SHIVAMOGGA NEWS TODAY

ನನ್ನ ಮೇಲೆ ದೇವರು ಬಂದಿದೆ ಎಂದು ಹಠ ಮಾಡಿದ ಮಹಿಳೆ. ಆಮೇಲೆ ಏನಾಯ್ತು?

Prathapa thirthahalli ಅಥಾರಿಟಿ: ಮಲೆನಾಡು ಟುಡೆ ಡೆಸ್ಕ್

ಶಿವಮೊಗ್ಗ: ನಗರದ ತುಂಗಾನಗರ ಪೊಲೀಸ್ ಠಾಣಾ ವ್ಯಾಪ್ತಿಯ ದೇವಸ್ಥಾನವೊಂದರಲ್ಲಿ ಮಹಿಳೆಯೊಬ್ಬರು ನನ್ನ ಮೇಲೆ ದೇವರು ಬಂದಿದೆ ಎಂದು ಹಠ ಮಾಡಿದ ಘಟನೆ ನಡೆದಿದೆ. ದೇವಸ್ಥಾನದಿಂದ ಕದಲಲು ಒಪ್ಪದ ಮಹಿಳೆಯನ್ನು ಪೊಲೀಸರು ಸುರಕ್ಷಿತವಾಗಿ ಬಸ್ ನಿಲ್ದಾಣಕ್ಕೆ ತಲುಪಿಸಿದ್ದಾರೆ. 

ಶಿವಮೊಗ್ಗ: ಒತ್ತುವರಿ ತೆರವು ನೆಪದಲ್ಲಿ ಫಸಲು ನೀಡುತ್ತಿದ್ದ 300 ಅಡಿಕೆ ಮರಗಳ ನಾಶ; ಮಾಲೀಕನ ಆಕ್ರೋಶ

ಮಾರ್ಚ್ 14ರಂದು ಈ ಘಟನೆ ಸಂಭವಿಸಿದೆ. ಮೂಲತಃ ಬೆಂಗಳೂರಿನವರಾದ ಮಹಿಳೆಯೊಬ್ಬರು ಶಿವಮೊಗ್ಗದ ತುಂಗಾನಗರ ವ್ಯಾಪ್ತಿಯ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ಈ ವೇಳೆ ಇದ್ದಕ್ಕಿದ್ದಂತೆ ವಿಚಿತ್ರವಾಗಿ ವರ್ತಿಸಲು ಆರಂಭಿಸಿದ ಅವರು, ನನ್ನ ಮೇಲೆ ದೇವರ ಆವಾಹನೆಯಾಗಿದೆ, ನಾನು ಇಲ್ಲಿಂದ ಎಲ್ಲಿಗೂ ಹೋಗುವುದಿಲ್ಲ ಎಂದು ದೇವಸ್ಥಾನದ ಆವರಣದಲ್ಲೇ ಕುಳಿತು ಹಠ ಹಿಡಿದಿದ್ದಾರೆ. 

ದೇವಸ್ಥಾನದ ಸಿಬ್ಬಂದಿ ಮತ್ತು ಸ್ಥಳೀಯರು ಎಷ್ಟೇ ಮನವೊಲಿಸಿದರೂ ಮಹಿಳೆ ದೇವಸ್ಥಾನ ಬಿಟ್ಟು ಹೊರಬರಲು ಒಪ್ಪಲಿಲ್ಲ. ಸ್ಥಳೀಯರು ತಕ್ಷಣ 112 ಇಆರ್‌ವಿ (ERV) ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಧಾವಿಸಿದ ಸಿಬ್ಬಂದಿಗಳು ಮಹಿಳೆಗೆ ಸಾಂತ್ವನ ಹೇಳಿ,  ಬಳಿಕ ಅವರನ್ನು ಬಸ್ ನಿಲ್ದಾಣಕ್ಕೆ ಕರೆತಂದು ಬೆಂಗಳೂರಿಗೆ ಹೋಗುವ ಬಸ್ ಹತ್ತಿಸಿ ಕಳುಹಿಸಿಕೊಟ್ಟಿದ್ದಾರೆ.

Shivamogga Woman Claims Divine Possession at Temple

Shivamogga Woman Claims Divine Possession at
Shivamogga Woman Claims Divine Possession at
shivamogga car decor sun control house
shivamogga car decor sun control house

Related News

🔔 Breaking News Alerts

ತಾಜಾ ಸುದ್ದಿಗಳನ್ನು ಮೊದಲು ಪಡೆಯಲು ನಮ್ಮ ನೋಟಿಫಿಕೇಶನ್ ಸೇವೆಯನ್ನು ಸಬ್‌ಸ್ಕ್ರೈಬ್ ಮಾಡಿ.

END OF STORY
ಮಲೆನಾಡು ಟುಡೆ ಫಾಲೋ ಮಾಡಿ

ತಾಜಾ ಸ್ಥಳೀಯ ಸುದ್ದಿಗಳಿಗಾಗಿ ನಮ್ಮ ಅಧಿಕೃತ ಚಾನೆಲ್‌ಗಳಿಗೆ ಸೇರಿ.

ಇತ್ತೀಚಿನ ವೀಡಿಯೊಗಳು
Prathapa thirthahalli

Prathapa thirthahalli - Malenadu Today : ತೀರ್ಥಹಳ್ಳಿ ತಾಲ್ಲೂಕು ಗಬಡಿ ಮೂಲದ ಪತ್ರಕರ್ತ ಪ್ರತಾಪ್ ತೀರ್ಥಹಳ್ಳಿ ಕಳೆದ ಮೂರು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸದ್ಯ ಮಲೆನಾಡು ಟುಡೆಯಲ್ಲಿ content producer ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.