ಮಹಿಳೆಯರ ಚಿತ್ರಕಲಾ ಸ್ಪರ್ದೆ, ತೀರ್ಥಹಳ್ಳಿಯ ಪ್ರಕೃತಿಗೆ ಮೊದಲ ಸ್ಥಾನ

ಹಂಚಿಕೊಳ್ಳಿ
WhatsApp Facebook X Telegram
Art Contest Thirthahalli Women Sweep Top Prizes
Art Contest Thirthahalli Women Sweep Top Prizes

ಶಿವಮೊಗ್ಗ: ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಶಿವಮೊಗ್ಗ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಜಿಲ್ಲಾಮಟ್ಟದ ಮಹಿಳಾ ಚಿತ್ರಕಲಾ ಸ್ಪರ್ಧೆಯಲ್ಲಿ ತೀರ್ಥಹಳ್ಳಿಯ ಪ್ರಕೃತಿ ಶೆಣೈ ಪ್ರಥಮ ಸ್ಥಾನ ಗಳಿಸಿದ್ದಾರೆ, ಹಾಗೆಯೇ ತೀರ್ಥಹಳ್ಳಿಯ ಭಾವನಾ ಹೊಳ್ಳ ದ್ವಿತೀಯ ಹಾಗೂ ತೀರ್ಥಹಳ್ಳಿಯ ಆಶಾ ಉಮೇಶ್ ತೃತೀಯ ಸ್ಥಾನವನ್ನು ತಮ್ಮದಾಗಿಸಿಕೊಂಡಿದ್ದಾರೆ. 

ಶಿವಮೊಗ್ಗ : ಮೇ 1ರಿಂದ ಇಂಡಿಗೋ ವಿಮಾನ ಸೇವೆ ಸ್ಥಗಿತ ಆಗುತ್ತಾ ?

ವಿಜೇತರಿಗೆ ಕ್ರಮವಾಗಿ 8 ಸಾವಿರ, 6 ಸಾವಿರ ಹಾಗೂ 4 ಸಾವಿರ ರೂಪಾಯಿ ನಗದು ಬಹುಮಾನ ಹಾಗೂ ಪ್ರಮಾಣ ಪತ್ರವನ್ನು ಮಾರ್ಚ್ 26 ರಂದು ನಡೆಯಲಿರುವ ಸಮಾರಂಭದಲ್ಲಿ ವಿತರಿಸಲಾಗುವುದು. ಇದರೊಂದಿಗೆ ಶಿಕಾರಿಪುರದ ಹೇಮಲತಮ್ಮ, ಶಿವಮೊಗ್ಗದ ಮನ್ವಿತಾ ಆರ್ ಮತ್ತು ಆನವಟ್ಟಿಯ ಶಾಲಿನಿ ನಾಯಕ್ ಅವರಿಗೆ ಸಮಾಧಾನಕರ ಬಹುಮಾನ ಘೋಷಿಸಲಾಗಿದೆ. 

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಜಿಲ್ಲಾ ಪಂಚಾಯತ್ ಸಿಇಒ ಹೇಮಂತ್ ಕುಮಾರ್ ಅವರು, “ಚಿತ್ರಕಲೆ ಎಂಬುದು ಕೇವಲ ಬಣ್ಣಗಳ ಆಟವಲ್ಲ ಅದು ಮನಸ್ಸಿಗೆ ಶಾಂತಿ ಮತ್ತು ಆನಂದ ನೀಡುವ ಅದ್ಭುತ ಮಾರ್ಗ” ಎಂದರು. ಮಹಿಳೆಯರು ಇಂತಹ ವೇದಿಕೆಗಳನ್ನು ಬಳಸಿಕೊಂಡು ತಮ್ಮಲ್ಲಿ ಅಡಗಿರುವ ಸೃಜನಶೀಲ ಪ್ರತಿಭೆಯನ್ನು ಜಗತ್ತಿಗೆ ಪರಿಚಯಿಸಬೇಕು ಎಂದು ಅವರು ಕರೆ ನೀಡಿದರು. 

ಈ ಸ್ಪರ್ಧೆಯಲ್ಲಿ ಜಿಲ್ಲೆಯ ವಿವಿಧ ಭಾಗಗಳಿಂದ ಒಟ್ಟು 74 ಮಹಿಳಾ ಕಲಾವಿದರು ಉತ್ಸಾಹದಿಂದ ಭಾಗವಹಿಸಿದ್ದರು. ಆಯೋಜಕರು ಒದಗಿಸಿದ್ದ 2×2.5 ಅಳತೆಯ ಕ್ಯಾನ್ವಾಸ್ ಮೇಲೆ ಮಹಿಳೆಯರು ತಮ್ಮ ಕಲ್ಪನಾ ಲೋಕವನ್ನು ಬಣ್ಣಗಳ ಮೂಲಕ ಅನಾವರಣಗೊಳಿಸಿದರು. ಕಾರ್ಯಕ್ರಮದಲ್ಲಿ ಜಿ.ಪಂ ಅಧಿಕಾರಿಗಳು ಹಾಗೂ ಕಲಾ ಆಸಕ್ತರು ಉಪಸ್ಥಿತರಿದ್ದರು.

 Art Contest Thirthahalli Women Sweep Top Prizes

ಪ್ರಕೃತಿ ಶೆಣೈ ತೀರ್ಥಹಳ್ಳಿ
 Art Contest ಪ್ರಕೃತಿ ಶೆಣೈ ತೀರ್ಥಹಳ್ಳಿ
ಭಾವನ ಹೊಳ್ಳ ತೀರ್ಥಹಳ್ಳಿ
 Art Contest ಭಾವನ ಹೊಳ್ಳ ತೀರ್ಥಹಳ್ಳಿ
ಆಶಾ ಉಮೇಶ್​ ತೀರ್ಥಹಳ್ಳಿ
ಆಶಾ ಉಮೇಶ್​ ತೀರ್ಥಹಳ್ಳಿ

ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor