ಸೀಗೆಹಟ್ಟಿ ನಿವಾಸಿ ಸೇರಿ ಇಬ್ಬರು ಅರೆಸ್ಟ್ : ಏನಿದು ಪ್ರಕರಣ

ಕೊನೆಯ ನವೀಕರಣ: 19 ಫೆಬ್ರವರಿ 2026, 6:37 ಅಪರಾಹ್ನ

ಹಂಚಿಕೊಳ್ಳಿ
WhatsApp Facebook X Telegram
Shivamogga 2.12 Crore Cyber Fraud Arrest
Shivamogga 2.12 Crore Cyber Fraud Arrest

ಶಿವಮೊಗ್ಗ: 15 ವರ್ಷಗಳ ಹಳೆಯ ಸ್ನೇಹವನ್ನು ಬಂಡವಾಳ ಮಾಡಿಕೊಂಡು ಬ್ಯಾಂಕ್ ಖಾತೆ ಮೂಲಕ ಕೋಟ್ಯಾಂತರ ರೂಪಾಯಿ ಸೈಬರ್ ವಂಚನೆಗೆ ನೆರವಾಗುತ್ತಿದ್ದ ಇಬ್ಬರು ಆರೋಪಿಗಳನ್ನು ಶಿವಮೊಗ್ಗ ಸಿಇಎನ್ ಪೊಲೀಸರು ಬಂಧಿಸಿದ್ದಾರೆ.

ಶಿವಮೊಗ್ಗ, ಸಾಗರ, ಶಿರಸಿ ಸೇರಿ ರಾಜ್ಯದ ವಿವಿಧ ಮಾರುಕಟ್ಟೆಗಳಲ್ಲಿನ ಅಡಕೆ ದರ ಪಟ್ಟಿ ಇಲ್ಲಿದೆ

ಘಟನೆ ವಿವರ: 

ನಗರದ ಶೇಷಾದ್ರಿಪುರಂ ನಿವಾಸಿ ಒಬ್ಬರು ಫೆಬ್ರವರಿ 16 ರಂದು ಪೊಲೀಸರಿಗೆ ದೂರು ನೀಡಿದ್ದರು. ತಮ್ಮ ಹಳೆಯ ಸ್ನೇಹಿತರೊಬ್ಬರಉ ವ್ಯವಹಾರದ ನೆಪ ಹೇಳಿ ಬ್ಯಾಂಕ್ ವಿವರಗಳನ್ನು ಪಡೆದು ವಂಚಿಸಿದ್ದಾನೆ ಎಂದು ಆರೋಪಿಸಿದ್ದರು. ಪ್ರಕರಣ ದಾಖಲಿಸಿಕೊಂಡ ಇನ್ಸ್ಪೆಕ್ಟರ್ ಮಂಜುನಾಥ್ ನೇತೃತ್ವದ ತಂಡ, ಆರೋಪಿಗಳನ್ನು ಪತ್ತೆಹಚ್ಚಿ ಅರೆಸ್ಟ್ ಮಾಡುವಲ್ಲಿ ಯಶಸ್ವಿಯಾಗಿದೆ. 

ದೂರುದಾರರು, ತಮ್ಮ ನಂಬಿಸಿದ್ದ ಆರೋಪಿಗಳು ಅವರ ಬ್ಯಾಂಕ್ ಪಾಸ್‌ಬುಕ್, ಎಟಿಎಂ ಕಾರ್ಡ್ ಮತ್ತು ಮೊಬೈಲ್ ನಂಬರ್ ಪಡೆದು ಅದನ್ನು ಮ್ಯೂಲ್ ಅಕೌಂಟ್ ಆಗಿ ಪರಿವರ್ತಿಸಿದ್ದರು. ಈ ಖಾತೆಯ ಮೂಲಕ ಸೈಬರ್ ವಂಚಕರು ಅಕ್ರಮ ಹಣ ವರ್ಗಾವಣೆ ಮಾಡುತ್ತಿದ್ದರು ಎಂದು ಆರೋಪಿಸಿದ್ದಾರೆ.

ಇನ್ನೂ ದೂರುದಾರರ ಖಾತೆಯ ಮೇಲೆ ಕರ್ನಾಟಕ ಸೇರಿದಂತೆ ಮಹಾರಾಷ್ಟ್ರ, ಪಶ್ಚಿಮ ಬಂಗಾಳ ಮತ್ತು ತೆಲಂಗಾಣದಲ್ಲಿ ಒಟ್ಟು 5 ಪ್ರಕರಣಗಳು ದಾಖಲಾಗಿವೆ. ಈ ಪ್ರಕರಣಗಳಲ್ಲಿ ಒಟ್ಟು 2.12 ಕೋಟಿ ರೂ. ಹಣ ವಂಚನೆಯಾಗಿದ್ದು, ಅದರಲ್ಲಿ 22.61 ಲಕ್ಷ ರೂ. ಹಣವು ಇದೇ ಮ್ಯೂಲ್ ಅಕೌಂಟ್ ಮೂಲಕ ವರ್ಗಾವಣೆಯಾಗಿರುವುದು ದೃಢಪಟ್ಟಿದೆ. ಪೊಲೀಸರು ಆರೋಪಿಗಳಿಂದ ಮೊಬೈಲ್ ಮತ್ತು ಡಿಜಿಟಲ್ ಸಾಕ್ಷ್ಯಗಳನ್ನು ವಶಪಡಿಸಿಕೊಂಡು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

Shivamogga 2.12 Crore Cyber Fraud Arrest

shivamogga car decor sun control house
shivamogga car decor sun control house
ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor