RTO ಹೆಸರಲ್ಲಿ ಎ.ಪಿ.ಕೆ ಫೈಲ್​​ ಬರ್ತಿದ್ದೀಯಾ, ಹಾಗಾದ್ರೆ ಈ ಸುದ್ದಿ ನೋಡಿ 

Published: 09 ಮಾರ್ಚ್ 2026, 2:18 ಅಪರಾಹ್ನ • 1 min read

ಶಿವಮೊಗ್ಗ : ಇತ್ತೀಚಿನ ದಿನಗಳಲ್ಲಿ ಸೈಬರ್​ ವಂಚಕರು ಸಾರ್ವಜನಿಕರ ಬಳಿ ಹೊಸ ಹೊಸ ರೀತಿಯಲ್ಲಿ ಹಣ ಪೀಕಿಸುವ ಸಂಚನ್ನು ಹೂಡುತ್ತಿದ್ದಾರೆ. ಅದರಲ್ಲಿ ಆರ್​​ ಟಿ ಓ ಅಧಿಕಾರಿಗಳ ಸೋಗಿನಲ್ಲಿ ಎಪಿಕೆ ಫೈಲ್​ ಕಳುಹಿಸುವ ತಂತ್ರವೂ ಸಹ ಒಂದಾಗಿದ್ದು, ಈ ಮೋಸದ ಜಾಲದ ಕುರಿತಾಗಿ ಎಚ್ಚರಿಕೆಯಿಂದ ಇರುವಂತೆ ಶಿವಮೊಗ್ಗ ಎಸ್​ ಪಿ ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ.

ಶಿವಮೊಗ್ಗ: ಬ್ಯಾಂಕ್​ ಡಿಟೈಲ್ಸ್​ ನೀಡ್ತಿದ್ದೀರಾ, ಹಾಗಾದ್ರೆ ನೀಮ್ಮೇಲೂ ಬಿಳ್ಬೋದು ಕೇಸ್​, ಮ್ಯೂಲ್​ ಅಕೌಂಟ್​ ಬಗ್ಗೆ ಎಸ್​, ಪಿ ಎಚ್ಚರಿಕೆ

ಮೊದಲು ನೀವು  ಸಂಚಾರ ನಿಯಮ ಉಲ್ಲಂಘಿಸಿದ್ದೀರಿ ಮತ್ತು ದಂಡ ಪಾವತಿಸುವುದು ಬಾಕಿ ಇದೆ ಎಂಬ ನಕಲಿ ಎಸ್‌ಎಂಎಸ್ ಕಳುಹಿಸುವ ಮೂಲಕ ವಂಚಕರು ಬಲೆ ಬೀಸುತ್ತಾರೆ. ಈ ಸಂದೇಶಗಳು ನೋಡಲು ಅಧಿಕೃತ ಇಲಾಖೆಯ ಪ್ರಕಟಣೆಯಂತೆಯೇ ಇರುವುದರಿಂದ ಸಾರ್ವಜನಿಕರು ಸುಲಭವಾಗಿ ನಂಬಿ ಮೋಸಹೋಗುತ್ತಿದ್ದಾರೆ.

ಈ ನಕಲಿ ಸಂದೇಶಗಳಲ್ಲಿ ಒಂದು ಎಪಿಕೆ (APK) ಫೈಲ್ ಲಿಂಕ್ ಇರುತ್ತದೆ. ಕಾನೂನು ಕ್ರಮದ ಭಯದಿಂದ ಜನರು ಈ ಲಿಂಕ್ ಕ್ಲಿಕ್ ಮಾಡಿ ಆಪ್ ಇನ್‌ಸ್ಟಾಲ್ ಮಾಡಿದ ಕೂಡಲೇ, ವಂಚಕರು ನಿಮ್ಮ ಮೊಬೈಲ್‌ನ ಓಟಿಪಿ, ಮೆಸೇಜ್‌ಗಳು, ಕಾಂಟ್ಯಾಕ್ಟ್ ಹಾಗೂ ಬ್ಯಾಂಕಿಂಗ್ ಅಪ್ಲಿಕೇಶನ್‌ಗಳ ಮೇಲೆ ಸಂಪೂರ್ಣ ನಿಯಂತ್ರಣ ಸಾಧಿಸುತ್ತಾರೆ. ನಂತರ ಕ್ಷಣಾರ್ಧದಲ್ಲಿ ನಿಮ್ಮ ಬ್ಯಾಂಕ್ ಖಾತೆಯಲ್ಲಿರುವ ಹಣವನ್ನು ದೋಚುತ್ತಾರೆ. ಹಾಗಾಗಿ ಯಾವುದೇ ಅಪರಿಚಿತ ಲಿಂಕ್‌ಗಳನ್ನು ಕ್ಲಿಕ್ ಮಾಡಬಾರದು ಮತ್ತು ಇಂತಹ ಸಂದೇಶಗಳು ಬಂದರೆ ತಕ್ಷಣವೇ 1930 ಸಹಾಯವಾಣಿಗೆ ಕರೆ ಮಾಡಿ ದೂರು ನೀಡಬೇಕು ಎಂದು ಪೊಲೀಸ್ ಇಲಾಖೆ ಮನವಿ ಮಾಡಿದೆ.

RTO APK Scam Warning Shivamogga Police Alert

RTO APK Scam Warning Shivamogga Police Alert
RTO APK Scam Warning Shivamogga Police Alert

Related News

🔔 Breaking News Alerts

ತಾಜಾ ಸುದ್ದಿಗಳನ್ನು ಮೊದಲು ಪಡೆಯಲು ನಮ್ಮ ನೋಟಿಫಿಕೇಶನ್ ಸೇವೆಯನ್ನು ಸಬ್‌ಸ್ಕ್ರೈಬ್ ಮಾಡಿ.

END OF STORY

Prathapa thirthahalli

Senior Journalist | Malenadu Today
✓ Verified Journalist