ನಾಳೆ ವರ್ಷದ ಮೊದಲ ಕೇತುಗ್ರಸ್ತ ಚಂದ್ರಗ್ರಹಣ : ಸಮಯ ಮತ್ತು ಪಾಲಿಸಬೇಕಾದ ನಿಯಮಗಳ ಪೂರ್ಣ ವಿವರ ಇಲ್ಲಿದೆ

Ketugrasta Chandra Grahan ನಾಳೆ ಅಂದರೆ ಮಾರ್ಚ್ 3ರಂದು ವಿಶ್ವದಾದ್ಯಂತ ಅತ್ಯಂತ ವಿಶಿಷ್ಟವಾದ ಕೇತುಗ್ರಸ್ತ ಚಂದ್ರಗ್ರಹಣ ಸಂಭವಿಸಲಿದೆ. ಈ ಬಾರಿಯ ವಿಶೇಷವೇನೆಂದರೆ, ಹೋಳಿ ಹಬ್ಬದ ದಿನವೇ ಈ ಗ್ರಹಣ ಗೋಚರಿಸುತ್ತಿರುವುದು ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಕುತೂಹಲಕ್ಕೆ ಕಾರಣವಾಗಿದೆ. ಭಾರತದಲ್ಲಿ ಚಂದ್ರೋದಯದ ವೇಳೆಗೆ ಈ ಗ್ರಹಣವು ಗೋಚರವಾಗಲಿದ್ದು, ಶಾಸ್ತ್ರದ ನಿಯಮದಂತೆ ಬೆಳಿಗ್ಗೆಯಿಂದಲೇ ಸೂತಕದ ಕಾಲ ಆರಂಭವಾಗಲಿದೆ. 

ಶಿವಮೊಗ್ಗ: ವೀಲಿಂಗ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಪೋಸ್ಟ್, ಬಿತ್ತು ದಂಡ

ಸಮಯದ ಲೆಕ್ಕಾಚಾರದ ಪ್ರಕಾರ, ಮಾರ್ಚ್ 3ರ ಮಂಗಳವಾರ ಬೆಳಿಗ್ಗೆ 9:39 ಗಂಟೆಯಿಂದಲೇ ಸೂತಕದ ಅವಧಿ ಪ್ರಾರಂಭವಾಗಲಿದೆ. ಭಾರತದಲ್ಲಿ ಸಂಜೆ 6:26ಕ್ಕೆ ಚಂದ್ರೋದಯದೊಂದಿಗೆ ಗ್ರಹಣವು ಆರಂಭಗೊಂಡು, ಸಂಜೆ 6:46ಕ್ಕೆ ಮುಕ್ತಾಯವಾಗಲಿದೆ. ಗ್ರಹಣ ಮುಗಿಯುತ್ತಿದ್ದಂತೆ ಸೂತಕದ ಅವಧಿಯೂ ಕೊನೆಗೊಳ್ಳಲಿದೆ. ಸಾಮಾನ್ಯರಿಗೆ ಬೆಳಿಗ್ಗೆಯಿಂದಲೇ ಸೂತಕವಿದ್ದರೂ, ಮಕ್ಕಳು, ಹಿರಿಯರು ಮತ್ತು ಅನಾರೋಗ್ಯದಿಂದ ಬಳಲುವವರಿಗೆ ಮಾತ್ರ ಮಧ್ಯಾಹ್ನ 3:28 ರಿಂದ ಈ ನಿಯಮಗಳು ಅನ್ವಯವಾಗುತ್ತವೆ ಎಂದು ಪಂಡಿತರು ತಿಳಿಸಿದ್ದಾರೆ. 

ಗ್ರಹಣ ಮತ್ತು ಸೂತಕದ ಈ ಸಮಯದಲ್ಲಿ ಕೆಲವು ನಿರ್ಬಂಧಗಳನ್ನು ಪಾಲಿಸುವುದು ಅಗತ್ಯವೆಂದು ಹೇಳಲಾಗುತ್ತದೆ. ಈ ಅವಧಿಯಲ್ಲಿ ಎಲ್ಲಾ ದೇವಸ್ಥಾನಗಳ ಬಾಗಿಲು ಮುಚ್ಚಿರುತ್ತವೆ ಹಾಗೂ ಯಾವುದೇ ಮಂಗಳಕರ ಕಾರ್ಯಗಳನ್ನು ನಡೆಸಲು ಅವಕಾಶವಿರುವುದಿಲ್ಲ. ವಿಶೇಷವಾಗಿ ಸೂತಕದ ಸಮಯದಲ್ಲಿ ಅಡುಗೆ ಮಾಡುವುದು, ಆಹಾರ ಸೇವಿಸುವುದು ಅಥವಾ ಹೊಸ ಕೆಲಸಗಳನ್ನು ಪ್ರಾರಂಭಿಸುವುದನ್ನು ನಿಷೇಧಿಸಲಾಗಿದೆ. ಗರ್ಭಿಣಿ ಮಹಿಳೆಯರು ಸೂತಕ ಆರಂಭವಾದ ನಂತರ ಮನೆಯಿಂದ ಹೊರಬರದಂತೆ ಎಚ್ಚರಿಕೆ ನೀಡಲಾಗಿದ್ದು, ದೇವರ ವಿಗ್ರಹಗಳನ್ನು ಅಥವಾ ತುಳಸಿ ಗಿಡವನ್ನು ಸ್ಪರ್ಶಿಸುವುದು ಶಾಸ್ತ್ರವಿರುದ್ಧವಾಗಿದೆ. 

Ketugrasta Chandra Grahan ಆಧ್ಯಾತ್ಮಿಕ ದೃಷ್ಟಿಯಿಂದ ಈ ಗ್ರಹಣದ ಅವಧಿಯು ಅತ್ಯಂತ ಪುಣ್ಯಪ್ರದವಾಗಿದೆ. ಗ್ರಹಣದ ಸಮಯದಲ್ಲಿ ಶಾಂತವಾಗಿ ಕುಳಿತು ಧ್ಯಾನ ಮಾಡುವುದು, ಇಷ್ಟ ದೇವರ ಸ್ತೋತ್ರಗಳನ್ನು ಪಠಿಸುವುದು ಅಥವಾ ಮನಸ್ಸಿನಲ್ಲಿಯೇ ಜಪ ಮಾಡುವುದರಿಂದ ಹೆಚ್ಚಿನ ಫಲ ದೊರೆಯುತ್ತದೆ. ಗ್ರಹಣ ಸಂಪೂರ್ಣವಾಗಿ ಮುಗಿದ ನಂತರ ಮನೆಯನ್ನು ಶುದ್ಧೀಕರಿಸಿ, ಶುದ್ಧ ಸ್ನಾನ ಮಾಡಿ ಶಕ್ತಿಯಾನುಸಾರ ದಾನ-ಧರ್ಮಗಳನ್ನು ಮಾಡುವುದು ವಾಡಿಕೆ. ಇದು ಗ್ರಹಣದ ದೋಷಗಳನ್ನು ನಿವಾರಿಸಿ ನೆಮ್ಮದಿ ನೀಡುತ್ತದೆ ಎಂಬ ನಂಬಿಕೆ ಇದೆ.

Ketugrasta Chandra Grahan on Holi 2026

Ketugrasta Chandra Grahan on Holi 2026
Ketugrasta Chandra Grahan on Holi 2026
shivamogga car decor sun control house
shivamogga car decor sun control house