ಮೃತ ಮಹಮ್ಮದ್ ತಮೀಮ್ ಮನೆಗೆ ತೆರಳಿ ಕೈ ಮುಗಿದು ಸಾಂತ್ವನದ ಮಾತನಾಡಿದ ಶಾಸಕ!

ಹಂಚಿಕೊಳ್ಳಿ
WhatsApp Facebook X Telegram
MLA Belur Gopalakrishna visited
MLA Belur Gopalakrishna visited

 ರಿಪ್ಪನ್‌ಪೇಟೆ / ಬರುವೆ ಗ್ರಾಮದಲ್ಲಿ ವಿದ್ಯಾರ್ಥಿ ಸಾವಿನ ಘಟನೆ ಶೋಕ ಮೂಡಿಸಿದೆ. ಈ ನಡುವೆ ಗ್ರಾಮಕ್ಕೆ ಭೇಟಿಕೊಟ್ಟ ಶಾಸಕ ಬೇಳೂರು ಗೋಪಾಲಕೃಷ್ಣ, ಮೃತ ವಿದ್ಯಾರ್ಥಿ ಮನೆಗೆ ತೆರಳಿ ಸಾಂತ್ವನ ಹೇಳಿದ್ದಾರೆ. 

MLA Belur Gopalakrishna visited Tameem family to offer condolences?
MLA Belur Gopalakrishna visited Tameem family to offer condolences?

ನಡೆದ ಘಟನೆ 

ಕೆರೆಗೆ ಆಕಸ್ಮಿಕವಾಗಿ ಕಾಲುಜಾರಿ ಬಿದ್ದು ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಯೊಬ್ಬ ನಿನ್ನೆ ಶುಕ್ರವಾರ ಮೃತಪಟ್ಟಿದ್ದ. ಮದೀನಾ ಕಾಲೋನಿಯ ನಿವಾಸಿ ಮಹಮ್ಮದ್ ತಮೀಮ್ ಮೃತಪಟ್ಟ ವಿದ್ಯಾರ್ಥಿಚೌಡೇಶ್ವರಿ ಬೀದಿಗೆ ಟ್ಯೂಷನ್‌ಗೆಂದು ತೆರಳಿದ್ದ ತಮೀಮ್, ತರಗತಿ ಮುಗಿದ ಬಳಿಕ ತನ್ನ ಸ್ನೇಹಿತರ ಜೊತೆಗೂಡಿ ಬರುವೆ ಗ್ರಾಮದ ದಿಬ್ಬದ ಕಡೆಗೆ ಹೋಗಿದ್ದ. ಆಗ ಕೆರೆ ಏರಿ ಮೇಲೆ ಹೋಗುತ್ತಿದ್ದ ಈತ ಕಾಲುಜಾರಿ ನೀರಿಗೆ ಬಿದ್ದಿದ್ದ.  

ಕಟ್ಟಡದಿಂದ ಬಿದ್ದು ವಿದ್ಯಾರ್ಥಿನಿ ಸಾವು! 8 ಮಂದಿ ವಿರುದ್ಧ FIR | ಏನಿದೆ ಆರೋಪ!

ಇನ್ನೂ ದುರ್ಘಟನೆಯ ವಿಚಾರ ತಿಳಿದು ಶಾಸಕ ಬೇಳೂರು ಗೋಪಾಲಕೃಷ್ಣ ಅವರು ಮದೀನಾ ಕಾಲೋನಿಯಲ್ಲಿರುವ ವಿದ್ಯಾರ್ಥಿಯ ಮನೆಗೆ ತೆರಳಿ ಪೋಷಕರಿಗೆ ಧೈರ್ಯ ತುಂಬಿದರು. ಸರ್ಕಾರದಿಂದ ಪರಿಹಾರ ಒದಗಿಸುವ ಮಾತನಾಡಿದ ಅವರು, ನಾವು ನಿಮ್ಮೊಂದಿಗೆ ಇದ್ದೇವೆ ಎಂದು ಸಾಂತ್ವನ ಹೇಳಿದ್ಧಾರೆ. ಶಾಸಕರ ಜೊತೆ  ಹೊಸನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಬಿ.ಜಿ. ಚಂದ್ರಮೌಳಿ, ಮುಖಂಡರುಗಳಾದ ಚೇತನ್ ರಾಜ್, ನಿರೂಪ್ ಕುಮಾರ್, ಆಸೀಫ್ ಭಾಷಾ ಹಾಗೂ ಶಾಸಕರ ಆಪ್ತ ಕಾರ್ಯದರ್ಶಿ ಸಣ್ಣಕ್ಕಿ ಮಂಜು ಸೇರಿದಂತೆ ಇನ್ನೊಂದಿಷ್ಟು ಗಣ್ಯರಿದ್ದರು

ಮಲೆನಾಡು ಟುಡೆ ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ದ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಸುದ್ದಿಗಳಿಂದ ಸ್ತಳೀಯ ವಿಶೇಷ ವಿಡಿಯೋ ಸುದ್ದಿಗಳನ್ನು ನೀವು ನೋಡಬಹುದು…ಇಲ್ಲಿದೆ ಅವುಗಳ ಲಿಂಕ್  Facebook whatsapp  , whatsapp chanel  instagram,  youtube,  telegram , ನಮ್ಮದು ಅಧಿಕೃತವಾದ ಮತ್ತು ಉತ್ಪ್ರೇಕ್ಷೆಗಳಲ್ಲಿದ ನೈಜ ಸುದ್ದಿಯ ಸಂಸ್ಥೆ. ನಮ್ಮ ಬಗ್ಗೆ  google business, ನಲ್ಲಿ ಮಾಹಿತಿ ಪಡೆಯಬಹುದು. ಅಲ್ಲದೆ   malenadu today epaper malenadutoday web ನಲ್ಲಿ ಆಯಾ ದಿನದ ಈ ಪೇಪರ್​ಗಳನ್ನು ಕ್ಲಿಕ್ ಮಾಡಿ ಓದಬಹುದು.

MLA Belur Gopalakrishna visited Tameem family to offer condolences?
ಹಂಚಿಕೊಳ್ಳಿ
WhatsApp Facebook X Telegram
ajjimane ganesh
ಲೇಖಕರ ಬಗ್ಗೆ

ajjimane ganesh

Malenadu Today Contributor