6 ವರ್ಷದ ಹಿಂದೆ ಕಾಣೆಯಾಗಿದ್ದ ವ್ಯಕ್ತಿ ಕೊನೆಗೂ ಪತ್ತೆ

ಹಂಚಿಕೊಳ್ಳಿ
WhatsApp Facebook X Telegram
Missing Man
Missing Man

ಶಿವಮೊಗ್ಗ ಜಿಲ್ಲೆಯಭದ್ರಾವತಿ ತಾಲ್ಲೂಕಿನ ಬಂಡಾರಹಳ್ಳಿ ಗ್ರಾಮದ ಮಂಜೇಶ್ ಎಂಬುವವರು ಕಳೆದ ಆರು ವರ್ಷಗಳ ಹಿಂದೆ ಕಾಣೆಯಾಗಿದ್ದು, ಇದೀಗ ನ್ಯೂಟೌನ್ ಪೊಲೀಸರು ಅವರನ್ನು ಯಶಸ್ವಿಯಾಗಿ ಪತ್ತೆಹಚ್ಚಿ ಪೋಷಕರಿಗೆ ಒಪ್ಪಿಸಿದ್ದಾರೆ.

ಶಿವಮೊಗ್ಗದಲ್ಲಿ ರಾಷ್ಟ್ರ ಮಟ್ಟದ ಟಗರುಗಳ ಭರ್ಜರಿ  ಕಾಳಗ: ಹೇಗಿತ್ತು ಗೊತ್ತಾ..?

ಹೌದು, ಭದ್ರಾವತಿಯ 20 ವರ್ಷದ ಯುವಕ ಮಂಜೇಶ್ ಕಳೆದ 2019 ರಲ್ಲಿ ನಾಪತ್ತೆಯಾಗಿದ್ದರು. ಈ ಸಂಬಂಧ ಮಗನನ್ನು ಹುಡುಕಿಕೊಡುವಂತೆ ಪೋಷಕರು ಅಂದು ನ್ಯೂಟೌನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. 

ಈ ಬಗ್ಗೆ ನ್ಯೂಟೌನ್ ಪೊಲೀಸ್ ಠಾಣೆಯಲ್ಲಿ ಗುನ್ನೆ ಸಂಖ್ಯೆ 132/ 2019 ಕಲಂ ಮನುಷ್ಯ ಕಾಣೆ ಪ್ರಕರಣ ವರದಿಯಾಗಿ ತನಿಖೆ ನಡೆಯುತ್ತಿತ್ತು. ಇದೀಗ ನ್ಯೂಟೌನ್ ಪೊಲೀಸ್ ಠಾಣೆಯ ಪಿಎಸ್ಐ ಹಾಗೂ ಸಿಬ್ಬಂದಿಗಳ ತಂಡವು ದಿನಾಂಕ 19-02-2026 ರಂದು ಮಂಜೇಶ್ ಅವರನ್ನು ಚಿತ್ರದುರ್ಗ ಜಿಲ್ಲೆಯ ಹಿರಿಯೂರಿನಲ್ಲಿ ಪತ್ತೆ ಮಾಡಿದ್ದಾರೆ.

ಹಿರಿಯೂರಿನಿಂದ ಪತ್ತೆ ಮಾಡಲಾದ ವ್ಯಕ್ತಿಯನ್ನು ಪೊಲೀಸರು ಭದ್ರಾವತಿಗೆ ಕರೆತಂದು ಅವರ ಪೋಷಕರಿಗೆ ಹಸ್ತಾಂತರಿಸಿದ್ದಾರೆ.

Missing Man Bhadravathi Found After 6 Years

Missing Man
Missing Man
ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor