ಡಾ.ಬಿ.ಡಿ ಭೂಕಾಂತ್‌ಗೆ ನೀಡಿದ್ದ ಸಚಿವ ದರ್ಜೆ ಸೌಲಭ್ಯ ವಾಪಸ್‌ ಪಡೆದ ಸರ್ಕಾರ! ತಿದ್ದುಪಡಿಯಲ್ಲಿ ಏನಿದೆ ಓದಿ

This Article Written by / ajjimane ganesh / ಫೆಬ್ರವರಿ 11, 2026

Minister Status Withdrawn

Minister Status Withdrawn ಮಲೆನಾಡು ಟುಡೆ ಸುದ್ದಿ / ಬೆಂಗಳೂರು ಕರ್ನಾಟಕ ರಾಜ್ಯ ಸಹಕಾರಿ ತೋಟಗಾರಿಕೆ ಮಾರಾಟ ಮಹಾಮಂಡಳ ನಿಯಮಿತದ (ಕೆಎಚ್‌ಎಂಎನ್‌ಎಲ್) ಅಧ್ಯಕ್ಷ ಬಿಜೆಪಿ ಮುಖಂಡ ಬಿ.ಡಿ. ಭೂಕಾಂತ್ ಅವರಿಗೆ ನೀಡಲಾಗಿದ್ದ ರಾಜ್ಯ ಸಚಿವ ದರ್ಜೆಯ ಸ್ಥಾನಮಾನವನ್ನು ಸರ್ಕಾರ ದಿಢೀರ್ ಹಿಂಪಡೆದಿದೆ. ಆಡಳಿತರೂಢ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಮತ್ತು ಸ್ವಪಕ್ಷೀಯರಿಂದಲೇ ವ್ಯಕ್ತವಾದ ತೀವ್ರ ವಿರೋಧದ ಬಳಿಕ ಎಚ್ಚೆತ್ತುಕೊಂಡಿರುವ ಸರ್ಕಾರ, ತರಾತುರಿಯಲ್ಲಿ ತಿದ್ದುಪಡಿ ಆದೇಶವನ್ನು ಹೊರಡಿಸಿ ಸಚಿವ ದರ್ಜೆಯ ಸೌಲಭ್ಯಕ್ಕೆ ಕತ್ತರಿ ಹಾಕಿದೆ.

Minister Status Withdrawn
Minister Status Withdrawn

ಶಿವಮೊಗ್ಗ ಎಸ್​ಪಿ ನೈಟ್ ರೌಂಡ್ಸ್​

ಈ ಮೊದಲು ಹೊರಡಿಸಿದ್ದ ಅಧಿಸೂಚನೆಯಲ್ಲಿ, ಶಿವಮೊಗ್ಗ ಜಿಲ್ಲೆ ಶಿಕಾರಿಪುರ ಮೂಲದ ಬಿಜೆಪಿ ಮುಖಂಡ ಬಿ.ಡಿ. ಭೂಕಾಂತ್ ಅವರಿಗೆ, ಸರ್ಕಾರ ರಾಜ್ಯ ಸಚಿವ ದರ್ಜೆಯ ಸ್ಥಾನಮಾನವನ್ನೂ ಕಲ್ಪಿಸಿತ್ತು. ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದರೂ ಬಿಜೆಪಿಯಲ್ಲಿ ಗುರುತಿಸಿಕೊಂಡಿದ್ದ ನಾಯಕರಿಗೆ ಇಂತಹ ಉನ್ನತ ಗೌರವ ಮತ್ತು ಸೌಲಭ್ಯಗಳನ್ನು ನೀಡಿದ್ದರ ಬಗ್ಗೆ ಕಾಂಗ್ರೆಸ್ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಅಲ್ಲದೆ ಅಸಮಾಧಾನ ಸೋಶಿಯಲ್ ಮೀಡಿಯಾಗಳಲ್ಲಿ ದಗೆ ಎಬ್ಬಿಸಿತ್ತು. ಈ ನಡುವೆ ಇನ್ನೊಂದು ವರದಿ ಪ್ರಕಾರ, ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್​ ಅಧ್ಯಕ್ಷರು ಇದೇ ವಿಚಾರವಾಗಿ ಬೆಂಗಳೂರಿಗೆ ದೌಡಾಯಿಸಿದ್ದು, ನಾಯಕರಿಗೆ ಆಗುತ್ತಿರುವ ಅಸಮಾಧಾನದ ಬಗ್ಗೆ ವಿವರಿಸಿದ್ದಾರೆ. ಇದರ ಬೆನ್ನಲ್ಲೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ (ಡಿಪಿಎಆರ್) ತಿದ್ದುಪಡಿ ಆದೇಶ ಹೊರಡಿಸಿದೆ.  

ತಿದ್ದುಪಡಿ ಆದೇಶದಲ್ಲಿ ಏನಿದೆ?  /Minister Status Withdrawn

ಸರ್ಕಾರ ಹೊರಡಿಸಿರುವ ತಿದ್ದುಪಡಿ ಆದೇಶದಲ್ಲಿ “ಸರ್ಕಾರದ ಅಧಿಸೂಚನೆ ಸಂಖ್ಯೆ: ಸಿಆಸುಇ 14 ಶಿಸನೇ 2026 ದಿನಾಂಕ 07.02.2026 ರ ಕ್ರಮ ಸಂಖ್ಯೆ: 54 ರಲ್ಲಿ ಬಿ.ಡಿ. ಭೂಕಾಂತ್, ಅಧ್ಯಕ್ಷರು, ಕರ್ನಾಟಕ ರಾಜ್ಯ ಸಹಕಾರಿ ತೋಟಗಾರಿಕೆ ಮಾರಾಟ ಮಹಾಮಂಡಳ ನಿಯಮಿತ, ಇವರಿಗೆ ನೀಡಲಾಗಿದ್ದ ರಾಜ್ಯ ಸಚಿವ ಸ್ಥಾನಮಾನವನ್ನು ಹಿಂಪಡೆಯಲಾಗಿದೆ” ಎಂದು ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ. ಇದರರ್ಥ ಭೂಕಾಂತ್ ಅವರು ಕೇವಲ ನಿಗಮದ ಅಧ್ಯಕ್ಷರಾಗಿ ಮುಂದುವರಿಯಲಿದ್ದು, ಸಚಿವರಿಗೆ ಸಿಗುವ ಕ್ಯಾಬಿನೆಟ್ ದರ್ಜೆಯ ಭತ್ಯೆ, ಕಾರು ಮತ್ತು ಅಧಿಕೃತ ಗೌರವಗಳು ಇನ್ನು ಮುಂದೆ ಇರುವುದಿಲ್ಲ. 

ಡಾ.ಬಿ.ಡಿ ಬೂಕಾಂತ್​ಗೆ ರಾಜ್ಯ ಸಚಿವ ದರ್ಜೆ ಸ್ಥಾನ! ಶಿವಮೊಗ್ಗ, ಶಿಕಾರಿಪುರ ಕಾಂಗ್ರೆಸ್​ ವಲಯದಲ್ಲಿ ಸಂಚಲನ! ಅಚ್ಚರಿ! ಅಸಮಾಧಾನ?

Minister Status Withdrawn
Minister Status Withdrawn

ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ದ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಸುದ್ದಿಗಳಿಂದ ಸ್ತಳೀಯ ವಿಶೇಷ ವಿಡಿಯೋ ಸುದ್ದಿಗಳನ್ನು ನೀವು ನೋಡಬಹುದು…ಇಲ್ಲಿದೆ ಅವುಗಳ ಲಿಂಕ್  Facebook whatsapp  , whatsapp chanel  instagram,  youtube,  telegram , ನಮ್ಮದು ಅಧಿಕೃತವಾದ ಮತ್ತು ಉತ್ಪ್ರೇಕ್ಷೆಗಳಲ್ಲಿದ ನೈಜ ಸುದ್ದಿಯ ಸಂಸ್ಥೆ. ನಮ್ಮ ಬಗ್ಗೆ  google business, ನಲ್ಲಿ ಮಾಹಿತಿ ಪಡೆಯಬಹುದು. ಅಲ್ಲದೆ   malenadu today epaper malenadutoday web ನಲ್ಲಿ ಆಯಾ ದಿನದ ಈ ಪೇಪರ್​ಗಳನ್ನು ಕ್ಲಿಕ್ ಮಾಡಿ ಓದಬಹುದು. 

B.D. Bhookanth Minister Status Withdrawn | Karnataka Govt Corrigendum Order ಬಿಜೆಪಿ ಮುಖಂಡ ಬಿ.ಡಿ. ಭೂಕಾಂತ್ ಅವರಿಗೆ ನೀಡಲಾಗಿದ್ದ ಸಚಿವ ಸ್ಥಾನಮಾನವನ್ನು ವಿರೋಧದ ಬಳಿಕ ಸರ್ಕಾರ ಹಿಂಪಡೆದಿದೆ. ತಿದ್ದುಪಡಿ ಆದೇಶದ ಸಂಪೂರ್ಣ ವಿವರ ಇಲ್ಲಿದೆ.

This Article Written by / ಅಜ್ಜಮನೆ ಗಣೇಶ, ಪತ್ರಕರ್ತ, ಸಮಯ, ಟಿವಿ9, ನ್ಯೂಸ್​ ಫಸ್ಟ್​ನಲ್ಲಿ ವೃತ್ತಿ ನಿರ್ವಹಿಸಿರುವ ಅನುಭವವಿದೆ. ಗಳಿಸಿದ ಅನುಭವದ ಅನುಭಾವದ ಜೊತೆಗೆ ಮಲೆನಾಡು ಟುಡೆಯಲ್ಲಿ ಸೀನಿಯ್​ ಜರ್ನಲಿಸ್ಟ್​ ಆಗಿ ಕೆಲಸ ನಿರ್ವಹಿಸುತ್ತಿರುವೆ

Karnataka Politics

ಮುಂದಿನ ಸುದ್ದಿ ಒದಿ