ಶಿವಮೊಗ್ಗ: ರಾಗಿಗುಡ್ಡದ 15 ವರ್ಷದ ಬಾಲಕ ನಾಪತ್ತೆ; ಸುಳಿವು ಸಿಕ್ಕರೆ ಪೊಲೀಸರಿಗೆ ಮಾಹಿತಿ ನೀಡಿ 

ಹಂಚಿಕೊಳ್ಳಿ
WhatsApp Facebook X Telegram
Missing Alert Student Ezequiel Raju Missing
Missing Alert Student Ezequiel Raju Missing

ಶಿವಮೊಗ್ಗ: ನಗರದ ರಾಗಿಗುಡ್ಡ ನಿವಾಸಿಯಾದ 15 ವರ್ಷದ ಬಾಲಕನೊಬ್ಬ ಕಳೆದ ಐದು ದಿನಗಳಿಂದ ಕಾಣೆಯಾಗಿರುವ ಘಟನೆ ವರದಿಯಾಗಿದೆ. ಎಜುಕೇಲ್ ರಾಜು ಎಂಬ ಹೆಸರಿನ ಈ ಬಾಲಕನು ಫೆಬ್ರವರಿ 25ರಂದು ಮನೆಯಿಂದ ಹೊರಗೆ ಹೋದವನು ಈವರೆಗೆ ವಾಪಸ್ಸಾಗದೆ ನಾಪತ್ತೆಯಾಗಿದ್ದಾನೆ ಎಂದು ಪೊಲೀಸರು ಪತ್ರಿಕಾ ಪ್ರಕಟಣೆ ಹೊರಡಿಸಿದ್ದಾರೆ.

ಶಿವಮೊಗ್ಗ ಮಾರಿಜಾತ್ರೆ ಹೇಗಿದೆ ವ್ಯವಸ್ಥೆ ಪೂರ್ತಿ ವಿವರ ಇವತ್ತಿನ ಇ-ಪೇಪರ್​ ಓದಿ

ಕಾಣೆಯಾದ ಬಾಲಕನು ಟೌನ್ ಡಿವಿಎಸ್ ಶಾಲೆಯಲ್ಲಿ 8 ನೇ ತರಗತಿ ಓದುತ್ತಿದ್ದು ಸುಮಾರು 5 ಅಡಿ ಎತ್ತರ,ಸಾಧಾರಣ ಮೈಕಟ್ಟು,ಬಿಳಿ ಮೈಬಣ್ಣ,ಕೋಲು ಮುಖ ಹೊಂದಿದ್ದು ಕನ್ನಡ, ಇಂಗ್ಲೀಷ್,ತಮಿಳು,ತೆಲುಗು ಭಾಷೆ ಮಾತನಾಡುತ್ತಾನೆ. 

ಈತನು ಮನೆಯಿಂದ ಹೋಗುವಾಗ ಬಿಳಿ ಬಣ್ಣದ ಶರ್ಟ್,ಕಪ್ಪು ಬಣ್ಣದ ಪ್ಯಾಂಟ್ ಧರಿಸಿರುತ್ತಾನೆ. ಈತನ ಬಗ್ಗೆ ಯಾರಿಗಾದರೂ ಸುಳಿವು ದೊರೆತಲ್ಲಿ ಪಿ.ಐ ಗ್ರಾಮಾಂತರ ಪೋಲೀಸ್ ಠಾಣೆ ದೂ.ಸಂ.: 08182-261400, 261418, 9480803332, 9480803350 ನ್ನು ಸಂಪರ್ಕಿಸಿ ಮಾಹಿತಿ ನೀಡುವಂತೆ ಗ್ರಾಮಾಂತರ ಪೋಲಿಸ್ ಠಾಣೆ ಪ್ರಕಟಣೆ ತಿಳಿಸಿದೆ.

Missing Alert Student Ezequiel Raju Missing

Missing Alert Student Ezequiel Raju Missing
Missing Alert Student Ezequiel Raju Missing
ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor