ಮಾರಿಕಾಂಬ ಕಪ್ ಕ್ರಿಕೆಟ್ ಸಂಭ್ರಮ, ವಿಜೇತರಿಗೆ ಸಿಗಲಿದೆ ಬೃಹತ್ ಟಗರುಗಳ ಉಡುಗೊರೆ!

This Article Written by / Prathapa thirthahalli / ಫೆಬ್ರವರಿ 5, 2026

Marikamba Cup 2026 Cricket Fever Grips Shivamogga

ಶಿವಮೊಗ್ಗದ ಇತಿಹಾಸ ಪ್ರಸಿದ್ಧ ಕೋಟೆ ಶ್ರೀ ಮಾರಿಕಾಂಬ ದೇವಿಯ ಜಾತ್ರಾ ಮಹೋತ್ಸವದ ಅಂಗವಾಗಿ ಮೊದಲ ಬಾರಿಗೆ ಕೋಟೆ ಶ್ರೀ ಮಾರಿಕಾಂಬ ಗೆಳೆಯರ ಬಳಗ’ದ ವತಿಯಿಂದ  ಫೆಬ್ರವರಿ 07 ಮತ್ತು 08 ರಂದು  ಮಾರಿಕಾಂಬ ಕಪ್ ಎಂಬ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿಯನ್ನು ಆಯೋಜಿಸಲಾಗಿದೆ. 

ಶಿವಮೊಗ್ಗ: ಮೂವರು ಅಪರಾಧಿಗಳಿಗೆ ತಲಾ 5 ವರ್ಷ ಕಠಿಣ ಜೈಲು ಶಿಕ್ಷೆ :ಆರೋಪಿಗಳು ಅಂತದ್ದೇನು ಮಾಡಿದ್ರು ಗೊತ್ತಾ..? 

ಈ ಕುರಿತು ನಗರದ ಪತ್ರಿಕಾ ಭವನದಲ್ಲಿ ನಡೆದ  ಸುದ್ದಿಗೋಷ್ಠಿಯಲ್ಲಿಗೆ ಮಾಹಿತಿ‌ ನೀಡಿದ ಬಳಗದ ಅಧ್ಯಕ್ಷ ಕಿರಣ್,  ಎರಡು ದಿನಗಳ ಕಾಲ ಬಾಪೂಜಿ ನಗರದಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ಈ ಕ್ರೀಡಾಕೂಟ ಜರುಗಲಿದೆ. ಪಂದ್ಯಾವಳಿಯಲ್ಲಿ ಒಟ್ಟು 40 ತಂಡಗಳಿಗೆ ಮಾತ್ರ ಭಾಗವಹಿಸಲು ಅವಕಾಶ ನೀಡಲಾಗಿದ್ದು, ಆಸಕ್ತ ತಂಡಗಳು 2000 ರೂಪಾಯಿ ಪ್ರವೇಶ ಶುಲ್ಕದೊಂದಿಗೆ ಫೆಬ್ರವರಿ 6 ರೊಳಗೆ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬೇಕಿದೆ. ಕೇವಲ ಶಿವಮೊಗ್ಗ ಜಿಲ್ಲೆಯ ಆಟಗಾರರಿಗೆ ಮಾತ್ರ ಈ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳಲು ಅವಕಾಶ ಕಲ್ಪಿಸಲಾಗಿದೆ ಎಂದರು. 

 ಹಾಗಯೇ ಪಂದ್ಯಾವಳಿಯ ವಿಶೇಷತೆಯೆಂದರೆ ಪ್ರತಿ ಪಂದ್ಯವೂ 5 ಓವರ್‌ಗಳಿಗೆ ಸೀಮಿತವಾಗಿದ್ದು, ಸಂಪೂರ್ಣವಾಗಿ ನಾಕೌಟ್ ಮಾದರಿಯಲ್ಲಿ ನಡೆಯಲಿದೆ. ಪ್ರತಿದಿನ ಬೆಳಿಗ್ಗೆ 9 ಗಂಟೆಗೆ ಪಂದ್ಯಗಳು ಆರಂಭವಾಗಿ ಸಂಜೆ 6 ಗಂಟೆಯವರೆಗೆ ಮುಂದುವರಿಯಲಿವೆ. ಪ್ರತಿ ಪಂದ್ಯದಲ್ಲೂ ಶ್ರೇಷ್ಠ ಪ್ರದರ್ಶನ ನೀಡುವ ಆಟಗಾರನಿಗೆ ಪಂದ್ಯ ಪುರುಷೋತ್ತಮ ಪ್ರಶಸ್ತಿ ನೀಡಿ ಗೌರವಿಸಲಾಗುವುದು. ಗೆಲುವು ಸಾಧಿಸುವ ತಂಡಗಳಿಗೆ ಅತ್ಯಂತ ವಿಭಿನ್ನವಾದ ಬಹುಮಾನಗಳನ್ನು ಘೋಷಿಸಲಾಗಿದ್ದು, ಪ್ರಥಮ ಸ್ಥಾನ ಪಡೆಯುವ ತಂಡಕ್ಕೆ 30 ಕೆ.ಜಿ. ತೂಕದ ಎರಡು ಬೃಹತ್ ಟಗರುಗಳು, ದ್ವಿತೀಯ ಸ್ಥಾನಕ್ಕೆ 30 ಕೆ.ಜಿ. ತೂಕದ ಒಂದು ಟಗರು ಹಾಗೂ ತೃತೀಯ ಸ್ಥಾನಕ್ಕೆ 10,001 ರೂಪಾಯಿ ನಗದು ಬಹುಮಾನದೊಂದಿಗೆ ಆಕರ್ಷಕ ಟ್ರೋಫಿಗಳನ್ನು ನೀಡಲಾಗುವುದು ಎಂದರು. 

Marikamba Cup 2026 Cricket Fever Grips Shivamogga

Marikamba Cup 2026 Cricket Fever Grips Shivamogga
Marikamba Cup 2026 Cricket Fever Grips Shivamogga
shivamogga car decor sun control house
shivamogga car decor sun control house

This Article Written by / Prathapa thirthahalli - Malenadu Today : ತೀರ್ಥಹಳ್ಳಿ ತಾಲ್ಲೂಕು ಗಬಡಿ ಮೂಲದ ಪತ್ರಕರ್ತ ಪ್ರತಾಪ್ ತೀರ್ಥಹಳ್ಳಿ ಕಳೆದ ಮೂರು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸದ್ಯ ಮಲೆನಾಡು ಟುಡೆಯಲ್ಲಿ content producer ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಮುಂದಿನ ಸುದ್ದಿ ಒದಿ