ರಸ್ತೆಯಲ್ಲಿ ಅಡ್ಡ ಬಂದ ಕಾಳಿಂಗ ಸರ್ಪ: ನಿಯಂತ್ರಣ ತಪ್ಪಿ ಪಲ್ಟಿಯಾದ ಅಡಿಕೆ ಲಾರಿ, ಚಾಲಕನ ನೆರವಿಗೆ ಧಾವಿಸಿದ ಶಾಸಕ ಆರಗ!

ಹಂಚಿಕೊಳ್ಳಿ
WhatsApp Facebook X Telegram
Thirthahalli King Cobra Crosses Road, Areca Truck Flip
Thirthahalli King Cobra Crosses Road, Areca Truck Flip

ತೀರ್ಥಹಳ್ಳಿ: ತೀರ್ಥಹಳ್ಳಿ-ಕೋಣಂದೂರು-ಅನಂತಪುರ ಮಾರ್ಗದ ಹಿರೇಸರ ಸಮೀಪ ಶನಿವಾರ ರಸ್ತೆಯಲ್ಲಿ ಬೃಹತ್ ಕಾಳಿಂಗ ಸರ್ಪ ಅಡ್ಡ ಬಂದ ಪರಿಣಾಮ, ಚಾಲಿ ಅಡಿಕೆ ತುಂಬಿದ್ದ ವಾಹನವೊಂದು ನಿಯಂತ್ರಣ ತಪ್ಪಿ ರಸ್ತೆಯಲ್ಲೇ ಪಲ್ಟಿಯಾಗಿದೆ.

ಶಿವಮೊಗ್ಗ : ಅಸಲಿಗೆ ಅಡಿಕೆ ರೇಟು ಕರೆಕ್ಟ್​ ಆಗಿ ಎಷ್ಟಿದೆ!? ಏನಾಗ್ತಿದೆ? 

ಸಾಗರದಿಂದ ಕಾರ್ಕಳದತ್ತ ಸಾಗುತ್ತಿದ್ದ ಈ ವಾಹನಕ್ಕೆ ಗುಡ್ಡೆಕೊಪ್ಪ ಸಮೀಪದ ಹಿರೇಸರದಲ್ಲಿ ಇದ್ದಕ್ಕಿದ್ದಂತೆ ಕಾಳಿಂಗ ಸರ್ಪ ಎದುರಾಗಿದೆ. ಹಾವನ್ನು ಕಂಡು ಆತಂಕಗೊಂಡ ಚಾಲಕ, ಹಾವಿನ ಜೀವ ಉಳಿಸುವ ಧಾವಂತದಲ್ಲಿ ಒಮ್ಮೆಲೇ ಬ್ರೇಕ್ ಹಾಕಿದ್ದಾರೆ. ಈ ವೇಳೆ ಭಾರೀ ಪ್ರಮಾಣದ ಅಡಿಕೆ ಲೋಡ್ ಹೊಂದಿದ್ದ ವಾಹನವು ಚಾಲಕನ ನಿಯಂತ್ರಣ ತಪ್ಪಿ ರಸ್ತೆಯಲ್ಲೇ ಉರುಳಿ ಬಿದ್ದಿದೆ. 

ಅದೇ ಸಮಯದಲ್ಲಿ ಕಾರ್ಯನಿಮಿತ್ತ ಆ ಮಾರ್ಗವಾಗಿ ಪ್ರಯಾಣಿಸುತ್ತಿದ್ದ ಮಾಜಿ ಸಚಿವರು ಹಾಗೂ ಶಾಸಕರಾದ ಆರಗ ಜ್ಞಾನೇಂದ್ರ ಅವರು ಕೂಡಲೇ ತಮ್ಮ ಕಾರನ್ನು ನಿಲ್ಲಿಸಿ ಸ್ಥಳಕ್ಕೆ ಧಾವಿಸಿದರು. ಅಪಘಾತದ ತೀವ್ರತೆ ಕಂಡು ಆತಂಕಗೊಂಡಿದ್ದ ಲಾರಿ ಚಾಲಕನನ್ನು ಮಾತನಾಡಿಸಿದ ಶಾಸಕರು, ಅವರಿಗೆ ಯಾವುದೇ ಗಾಯಗಳಾಗದಿರುವುದನ್ನು ಖಚಿತಪಡಿಸಿಕೊಂಡು ಧೈರ್ಯ ತುಂಬಿದರು. 

 ಅದೃಷ್ಟವಶಾತ್​​ ಈ ಘಟನೆಯಲ್ಲಿ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದು, ಕಾಳಿಂಗ ಸರ್ಪಕ್ಕೂ ಯಾವುದೇ ಹಾನಿಯಾಗಿಲ್ಲ ಎಂದು ತಿಳಿದುಬಂದಿದೆ.

Thirthahalli King Cobra Crosses Road, Areca Truck Flip

Thirthahalli King Cobra Crosses Road, Areca Truck Flip
Thirthahalli King Cobra Crosses Road, Areca Truck Flip
shivamogga car decor sun control house
shivamogga car decor sun control house
ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor