ರಿಪ್ಪನ್‌ಪೇಟೆ: ರೈಲಿಗೆ ಸಿಲುಕಿ ನಿವೃತ್ತ ಸರ್ಕಾರಿ ನೌಕರ ಸಾವು 

ರಿಪ್ಪನ್‌ಪೇಟೆ: ಸಮೀಪದ ನೆವಟೂರು ಗ್ರಾಮದಲ್ಲಿ ಶನಿವಾರ ಮಧ್ಯಾಹ್ನ ಸಂಭವಿಸಿದ ರೈಲು ಅಪಘಾತದಲ್ಲಿ ವೃದ್ಧರೊಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೃತರನ್ನು ನೆವಟೂರು ನಿವಾಸಿ, ಮಾಜಿ ರಿಸರ್ವ್ ಪೊಲೀಸ್ ಹಾಗೂ ನಿವೃತ್ತ ವಿಲೇಜ್ ಅಕೌಂಟೆಂಟ್ ಎಂ. ಭದ್ರಾಚಾರ್ (74) ಎಂದು ಗುರುತಿಸಲಾಗಿದೆ. 

ಶಿವಮೊಗ್ಗ:  ಯುವಕನಿಗೆ 20 ವರ್ಷ ಜೈಲು ಶಿಕ್ಷೆ, 1 ಲಕ್ಷ ದಂಡ, ಕಾರಣವೇನು ಗೊತ್ತಾ,,?  

ಶನಿವಾರ ಮಧ್ಯಾಹ್ನ ಸುಮಾರು 3.30ರ ಸುಮಾರಿಗೆ ಈ ಘಟನೆ ಸಂಭವಿಸಿದೆ. ರೈಲು ಹಳಿ ದಾಟುತ್ತಿದ್ದ ಅಥವಾ ಹಳಿಯ ಮೇಲೆ ನಡೆಯುತ್ತಿದ್ದ ವೇಳೆ ವೇಗವಾಗಿ ಬಂದ ರೈಲು ಡಿಕ್ಕಿ ಹೊಡೆದಿದೆ. ಅಪಘಾತದ ತೀವ್ರತೆಗೆ ಭದ್ರಾಚಾರ್ ಅವರ ದೇಹವು ಛಿದ್ರಗೊಂಡಿದ್ದು, ತಲೆ ಮತ್ತು ಕಾಲುಗಳ ಭಾಗಕ್ಕೆ ತೀವ್ರ ಏಟು ಬಿದ್ದು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಮೃತರ ಕುಟುಂಬದ ಮೂಲಗಳ ಪ್ರಕಾರ, ಭದ್ರಾಚಾರ್ ಅವರು ಕಳೆದ ಕೆಲವು ಸಮಯದಿಂದ ಮಾನಸಿಕ ಅಸ್ವಸ್ಥತೆ ಮತ್ತು ಕಿವುಡುತನದ ಸಮಸ್ಯೆಯಿಂದ ಬಳಲುತ್ತಿದ್ದರು. ಬಹುಶಃ ಹಳಿಯ ಮೇಲೆ ನಡೆಯುವಾಗ ರೈಲು ಬರುವ ಶಬ್ದ ಅವರಿಗೆ ಕೇಳಿಸದ ಕಾರಣ ಈ ಅವಘಡ ಸಂಭವಿಸಿರಬಹುದು ಎಂದು ಶಂಕಿಸಲಾಗಿದೆ

ಘಟನಾ ಸ್ಥಳಕ್ಕೆ ರಿಪ್ಪನ್‌ಪೇಟೆ ಪಿಎಸ್‌ಐ ರಾಜುರೆಡ್ಡಿ ಹಾಗೂ ಸಿಬ್ಬಂದಿ ಭೇಟಿ ನೀಡಿ ಪ್ರಾಥಮಿಕ ಪರಿಶೀಲನೆ ನಡೆಸಿದ್ದಾರೆ. ರೈಲ್ವೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪ್ರಕರಣ ದಾಖಲಿಸಿಕೊಂಡಿದ್ದು, ಮುಂದಿನ ತನಿಖೆ ಕೈಗೊಂಡಿದ್ದಾರೆ. 

Ripponpete Retired Official Dies in Train Accident

Ripponpete Retired Official Dies in Train Accident
Ripponpete Retired Official Dies in Train Accident
shivamogga car decor sun control house
shivamogga car decor sun control house