ಶಿವಮೊಗ್ಗ /ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗದ ಸೀನಪ್ಪಶೆಟ್ಟಿ ಸರ್ಕಲ್ ಬಳಿ ಇರುವ ನಾನ್ವೆಜ್ ಪುಡ್ಕೋರ್ಟ್ನಲ್ಲಿ ಮಹಿಳಾ ವ್ಯಾಪಾರಿಯೊಬ್ಬರು ಮತ್ತು ಆಕೆಯ ಅಂಗಡಿಯ ಹುಡುಗನ ಮೇಲೆ ಹಲ್ಲೆ ಮಾಡಿ ಜೀವ ಬೆದರಿಕೆ ಹಾಕಲಾಗಿದೆ. ದಿನಾಂಕ 04-03-2026 ರಂದು ರಾತ್ರಿ ಹನ್ನೊಂದು ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ಘಟನೆಯಲ್ಲಿ ಬಿಸಿ ನಾನ್ವೆಜ್ ಪಾತ್ರೆಗಳನ್ನು ಬಳಸಿ ಹಲ್ಲೆ ಮಾಡಲಾಗಿದೆ. ಈ ಸಂಬಂಧ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ದೂರುದಾಖಲಾಗಿದ್ದು ಎಫ್ಐಆರ್ ದರ್ಜ್ ಆಗಿದೆ.

ಶಿವಮೊಗ್ಗ: ಬೈಕ್ ಅಪಘಾತ ,ಬಿಟಿವಿ ವರದಿಗಾರ ಅನಿಲ್ ನಿಧನ
ಏನಿದು ಘಟನೆ
ದೊಡ್ಡಪೇಟೆ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಬರರುವ ನಾನ್ವೆಜ್ ಪುಡ್ಕೋರ್ಟ್ನಲ್ಲಿ ವ್ಯಾಪಾರದ ವಿಚಾರವಾಗಿ ಹಲ್ಲೆ ನಡೆದಿದೆ. ನಗರದ ಪೆನ್ಷನ್ ಮೊಹಲ್ಲಾ ನಿವಾಸಿಯಾಗಿರುವ ಮಹಿಳೆಯೊಬ್ಬರು ಇಲ್ಲಿ ವ್ಯಾಪಾರ ನಡೆಸ್ತಿದ್ದಾರೆ. ಇವರ ಅಂಗಡಿಯ ಪಕ್ಕದಲ್ಲಿರುವ ಇನ್ನೊಂದು ವ್ಯಾಪಾರಸ್ಥರು ಹಲ್ಲೆ ನಡೆಸಿದ್ದಾರೆ. 10 ರಿಂದ 12 ವರ್ಷಗಳಿಂದ ವ್ಯಾಪಾರ ನಡೆಸ್ತಿರುವ ಮಹಿಳೆಯ ವ್ಯಾಪಾರಕ್ಕೆ ಅಡ್ಡಿ ಬಂದು ಹಲ್ಲೆ ನಡೆಸಲಾಗಿದೆ ಎಂದು ದೂರಲಾಗಿದೆ.
ಶಿವಮೊಗ್ಗ: ಉದ್ಯೋಗಾಕಾಂಕ್ಷಿಗಳಿಗೆ ಇಲ್ಲಿದೆ ಸುವರ್ಣಾವಕಾಶ ; ಮಿಸ್ ಮಾಡ್ಕೋಬೇಡಿ!
ಎಂದಿನಂತೆ ವ್ಯಾಪಾರ ಮಾಡುತ್ತಿದ್ದ ದೂರುದಾರ ಮಹಿಳೆ ತಮ್ಮ ವ್ಯಾಪಾರಕ್ಕೆ ಏಕೆ ತೊಂದರೆ ಕೊಡುತ್ತೀರಾ ಎಂದು ಕೇಳಿದ್ದಕ್ಕೆ ಪಕ್ಕದ ಅಂಗಡಿಯ ಯುವಕ ಮಹಿಳೆಯ ಅಂಗಡಿಯಲ್ಲಿದ್ದ ನಾನ್ವೆಜ್ ಪಾತ್ರೆ ಗಳಿಂದ ಹಲ್ಲೆ ಮಾಡಿದ್ದಾನೆ. ಅಲ್ಲದೆ ಹೊಡೆಯುತ್ತೇನೆ ಎಂದು ಅಂಗಡಿಯ ಹುಡುಗನ ಮೇಲೆ ಹಲ್ಲೆ ಮಾಡಿದ್ದಾನೆ. ದೂರಿನ ಪ್ರಕಾರ, ಪ್ರತಿನಿತ್ಯ ಪಕ್ಕದ ಅಂಗಡಿಯವರು ವ್ಯಾಪಾರಕ್ಕಾಗಿ ತೊಂದರೆ ಕೊಡುತ್ತಿದ್ದರಂತೆ. ಅಲ್ಲದೆ ಅಂಗಡಿಯ ಕೆಲಸಕ್ಕೆ ಬರುವ ಹುಡುಗರಿಗೆ ಕೆಲಸಕ್ಕೆ ಬರದಂತೆ ಬೆದರಿಕೆ ಹಾಕುತ್ತಿದ್ದರಂತೆ. ಇದೆ ವಿಷಯಕ್ಕೆ ಗಲಾಟೆಯಾಗಿದ್ದು, ಮಹಿಳೆಗೆ ಜೀವ ಬೆದರಿಕೆ ಸಹ ಹಾಕಲಾಗಿದೆ. ಈ ಬಗ್ಗೆ ದೊಡ್ಡಪೇಟೆ ಪೊಲೀಸ್ ಠಾಣೆಯ ಪೊಲೀಸರು ಎಫ್ಐಆರ್ ದಾಖಲಿಸಿ ಕ್ರಮ ಕೈಗೊಂಡಿದ್ದಾರೆ.

ಶಿವಮೊಗ್ಗ: ಬೈಕ್ ಅಪಘಾತ ,ಬಿಟಿವಿ ವರದಿಗಾರ ಅನಿಲ್ ನಿಧನ
ಶಿವಮೊಗ್ಗದಲ್ಲಿ ಬೀದಿ ಬದಿ ವ್ಯಾಪಾರಸ್ಥರಿಗೆಂದೆ ಜಿಲ್ಲಾಡಳಿತ ಹಾಗೂ ಪಾಲಿಕೆ ನಾನ್ವೆಜ್ ಪುಡ್ಕೋರ್ಟ್ ವ್ಯವಸ್ಥೆ ಮಾಡಿತ್ತು. ಆದರೆ ಇಲ್ಲಿ ಜೀವ ಬೆದರಿಕೆ ಹಾಕಿ ಹಲ್ಲೆ ಮಾಡುವಂತಹ ಘಟನೆ ನಡೆದಿರುವುದು ನಿಜಕ್ಕೂ ಸರಿಯಾದುದಲ್ಲ. ಘಟನೆಯಲ್ಲಿ ಅಲ್ಲಿದ್ದ ಗ್ರಾಹಕರಿಗೆ ಸಮಸ್ಯೆಯಾಗಬಹುದು ಎಂಬ ಅರಿವು ಇಲ್ಲದೆ ಹಲ್ಲೆ ನಡೆಸಲಾಗಿದೆ. ಘಟನೆಯ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಈ ದೃಶ್ಯವನ್ನು ಆಧರಿಸಿ ಭಾರತೀಯ ನ್ಯಾಯ ಸಂಹಿತೆ (BNS) 2023 ರ ಸೆಕ್ಷನ್ 109(1), 352, 118(1), 74, 351(2) ಹಾಗೂ 3(5) ರ ಅಡಿಯಲ್ಲಿ ದೊಡ್ಡಪೇಟೆ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ. ಅಲ್ಲದೆ ಗ್ರಾಹಕರಿಗೆ ತೊಂದರೆ ಕೊಡುವ ವ್ಯಾಪಾರಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಾಗುವುದು ಎಂದು ಎಚ್ಚರಿಸಿದ್ದಾರೆ. ಇನ್ನೂ ಸಂತ್ರಸ್ತ ಮಹಿಳೆಯು ಭಯದಲ್ಲಿದ್ದು, ಕಾನೂನಾತ್ಮಕ ರಕ್ಷಣೆಯಲ್ಲಿದ್ದಾರೆ. ಇನ್ನೂ ಮಹಿಳೆಯರಿಗೆ ಎದುರಾಗುವ ಈ ರೀತಿಯ ಅಚಾನಕ್ ಘಟನೆಗಳ ಸಂದರ್ಭದಲ್ಲಿ ಅಕ್ಕಪಡೆಯು ಪ್ರವೇಶ ಪಡೆದು ಸಮಸ್ಯೆ ಇತ್ಯರ್ಥಪಡಿಸುವ ಪ್ರಯತ್ನ ನಡೆಸಬೇಕಿದೆ.
