ಶಿವಮೊಗ್ಗ: ಡಿಸೆಂಬರ್ ತಿಂಗಳಲ್ಲಿ ಭದ್ರಾವತಿ ಹಳೆ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ದುರ್ಗಿನಗರ ವಾಸಿ ಜುನೈದ್ ಹಾಗೂ ತುಂಗಾನಗರ ಪೊಲೀಸ್ ಠಾಣಾ ವ್ಯಾಪ್ತಿಯ ಗಾಜನೂರು ಜನತಾ ಕಾಲೋನಿ ವಾಸಿ ವಿರೇಶ್ ಎಂಬುವವರು ನಾಪತ್ತೆಯಾಗಿದ್ದಾರೆ. ಈ ಎರಡು ಪ್ರತ್ಯೇಕ ಪ್ರಕರಣಕ್ಕೆ ಸಂಭಂದಿಸಿದಂತೆ ನಾಪತ್ತೆಯಾದವರ ಮಾಹಿತಿಗಾಗಿ ಪೊಲೀಸರು ಪತ್ರಿಕಾ ಪ್ರಕಟಣೆ ಹೊರಡಿಸಿದ್ದಾರೆ.
ಶಿವಮೊಗ್ಗ : 100 ರೂಪಾಯಿಗೆ ಸಿಗುತ್ತೆ 30 ಕೆಜಿ ಕುರಿ. ಎಲ್ಲಿ ,ಏನಿದು ಸುದ್ದಿ
Shimoga ಮೊಹಮದ್ ಜುನೈದ್ ನಾಪತ್ತೆ
26 ವರ್ಷದ ಮೊಹಮದ್ ಜುನೈದ್ ಡಿಸೆಂಬರ್ ತಿಂಗಳಲ್ಲಿ ಬೆಂಗಳೂರಿಗೆ ಹೋಗಿ ಬರುತ್ತೇನೆ ಎಂದು ಹೋದವರು ಇದುವರೆಗೂ ಬರಲಿಲ್ಲ.ವ್ಯಕ್ತಿಯ ಚಹರೆ : 5.5 ಅಡಿ ಎತ್ತರ, ಸಾಧಾರಣ ಮೈಕಟ್ಟು, ಕೋಲುಮುಖ, ಗೋಧಿ ಮೈಬಣ್ಣ ಹೊಂದಿದ್ದು, ಮನೆಯಿಂದ ಹೋಗುವಾಗ ನೀಲಿ ಬಣ್ಣದ ಶರ್ಟ್ ಮತ್ತು ಕಪ್ಪು ಬಣ್ಣದ ಪ್ಯಾಂಟ್ ಧರಿಸಿರುತ್ತಾರೆ.
ಈ ವ್ಯಕ್ತಿ ಬಗ್ಗೆ ಸುಳಿವು ದೊರತಲ್ಲಿ ಭದ್ರಾವತಿ ಹಳೇನಗರ ಪೊಲೀಸ್ ಠಾಣೆಯನ್ನು ಸಂಪರ್ಕಿಸಿ ಮಾಹಿತಿ ನೀಡುವಂತೆ ಪೊಲೀಸ್ ಪ್ರಕಟಣೆ ತಿಳಿಸಿದೆ.
ವಿರೇಶ್ ನಾಪತ್ತೆ
ತುಂಗಾನಗರ ಪೊಲೀಸ್ ಠಾಣಾ ವ್ಯಾಪ್ತಿಯ ಗಾಜನೂರು ಜನತಾ ಕಾಲೋನಿ ವಾಸಿ ಲಕ್ಷ್ಮೀ ಎಂಬುವವರ ಪತಿ ವೀರೇಶ್ ಎಂಬ 47 ವರ್ಷ ವ್ಯಕ್ತಿ 2025ರ ಡಿಸೆಂಬರ್‌ನಲ್ಲಿ ಬೇರೆ ಊರಿಗೆ ಕೂಲಿ ಕೆಲಸಕ್ಕೆಂದು ಹೋದವರು ಈವರೆಗೂ ವಾಪಾಸ್ಸಾಗಿರುವುದಿಲ್ಲ.ಈತನ ಚಹರೆ : 5 ಅಡಿ ಎತ್ತರ, ಸಾಧಾರಣ ಮೈಕಟ್ಟು, ಗೋಧಿ ಮೈಬಣ್ಣ ಹೊಂದಿರುತ್ತಾರೆ.
ಈ ವ್ಯಕ್ತಿ ಬಗ್ಗೆ ಸುಳಿವು ದೊರತಲ್ಲಿ ತುಂಗಾನಗರ ಪೊಲೀಸ್ ಠಾಣೆಯನ್ನು ಸಂಪರ್ಕಿಸಿ ಮಾಹಿತಿ ನೀಡುವಂತೆ ಪೊಲೀಸ್ ಪ್ರಕಟಣೆ ತಿಳಿಸಿದೆ.
Shimoga Mohammed Junaid & Veeresh Missing


