ಗಾಜನೂರು ಕೊಲೆ ಪ್ರಕರಣ, ಸ್ನೇಹಿತರೇ ಶ್ರೀನಿವಾಸ್​ರನ್ನು ಹತ್ಯೆ ಮಾಡಿದ್ರಾ..? ಎಸ್ಪಿ ನಿಖಿಲ್ ಬಿ  ಹೇಳಿದ್ದೇನು

ಶಿವಮೊಗ್ಗ | ಶಿವಮೊಗ್ಗದ ಸಮೀಪದ ಗಾಜನೂರಿನಲ್ಲಿ ನಡೆದ ಗಾರೆ ಮೇಸ್ತ್ರಿ ಶ್ರೀನಿವಾಸ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ SP ನಿಖಿಲ್ ಬಿ ಪ್ರತಿಕ್ರಿಯೆ ನೀಡಿದ್ದಾರೆ. 

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು  ಗಾಜನೂರಿನ ಸೊಸೈಟಿ ಬಳಿ ನಿನ್ನೆ ರಾತ್ರಿ ಈ ಘಟನೆ ನಡೆದಿದೆ. ಮೃತ ಶ್ರೀನಿವಾಸ್ (36) ಗ್ರಾಮದಲ್ಲಿ ಗಾರೆ ಕೆಲಸ ಮಾಡಿಕೊಂಡಿದ್ದರು. ಪ್ರಾಥಮಿಕ ತನಿಖೆಯ ಪ್ರಕಾರ, ಶ್ರೀನಿವಾಸ್ ಮತ್ತು ಅವರ ಇಬ್ಬರು ಸ್ನೇಹಿತರು ಕುಳಿತಿದ್ದಾಗ ಕುಡಿತದ ಅಮಲಿನಲ್ಲಿ ಜಗಳ ಆರಂಭವಾಗಿದೆ. ಈ ಜಗಳ ವಿಕೋಪಕ್ಕೆ ತಿರುಗಿ ಸ್ನೇಹಿತರೇ ಈ ಕೃತ್ಯ ಎಸಗಿದ್ದಾರೆ. 

ಶಿವಮೊಗ್ಗ-ತೀರ್ಥಹಳ್ಳಿ ರಸ್ತೆ ಸಂಚಾರದಲ್ಲಿ ಈ ದಿನ ಮಾರ್ಗ ಬದಲಾವಣೆ: ಯಾವಾಗ, ಏಕೆ..?

ಶ್ರೀನಿವಾಸ್ ಅವರು ಪ್ರತಿದಿನ ಕುಡಿದು ಕಿರಿಕ್ ಮಾಡುತ್ತಿದ್ದರು ಎನ್ನಲಾಗಿದ್ದು, ನಿನ್ನೆ ರಾತ್ರಿ ಕೂಡ ತನ್ನ ಪರಿಚಯದವರ ಜೊತೆ ಕಿರಿಕ್ ಮಾಡಿಕೊಂಡಿದ್ದಾರೆ. ಈ ವೇಳೆ ಆಕ್ರೋಶಗೊಂಡ ಇಬ್ಬರು ಸ್ನೇಹಿತರು ಕಲ್ಲು ಎತ್ತಿ ಹಾಕಿ ಹಾಗೂ ಹರಿತವಾದ ಬ್ಲೇಡ್‌ನಿಂದ ಇರಿದು ಶ್ರೀನಿವಾಸ್ ಅವರನ್ನು ಬರ್ಬರವಾಗಿ ಕೊಲೆ ಮಾಡಿದ್ದಾರೆ. 

ಪರಿಚಯಸ್ಥರ ನಡುವೆ ಕುಡಿತದ ವಿಷಯಕ್ಕೆ ಜಗಳವಾಗಿ ಈ ಹತ್ಯೆ ನಡೆದಿದೆ. ಇಬ್ಬರು ಸ್ನೇಹಿತರ ಮೇಲೆ ಕೊಲೆಯ ಶಂಕೆ ಇದ್ದು, ತುಂಗಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದಿದ್ದಾರೆ.

Gajanuru Case Update  SP Nikhil B

Gajanuru Case Update 
Gajanuru Case Update 
shivamogga car decor sun control house
shivamogga car decor sun control house


ಶಿವಮೊಗ್ಗ ಏರ್‌ಪೋರ್ಟ್ ಕಚೇರಿ ಉದ್ಘಾಟನೆ ಶಿವಮೊಗ್ಗ ಎಸ್​ಪಿ ನೈಟ್ ರೌಂಡ್ಸ್​ ಶಿವಮೊಗ್ಗಕ್ಕೆ ಬಂದ ಅಲೋಕ್​ ಕುಮಾರ್​ ಮಲೆನಾಡಲ್ಲಿ ಇಷ್ಟೆಲ್ಲಾ ಆಯ್ತು