Shivamogga | ಜಮೀನಿನ ತಂತಿ ಬೇಲಿಗೆ ಅಕ್ರಮವಾಗಿ ಕರೆಂಟ್ ಕೊಟ್ಟಿದ್ದ ತಪ್ಪಿಗೆ ಇಬ್ಬರಿಗೆ ಕೋರ್ಟ್ ಶಿಕ್ಷೆ ವಿಧಿಸಿದೆ. ಅಕ್ರಮವಾಗಿ ವಿದ್ಯುತ್ ಸಂಪರ್ಕ ನೀಡಿದ್ದು, ವ್ಯಕ್ತಿಯೊಬ್ಬರ ಸಾವಿಗೆ ಕಾರಣವಾಗಿತ್ತು. ಈ ಹಿನ್ನೆಲೆಯಲ್ಲಿ ಇಬ್ಬರು ಸಹೋದರರಿಗೆ ಶಿವಮೊಗ್ಗ ಕೋರ್ಟ್ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಿದೆ

ಶಿವಮೊಗ್ಗ ಪಾಲಿಕೆಯಿಂದ ಒತ್ತುವರಿ ಹಾಗೂ ಟವರ್ ಬ್ಯಾನರ್ ತೆರವು ಕಾರ್ಯಾಚರಣೆ, ನಿಯಮ ಮೀರಿದರೆ ಬೀಳಲಿದೆ ದಂಡದ ಬಿಸಿ!

ಶಿವಮೊಗ್ಗ ನ್ಯಾಯಾಲಯದ ತೀರ್ಪು
ಕಳೆದ 25-09-2021 ರಂದು ರಾತ್ರಿ 08-45 ರ ಸುಮಾರಿಗೆ ಶಿವಮೊಗ್ಗ ತಾಲ್ಲೂಕಿನ ಕೋಣೆಹೊಸೂರು ಗ್ರಾಮದಲ್ಲಿ ನಡೆದ ಘಟನೆ. ಗಿರೀಶ್ ಎಂಬುವವರ ತಂದೆ ಗಾಮಪ್ಪನವರು ತಮ್ಮ ನಿವಾಸದ ಹಿಂಭಾಗದ ಜಮೀನಿಗೆ ಬಹಿರ್ದೆಸೆಗೆಂದು ತೆರಳಿದ್ದರು. ಆದರೆ ಅಲ್ಲಿದ್ದ ತಂತಿ ಬೇಲಿಗೆ ಕರೆಂಟ್ ಕೊಟ್ಟಿರುವುದು ಗೊತ್ತಿಲ್ಲದೆ ಅದನ್ನ ದಾಟಲು ಮುಂದಾಗಿದ್ದರು. ಇದರಿಂದ ಕರೆಂಟ್ ಹೊಡೆದು ಅವರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದರು. ತಂತಿಬೇಲಿಗೆ ಜಮೀನಿನ ಮಾಲೀಕರಾದ ಲಕ್ಷ್ಮಣಪ್ಪ ಮತ್ತು ಲಿಂಗಪ್ಪ ಎಂಬುವವರು ಬೋರ್ ವೆಲ್ ಮೋಟಾರ್ ನಿಂದ ಅಕ್ರಮವಾಗಿ ಲೈನ್ ಎಳೆದಿದ್ದು ತನಿಖೆಯಲ್ಲಿಯು ಸಾಬೀತಾಗಿತ್ತು.
ಶಿವಮೊಗ್ಗ: ಸೂಡಾದಲ್ಲಿ ನಡೆದಿದೆ ಎನ್ನಲಾದ ಹಗರಣದ ಬಗ್ಗೆ ತನಿಖೆಗೆ ಜೆಡಿಎಸ್ ಒತ್ತಾಯ, 10 ಕೋಟಿ ಭ್ರಷ್ಟಾಚಾರದ ಆರೋಪ
ಕುಂಸಿ ಪೊಲೀಸ್ ಠಾಣೆ
ಪೊಲೀಸರು ಪ್ರಕರಣ ಸಂಬಂಧ ಕೇಸ್ ದಾಖಲಿಸಿದರೆ, ಅಂದಿನ ಇನ್ಸ್ಪೆಕ್ಟರ್ ಅಭಯ್ ಪ್ರಕಾಶ್ ಸೋಮನಾಳ , ಈ ಸಂಬಂಧ ನ್ಯಾಯಾಲಯಕ್ಕೆ ಚಾರ್ಜ್ಶೀಟ್ ಸಲ್ಲಿಸಿದ್ರು. ಪ್ರಕರಣದ ವಿಚಾರಣೆ ಶಿವಮೊಗ್ಗದ 3 ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಸುದೀರ್ಘವಾಗಿ ನಡೆದಿತ್ತು. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕ ಶಾಂತರಾಜ್ ಅವರು ವಾದ ಮಂಡಿಸಿದ್ದರು. ವಾದ ಪ್ರತಿವಾದಗಳನ್ನು ಆಲಿಸಿದ ನ್ಯಾಯಾಧೀಶರಾದ ಯಶವಂತ ಕುಮಾರ್ ಅವರು ಆರೋಪಿಗಳ ಮೇಲಿನ ತಪ್ಪು ದೃಢಪಟ್ಟ ಹಿನ್ನೆಲೆಯಲ್ಲಿ ಶಿಕ್ಷೆ ಪ್ರಕಟಿಸಿದ್ದಾರೆ.
ನ್ಯಾಯಾಲಯದ ಆದೇಶದಂತೆ ಕೋಣೆಹೊಸೂರು ಗ್ರಾಮದ ನಿವಾಸಿಗಳಾದ 48 ವರ್ಷದ ಲಕ್ಷ್ಮಣಪ್ಪ ಹಾಗೂ 43 ವರ್ಷದ ಲಿಂಗಪ್ಪ ಅವರಿಗೆ 1 ವರ್ಷದ ಸಜೆ ಮತ್ತು ತಲಾ 11,000 ರೂಪಾಯಿಗಳ ದಂಡವನ್ನು ವಿಧಿಸಲಾಗಿದೆ.

ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ದ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಸುದ್ದಿಗಳಿಂದ ಸ್ತಳೀಯ ವಿಶೇಷ ವಿಡಿಯೋ ಸುದ್ದಿಗಳನ್ನು ನೀವು ನೋಡಬಹುದು…ಇಲ್ಲಿದೆ ಅವುಗಳ ಲಿಂಕ್ Facebook , whatsapp , whatsapp chanel instagram, youtube, telegram , ನಮ್ಮದು ಅಧಿಕೃತವಾದ ಮತ್ತು ಉತ್ಪ್ರೇಕ್ಷೆಗಳಲ್ಲಿದ ನೈಜ ಸುದ್ದಿಯ ಸಂಸ್ಥೆ. ನಮ್ಮ ಬಗ್ಗೆ google business, ನಲ್ಲಿ ಮಾಹಿತಿ ಪಡೆಯಬಹುದು. ಅಲ್ಲದೆ malenadu today epaper malenadutoday web ನಲ್ಲಿ ಆಯಾ ದಿನದ ಈ ಪೇಪರ್ಗಳನ್ನು ಕ್ಲಿಕ್ ಮಾಡಿ ಓದಬಹುದು.
Shimoga Court Sentences Two to Prison for Death Caused by Illegal Electric Fence ತಂತಿ ಬೇಲಿಗೆ ಕರೆಂಟ್ ಕೊಟ್ಟಿದ್ದಕ್ಕೆ ಇಬ್ಬರಿಗೆ ತಲಾ ಒಂದು ವರ್ಷ ಶಿಕ್ಷೆ! ಕೋಣೆಹೊಸೂರು ಕೇಸ್ ಇತ್ಯರ್ಥ! ನಡೆದಿದ್ದು ಹೀಗೆ


