕೇಸ್ ದಾಖಲಿಸಿದ್ದಾರೆ. 

Shivamogga Youth Arrested Near Ragigudda Circle for Consuming Ganja ಶಿವಮೊಗ್ಗ: ರಾಗಿಗುಡ್ಡ ಸರ್ಕಲ್ ಬಳಿ ಗಾಂಜಾ ಮತ್ತಿನಲ್ಲಿದ್ದ ಯುವಕ ಪೊಲೀಸರ ವಶಕ್ಕೆ
Shivamogga Youth Arrested Near Ragigudda Circle for Consuming Ganja ಶಿವಮೊಗ್ಗ: ರಾಗಿಗುಡ್ಡ ಸರ್ಕಲ್ ಬಳಿ ಗಾಂಜಾ ಮತ್ತಿನಲ್ಲಿದ್ದ ಯುವಕ ಪೊಲೀಸರ ವಶಕ್ಕೆ

ಏನಿದು ಪ್ರಕರಣ

ಬಂಧಿತ ಆರೋಪಿಯನ್ನು ರಾಗಿಗುಡ್ಡದ ನಿವಾಸಿಯಾಗಿದ್ದು,  ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯ ಸಿಬ್ಬಂದಿ ನೀರಂಜನ್ ಆರ್.  ಸಮೀರ್ ಕಾಶೀದ್ ಗಸ್ತು ತಿರುತ್ತಿದ್ದಾಗ ಇವರ ಕೈಗೆ ಸಿಕ್ಕಿಬಿದ್ದಿದ್ದಾನೆ. 

ಶಿವಮೊಗ್ಗ : ಅಸಲಿಗೆ ಅಡಿಕೆ ರೇಟು ಕರೆಕ್ಟ್​ ಆಗಿ ಎಷ್ಟಿದೆ!? ಏನಾಗ್ತಿದೆ?

ಮಾದಕ ವಸ್ತು ಸೇವಿಸುತ್ತಿರುವವರ ವಿರುದ್ದ ಕ್ರಮ ವಹಿಸ್ತಿದ್ದಾರೆ ಶಿವಮೊಗ್ಗ ಪೊಲೀಸರು. ಈ ಹಿನ್ನೆಲೆಯಲ್ಲಿ ಗ್ರಾಮಾಂತರ ಠಾಣೆಯ ಸಿಬ್ಬಂದಿ ರಾಗಿಗುಡ್ಡ, ನಾಗರತ್ನಮ್ಮ ಲೇಔಟ್, ಕುವೆಂಪುನಗರ, ಮಲ್ಲಿಕಾರ್ಜುನ ನಗರ ಸೇರಿದಂತೆ ವಿವಿಧ ಬಡಾವಣೆಗಳಲ್ಲಿ ಗಸ್ತು ತಿರುತ್ತಿದ್ದರು. ಆಗ  ರಾಗಿಗುಡ್ಡ ಸರ್ಕಲ್ ಬಳಿ  ಆರೋಪಿ ಅನುಮಾನಾಸ್ಪದ ರೀತಿಯಲ್ಲಿ ವರ್ತಿಸುತ್ತಿರುವುದು ಗಮನಕ್ಕೆ ಬಂದಿದೆ. ಆತನ ಬಳಿ ತೆರಳಿ ವಿಚಾರಣೆ ನಡೆಸಿದಾಗ, ಆತ ಗಾಂಜಾ ಸೇವಿಸಿರುವ ಬಗ್ಗೆ ಅನುಮಾನ ಮೂಡಿದೆ. ಹೀಗಾಗಿ ಆತನನ್ನು ಠಾಣೆಗೆ ಕರೆತಂದು ವಿಚಾರಿಸಿದ್ದಾರೆ. ಬಳಿಕ ಮೆಡಿಕಲ್ ಟೆಸ್ಟ್ ಮಾಡಿಸಿದಾಗ ಆತ ಗಾಂಜಾ ಸೇವಿಸಿರುವುದು ಗೊತ್ತಾಗಿದೆ. ಈ ಹಿನ್ನೆಲೆಯಲ್ಲಿ ನಾರ್ಕೋಟಿಕ್ ಡ್ರಗ್ಸ್ ಅಂಡ್ ಸೈಕೋಟ್ರೋಪಿಕ್ ಸಬ್‌ಸ್ಟೆನ್ಸಸ್ (NDPS) ಕಾಯ್ದೆ 1985 ರ ಸೆಕ್ಷನ್ 27(b) ಅಡಿಯಲ್ಲಿ ಕೇಸ್ ದಾಖಲಿಸಿದ್ದಾರೆ. 

21 ವರ್ಷದ ಯುವಕನಿಗೆ 20 ವರ್ಷ ಜೈಲು, 50 ಸಾವಿರ ದಂಡ! ಶಿವಮೊಗ್ಗ ಕೋರ್ಟ್ ಆದೇಶ

ಮಲೆನಾಡು ಟುಡೆ ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ದ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಸುದ್ದಿಗಳಿಂದ ಸ್ತಳೀಯ ವಿಶೇಷ ವಿಡಿಯೋ ಸುದ್ದಿಗಳನ್ನು ನೀವು ನೋಡಬಹುದು…ಇಲ್ಲಿದೆ ಅವುಗಳ ಲಿಂಕ್  Facebook whatsapp  , whatsapp chanel  instagram,  youtube,  telegram , ನಮ್ಮದು ಅಧಿಕೃತವಾದ ಮತ್ತು ಉತ್ಪ್ರೇಕ್ಷೆಗಳಲ್ಲಿದ ನೈಜ ಸುದ್ದಿಯ ಸಂಸ್ಥೆ. ನಮ್ಮ ಬಗ್ಗೆ  google business, ನಲ್ಲಿ ಮಾಹಿತಿ ಪಡೆಯಬಹುದು. ಅಲ್ಲದೆ   malenadu today epaper malenadutoday web ನಲ್ಲಿ ಆಯಾ ದಿನದ ಈ ಪೇಪರ್​ಗಳನ್ನು ಕ್ಲಿಕ್ ಮಾಡಿ ಓದಬಹುದು.

Shivamogga Youth Arrested Near Ragigudda Circle for Consuming Ganja ಶಿವಮೊಗ್ಗ: ರಾಗಿಗುಡ್ಡ ಸರ್ಕಲ್ ಬಳಿ ಗಾಂಜಾ ಮತ್ತಿನಲ್ಲಿದ್ದ ಯುವಕ ಪೊಲೀಸರ ವಶಕ್ಕೆ
ಹಂಚಿಕೊಳ್ಳಿ
WhatsApp Facebook X Telegram
ajjimane ganesh
ಲೇಖಕರ ಬಗ್ಗೆ

ajjimane ganesh

Malenadu Today Contributor