ಶಿವಮೊಗ್ಗ : 216 ರೂಪಾಯಿ ಎಕ್ಟ್ರಾ ಪಡೆದಿದ್ದಕ್ಕೆ ಫ್ಲಿಪ್‌ ಕಾರ್ಟ್‌ಗೆ ಬಿತ್ತು 25 ಸಾವಿರ ದಂಡ, ಏನಿದು ಸುದ್ದಿ

This Article Written by / Prathapa thirthahalli / ಫೆಬ್ರವರಿ 5, 2026

Flipkart Fined 25k Shivamogga Consumer Court

ಶಿವಮೊಗ್ಗ : ಒಂದು ಲೀಟರ್ ಏಷಿಯನ್ ವುಡ್ ಪ್ರೈಮರ್‌ಗೆ ಎಂ.ಆರ್.ಪಿ ಗಿಂತ ಹೆಚ್ಚಿನ ಹಣ ಪಡೆದಿದ್ದರ ಪರಿಣಾಮ ಪ್ಲಿಪ್‌ಕಾರ್ಟ್‌ ಮುಖ್ಯ ವ್ಯವಸ್ಥಾಪಕರಿಗೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು ಬರೋಬ್ಬರಿ 25 ಸಾವಿರ ದಂಡವನ್ನು ವಿಧಿಸಿದೆ.

ಶಿವಮೊಗ್ಗ ಜಿಲ್ಲೆಯ ಮಂಡಘಟ್ಟದ ನಿವಾಸಿ ಶಿವಕುಮಾರ್ ಎಸ್. ಎಂಬುವವರು ಫ್ಲಿಪ್‌ ಕಾರ್ಟ್‌ ಆನ್‌ಲೈನ್ ಮಾರುಕಟ್ಟೆಯಲ್ಲಿ ಒಂದು ಲೀಟರ್ ಏಷಿಯನ್ ವುಡ್ ಪ್ರೈಮರ್ ಖರೀದಿಸಲು ಮುಂದಾಗಿದ್ದಾರೆ . ಪ್ರೈಮರ್​ ಖರೀದಿಸುವಾಗ ಆಫರ್​ ಇದ್ದ ಕಾರಣ ಅವರು ಒಟ್ಟು 540 ರೂಪಾಯಿಗಳನ್ನು ಪಾವತಿಸಿ ಪ್ರೈಮರ್​​ನ್ನು  ಬುಕ್ ಮಾಡಿದ್ದರು. ಆದರೆ ಮನೆಗೆ ಬಂದ ಪಾರ್ಸೆಲ್ ಅನ್ನು ಸೂಕ್ಷ್ಮವಾಗಿ ಗಮನಿಸಿದಾಗ ಉತ್ಪನ್ನದ ಮೇಲಿದ್ದ ಮೂಲ ಎಂ.ಆರ್.ಪಿ ಬೆಲೆಯನ್ನು ಅಳಿಸಿ, ಅದರ ಮೇಲೆ ಬಿಳಿ ಕಾಗದವನ್ನು ಅಂಟಿಸಿ ಬೆಲೆಯನ್ನು ಮೂಲ ಬೆಲೆಯನ್ನು ಕಾಣಿಸದಂತೆ ಮಾಡಲಾಗಿತ್ತು.

Flipkart Fined ಈ ಉತ್ಪನ್ನದ ನಿಜವಾದ ಮಾರುಕಟ್ಟೆ ಬೆಲೆ ಕೇವಲ 324 ರೂಪಾಯಿಗಳಾಗಿದ್ದರೂ, ಫ್ಲಿಪ್‌ ಕಾರ್ಟ್‌ ಮತ್ತು ಉತ್ತರ ಪ್ರದೇಶದ ಶ್ರೀ ಲಕ್ಷ್ಮೀ ಪೈಂಟ್ಸ್ ಹೌಸ್ ಗ್ರಾಹಕರಿಂದ 216 ರೂಪಾಯಿಗಳನ್ನು ಹೆಚ್ಚುವರಿಯಾಗಿ ವಸೂಲಿ ಮಾಡಿರುವುದು ತನಿಖೆಯಲ್ಲಿ ದೃಢಪಟ್ಟಿದೆ. ಈ ಬಗ್ಗೆ ಹೆಚ್ಚಿನ ಹಣ ಮರುಪಾವತಿಸುವಂತೆ ಶಿವಕುಮಾರ್ ಅವರು ಲೀಗಲ್ ನೋಟೀಸ್ ನೀಡಿದರೂ ಸಹ ಕಂಪನಿಯು ಯಾವುದೇ ಪ್ರತಿಕ್ರಿಯೆ ನೀಡದೆ ಮೌನ ವಹಿಸುವ ಮೂಲಕ ಸೇವಾ ನ್ಯೂನ್ಯತೆ ಎಸಗಿತ್ತು. ಇದರಿಂದ ನೊಂದ ಗ್ರಾಹಕರು ನ್ಯಾಯಕ್ಕಾಗಿ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗದ ಮೊರೆ ಹೋಗಿದ್ದರು. 

ದೂರುದಾರರು ಸಲ್ಲಿಸಿದ ಪ್ರಮಾಣ ಪತ್ರ ಮತ್ತು ದಾಖಲೆಗಳನ್ನು ಕೂಲಂಕಷವಾಗಿ ಪರಿಶೀಲಿಸಿದ ಆಯೋಗವು ಗ್ರಾಹಕರಿಗೆ ಮೋಸ ಮಾಡಿರುವುದು ಸತ್ಯ ಎಂದು ತೀರ್ಮಾನಿಸಿತು. ದೂರುದಾರರ ವಾದವನ್ನು ಪುರಸ್ಕರಿಸಿದ ಆಯೋಗದ ಅಧ್ಯಕ್ಷರಾದ ಟಿ.ಶಿವಣ್ಣ ಮತ್ತು ಸದಸ್ಯರಾದ ಬಿ.ಡಿ.ಯೋಗಾನಂದ ಭಾಂಡ್ಯ ಅವರಿದ್ದ ಪೀಠವು ಫ್ಲಿಪ್‌ ಕಾರ್ಟ್‌ಗೆ ಗ್ರಾಹಕರಿಂದ ಪಡೆದ ಹೆಚ್ಚುವರಿ 216 ರೂಪಾಯಿಗಳಿಗೆ ಶೇ. 9ರಷ್ಟು ವಾರ್ಷಿಕ ಬಡ್ಡಿ ಸೇರಿಸಿ ಮರಳಿಸುವಂತೆ ಸೂಚಿಸಲಾಗಿದೆ.

ಅಲ್ಲದೆ ಗ್ರಾಹಕರಿಗೆ ಉಂಟುಮಾಡಿದ ಮಾನಸಿಕ ಕಿರಿಕಿರಿ ಮತ್ತು ದೂರಿನ ಕಾನೂನು ಖರ್ಚು ವೆಚ್ಚಕ್ಕಾಗಿ ಒಟ್ಟು 25,000 ರೂಪಾಯಿಗಳ ದಂಡವನ್ನು 45 ದಿನಗಳೊಳಗೆ ಪಾವತಿಸಲು ಆದೇಶಿಸಿದೆ. ಒಂದು ವೇಳೆ ಈ ಅವಧಿಯಲ್ಲಿ ಹಣ ಪಾವತಿಸಲು ವಿಫಲವಾದರೆ ಬಡ್ಡಿ ದರವನ್ನು ಶೇ. 12ಕ್ಕೆ ಹೆಚ್ಚಿಸಿ ಪಾವತಿಸಬೇಕೆಂದು ತಿಳಿಸಿದೆ.

 Flipkart Fined 25k Shivamogga Consumer Court
Flipkart Fined 25k Shivamogga Consumer Court

 

 Flipkart Fined 25k Shivamogga Consumer Court

This Article Written by / Prathapa thirthahalli - Malenadu Today : ತೀರ್ಥಹಳ್ಳಿ ತಾಲ್ಲೂಕು ಗಬಡಿ ಮೂಲದ ಪತ್ರಕರ್ತ ಪ್ರತಾಪ್ ತೀರ್ಥಹಳ್ಳಿ ಕಳೆದ ಮೂರು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸದ್ಯ ಮಲೆನಾಡು ಟುಡೆಯಲ್ಲಿ content producer ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

Malnad Today

ಮುಂದಿನ ಸುದ್ದಿ ಒದಿ