ಸಿಲಿಂಡರ್​ ಬೇಕಾ? ರೇಟು ಕಡಿಮೆ! ಕ್ಲಿಕ್​ ಮಾಡಿ ಎಂದು ಮೊಬೈಲ್​ಗೆ ಬರುವ ಲಿಂಕ್​ ಬಗ್ಗೆ ಎಸ್​ಪಿ ವಾರ್ನಿಂಗ್​!

Fake Gas Cylinder Links Cybercrime Alert / ಶಿವಮೊಗ್ಗ /ಮಲೆನಾಡು ಟುಡೆ ಸುದ್ದಿ / ಸೈಬರ್ ಅಪರಾಧಗಳು ಆಯಾ ಕಾಲದ ಟ್ರೆಂಡ್​ಗೆ ತಕ್ಕಂತೆ ಬದಲಾಗುತ್ತಿವೆ ಎನ್ನುವುದಕ್ಕೆ ಹೊಸದೊಂದು ಸಾಕ್ಷಿ ಸಿಕ್ಕಿದೆ. ಇದೀಗ ಕೊರತೆ ಬೀಳುತ್ತಿರುವ ಗ್ಯಾಸ್ ಸಿಲಿಂಡರ್ ವಿತರಣೆಯ ಹೆಸರಿನಲ್ಲಿ ಸಾರ್ವಜನಿಕರನ್ನು ಯಾಮಾರಿಸಲು ಮುಂದಾಗಿದ್ದಾರೆ. 

Shivamogga Police Warning Fake Gas Cylinder Links Cybercrime Alert Who is issuing the cybercrime alert what is the new gas cylinder scam when did the police warn the public, where should victims report
Shivamogga Police Warning Fake Gas Cylinder Links Cybercrime Alert Who is issuing the cybercrime alert what is the new gas cylinder scam when did the police warn the public, where should victims report

ಶಿವಮೊಗ್ಗ ,ಸಾಗರದಲ್ಲಿ ಅಡಿಕೆ ದರ ಏರಿಕೆ! ಉಳಿದೆಡೆ ಎಷ್ಟಿದೆ ಗಮನಿಸಿ ಅಡಿಕೆ ರೇಟು!

ಹೌದು,  ಸಾಮಾಜಿಕ ಜಾಲತಾಣಗಳಲ್ಲಿ  ಕಡಿಮೆ ಬೆಲೆಗೆ ಗ್ಯಾಸ್ ಸಿಲಿಂಡರ್ ಲಭ್ಯವಿದೆ (Fake Gas Cylinder Links Cybercrime Alert) ಎಂಬ ಸುಳ್ಳು ಸುದ್ದಿಗಳನ್ನು ಹರಿಬಿಡುತ್ತಿರುವ ಆಗಂತುಕರು, ಜನರನ್ನು ತಮ್ಮ ಜಾಲಕ್ಕೆ ಸಿಲುಕಿಸುವ ಪ್ರಯತ್ನ ಮಾಡುತ್ತಿದ್ದಾರೆ. ಇಂತಹ ಅಪರಿಚಿತ ಲಿಂಕ್‌ಗಳ ಬಗ್ಗೆ ಸಾರ್ವಜನಿಕರು ತೀವ್ರ ಎಚ್ಚರಿಕೆ ವಹಿಸಬೇಕು ಎಂದು ಶಿವಮೊಗ್ಗ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ನಿಖಿಲ್. ಬಿ ಎಚ್ಚರಿಕೆ ನೀಡಿದ್ದಾರೆ. 

ಈ ಕುರಿತು ಮಾಹಿತಿ ಹಂಚಿಕೊಂಡಿರುವ ಶಿವಮೊಗ್ಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್ ಬಿ. ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲ್ ಆಗುತ್ತಿರುವ ಇಂತಹ ಆಧಾರರಹಿತ ವದಂತಿಗಳಿಗೆ ಸಾರ್ವಜನಿಕರು ಕಿವಿಗೊಡಬಾರದು ಎಂದು ಮನವಿ ಮಾಡಿದ್ದಾರೆ. ಗ್ಯಾಸ್ ಸಿಲಿಂಡರ್ ಬೇಕಿದ್ದರೆ ಸಂಪರ್ಕಿಸಿ ಎಂದು ಮೊಬೈಲ್‌ಗಳಿಗೆ ಬರುವ ಯಾವುದೇ ಅಪರಿಚಿತ ಸಂದೇಶ ಅಥವಾ ಲಿಂಕ್‌ಗಳನ್ನು ಜನರು ನಂಬಬಾರದು ಹಾಗೂ ಅವುಗಳ ಮೇಲೆ ಕ್ಲಿಕ್ ಮಾಡಿ ತಮ್ಮ ವೈಯಕ್ತಿಕ ಮಾಹಿತಿ ಅಥವಾ ಹಣವನ್ನು ಕಳೆದುಕೊಳ್ಳಬಾರದು ಎಂದು ಅವರು ಎಚ್ಚರಿಸಿದ್ದಾರೆ. ಗ್ಯಾಸ್ ಸಿಲಿಂಡರ್ ಅಗತ್ಯವಿರುವ ಗ್ರಾಹಕರು ಕೇವಲ ತಮ್ಮ ಅಧಿಕೃತ ವಿತರಕರನ್ನು ಮಾತ್ರವೇ ನೇರವಾಗಿ ಸಂಪರ್ಕಿಸಿ ಸೇವೆ ಪಡೆಯಬೇಕು ಎಂದು ಸಲಹೆ ನೀಡಿದ್ಧಾರೆ.   

ಹವಾಮಾನ ಮುನ್ಸೂಚನೆ! ಶಿವಮೊಗ್ಗ : ಇನ್ನೈದು ದಿನ ಗುಡುಗು, ಗಾಳಿ, ಮಳೆ!

ಅನಧಿಕೃತ ವ್ಯಕ್ತಿಗಳು ನೀಡುವ ಆಮಿಷಗಳಿಗೆ ಬಲಿಯಾಗದಿರಿ. ಸೈಬರ್ ವಂಚನೆಗೆ ಸಂಬಂಧಿಸಿದಂತೆ ಯಾವುದೇ ಅನುಮಾನಗಳಿದ್ದಲ್ಲಿ ಅಥವಾ ತುರ್ತು ಪರಿಸ್ಥಿತಿ ಎದುರಾದಲ್ಲಿ ತಕ್ಷಣವೇ 112 ಸಹಾಯವಾಣಿಗೆ ಕರೆ ಮಾಡಿ ದೂರು ನೀಡಬಹುದು. ಜೊತೆಗೆ ಪಬ್ಲಿಕ್ ಐ ಮೂಲಕವೂ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ವರದಿ ಮಾಡುವ ಅವಕಾಶವನ್ನು ಕಲ್ಪಿಸಲಾಗಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡಿಸಿಕೊಳ್ಳಬಹುದು. 

ನಿಖಿಲ್.ಬಿ, ಶಿವಮೊಗ್ಗ ಎಸ್​ಪಿ

ಮಲೆನಾಡು ಟುಡೆ ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ದ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಸುದ್ದಿಗಳಿಂದ ಸ್ತಳೀಯ ವಿಶೇಷ ವಿಡಿಯೋ ಸುದ್ದಿಗಳನ್ನು ನೀವು ನೋಡಬಹುದು…ಇಲ್ಲಿದೆ ಅವುಗಳ ಲಿಂಕ್  Facebook whatsapp  , whatsapp chanel  instagram,  youtube,  telegram , ನಮ್ಮದು ಅಧಿಕೃತವಾದ ಮತ್ತು ಉತ್ಪ್ರೇಕ್ಷೆಗಳಲ್ಲಿದ ನೈಜ ಸುದ್ದಿಯ ಸಂಸ್ಥೆ. ನಮ್ಮ ಬಗ್ಗೆ  google business, ನಲ್ಲಿ ಮಾಹಿತಿ ಪಡೆಯಬಹುದು. ಅಲ್ಲದೆ   malenadu today epaper malenadutoday web ನಲ್ಲಿ ಆಯಾ ದಿನದ ಈ ಪೇಪರ್​ಗಳನ್ನು ಕ್ಲಿಕ್ ಮಾಡಿ ಓದಬಹುದು.

Shivamogga Police Warning Fake Gas Cylinder Links Cybercrime Alert Who is issuing the cybercrime alert what is the new gas cylinder scam when did the police warn the public, where should victims report