ಮಲೆನಾಡು ಟುಡೆ ಸುದ್ದಿ/ ಬದುಕುವ ಭರವಸೆಯನ್ನೇ ಸಂಪೂರ್ಣವಾಗಿ ಕಳೆದುಕೊಂಡು, ವೈದ್ಯರಿಂದ ‘ಬ್ರೆನ್-ಡೆಡ್’ (ಮೆದುಳು ನಿಷ್ಕ್ರಿಯ) ಎಂದು ಅಧಿಕೃತವಾಗಿ ಘೋಷಿಸಲ್ಪಟ್ಟಿದ್ದ ಉತ್ತರ ಪ್ರದೇಶದ 50 ವರ್ಷದ ಮಹಿಳೆಯೊಬ್ಬರಿಗೆ ಹೆದ್ದಾರಿಯಲ್ಲಿದ್ದ ಬೃಹತ್ ಗುಂಡಿಯೊಂದು ಅಕ್ಷರಶಃ ಪವಾಡಸದೃಶವಾಗಿ ಮರುಜೀವ ನೀಡಿದ ಘಟನೆಯ ಸುದ್ದಿಯೊಂದು ಇದೀಗ ದೇಶದೆಲ್ಲೆಡೆ ವೈರಲ್ ಆಗುತ್ತಿದೆ.

ಶಿವಮೊಗ್ಗ : 22 ವರ್ಷದ ಯುವಕನಿಗೆ 20 ವರ್ಷ ಸೆರೆವಾಸ! ಮದುವೆಯಾಗಿದ್ದರೂ ತಪ್ಪಲ್ಲ ಶಿಕ್ಷೆ
ನಡೆದಿದ್ದೇನು? /Woman Revives After Ambulance Hits PotHole
ಪಿಲಿಭಿತ್‌ನ ನ್ಯಾಯಾಲಯವೊಂದರಲ್ಲಿ ಹಿರಿಯ ಸಹಾಯಕಿ ಆಗಿ ಕೆಲಸ ಮಾಡುತ್ತಿದ್ದ ವಿನೀತಾ ಶುಕ್ಲಾ ಎಂಬುವವರು ಫೆಬ್ರವರಿ 22 ರಂದು ಸಂಜೆ ಮನೆಯಲ್ಲಿ ಕೆಲಸ ಮಾಡುತ್ತಿದ್ದಾಗ ದಿಢೀರ್ ಪ್ರಜ್ಞೆ ತಪ್ಪಿ ಬಿದ್ದಿದ್ದರು. ಅವರ ಕುಟುಂಬಸ್ಥರು ತಕ್ಷಣ ಅವರನ್ನು ಪಿಲಿಭಿತ್‌ನ ಸ್ವಾಯತ್ತ ರಾಜ್ಯ ವೈದ್ಯಕೀಯ ಕಾಲೇಜಿಗೆ ಕರೆದೊಯ್ದರು, ಅಲ್ಲಿಂದ ವೈದ್ಯರು ಅವರನ್ನು ಬರೇಲಿಯ ಸುಧಾರಿತ ವೈದ್ಯಕೀಯ ಆಸ್ಪತ್ರೆಗೆ ದಾಖಲಿಸುವಂತೆ ಸೂಚಿಸಿದರು.
ಬರೇಲಿಯ ಆಸ್ಪತ್ರೆಯಲ್ಲಿ ವೈದ್ಯರು ಆಕೆಯ ಮೆದುಳು ನಿಷ್ಕ್ರಿಯಗೊಂಡಿದೆ ಯಾವುದೇ ಲಕ್ಷಣಗಳಿಲ್ಲ, ಬದುಕುಳಿಯುವ ಸಾಧ್ಯತೆ ಇಲ್ಲ ಎಂದು ತಿಳಿಸಿ ಡಿಸ್ಟಾರ್ಜ್ ಮಾಡಿದ್ದರು. ಕೊನೆಯ ಹೋಪ್ ಕೂಡ ಕಳೆದುಕೊಂಡಿದ್ದ ಕುಟುಂಬಸ್ಥರು ಫೆಬ್ರವರಿ 24 ರಂದು ಆಂಬ್ಯುಲೆನ್ಸ್‌ನಲ್ಲಿ ವೀನೀತಾರವರನ್ನು ಮನೆಗೆ ಕರೆತರುತ್ತಿದ್ದರು.

ಬರೇಲಿ-ಹರಿದ್ವಾರ ರಾಷ್ಟ್ರೀಯ ಹೆದ್ದಾರಿ 74 ರ ಹಫೀಜ್ ಗಂಜ್ ಬಳಿ ಆಂಬ್ಯುಲೆನ್ಸ್ ಬರುತ್ತಿದ್ದಾಗ, ಗುಂಡಿಗಳಿಂದ ಕೂಡಿದ್ದ ರಸ್ತೆಯಲ್ಲಿನ ದೊಡ್ಡ ಗುಂಡಿಗೆ ವಾಹನ ಅಪ್ಪಳಿಸಿ ಜೋರಾಗಿ ಕುಲುಕಾಡಿದೆ. ಈ ಕುಲುಕಾಟದಿಂದಾಗಿ ಆಶ್ಚರ್ಯಕರ ರೀತಿಯಲ್ಲಿ ವಿನೀತಾ ಶುಕ್ಲಾ ಅವರು ಮತ್ತೆ ಸಹಜವಾಗಿ ಉಸಿರಾಡಲು ಆರಂಭಿಸಿದ್ದಾರೆ.
ತಕ್ಷಣವೇ ಕುಟುಂಬಸ್ಥರು ಪುನಃ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಅಲ್ಲಿ ವಿವಿಧ ಪರೀಕ್ಷೆಗಳ ಬಳಿಕ ಮತ್ತೆ ಚಿಕಿತ್ಸೆ ಆರಂಭಿಸಿದ್ದಾರೆ. ಅಂತಿಮವಾಗಿ ವಿನೀತಾ ಗುಣಮುಖಗೊಂಡು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಅವರು ಗುಣಮುಖವಾದ ಫೋಟೋ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗುತ್ತಿದೆ.
