ಕಾಂಗ್ರೆಸ್​ ವಿರುದ್ದ ಪ್ರತಿಭಟನೆ : ಕಲೆಕ್ಷನ್,​ ಕರಪ್ಷನ್,​ ಕಮಿಷನ್​, ಕಾಂಗ್ರೆಸ್​, ಧನಂಜಯ್​ ಸರ್ಜಿ ಹೀಗಂದಿದ್ಯಾಕೆ

This Article Written by / Prathapa thirthahalli / ಫೆಬ್ರವರಿ 5, 2026

Excise Scam Shivamogga BJP Protests Against Congress Govt

ಶಿವಮೊಗ್ಗ : ಅಬಕಾರಿ ಇಲಾಖೆಯಲ್ಲಿ ಲಂಚ, ವರ್ಗಾವಣೆ ದಂಧೆ ಮತ್ತು ವ್ಯಾಪಕ ಭ್ರಷ್ಟಾಚಾರ ನಡೆಯುತ್ತಿದೆ ಎಂದು ಆರೋಪಿಸಿ ರಾಜ್ಯಾದಾಧ್ಯಂತ ಜೆಡಿಎಸ್​ ಹಾಗೂ ಬಿಜೆಪಿ ಮೈತ್ರಿ ಪಕ್ಷಗಳು ಪ್ರತಿಭಟನೆಯನ್ನು ನಡೆಸುತ್ತಿವೆ. ಅದರಂತೆ ಇಂದು ಶಿವಮೊಗ್ಗದ ಶಿವಪ್ಪ ನಾಯಕ ವೃತ್ತದಲ್ಲಿ ಅಬಕಾರಿ ಸಚಿವ ತಿಮ್ಲಾಪುರ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿ ಶಿವಮೊಗ್ಗ ಜಿಲ್ಲಾ ಬಿಜೆಪಿ ವತಿಯಿಂದ  ಪ್ರತಿಭಟನೆಯನ್ನು ನಡೆಸಿದರು.

ಶಾಸಕ ಎಸ್​ ಎನ್​ ಚನ್ನಬಸಪ್ಪ ನೇತೃತ್ವದಲ್ಲಿ ನಡೆದ ಈ ಪ್ರತಿಭಟನೆಯಲ್ಲಿ ಅನೇಕ ಕಾರ್ಯಕರ್ತರು ಭಾಗವಹಿಸಿ ಕಾಂಗ್ರೆಸ್​ ಸರ್ಕಾರದ ವಿರುದ್ಧ ಘೋಷಣೆಯನ್ನು ಕೂಗಿದರು.

ಇದೇ ವೇಳೆ ಮಾತನಾಡಿದ ಶಾಸಕ ಎಸ್​ ಎನ್​  ಚೆನ್ನಬಸಪ್ಪ ಅವರು ಕಾಂಗ್ರೆಸ್‌ನ ದಾಖಲಾತಿ ರಾಜಕಾರಣವನ್ನು ಪ್ರಶ್ನಿಸಿದರು. ಹಿಂದೆ ಬಸವರಾಜ ಬೊಮ್ಮಾಯಿ ಅವರ ವಿರುದ್ಧ ಪೇಸಿಎಂ ಎಂದು ಆರೋಪ ಮಾಡಿದಾಗ ಇವರು ಯಾವ ದಾಖಲೆ ನೀಡಿದ್ದರು? ಈಶ್ವರಪ್ಪನವರ ವಿರುದ್ಧ ಆರೋಪ ಮಾಡಿದಾಗ ಅವರು ರಾಜೀನಾಮೆ ನೀಡಿದರಲ್ಲಾ, ಆಗ ಇವರು ಸಾಕ್ಷಿ ಕೇಳಿದ್ದರಾ? ಈಗ ನಮ್ಮ ಸರದಿ ಬಂದಾಗ ಇವರಿಗೆ ದಾಖಲಾತಿ ನೆನಪಾಗುತ್ತಿದೆಯೇ? ಎಂದು ಪ್ರಶ್ನಿಸಿದರು.

ಮುಂದುವರಿದು ಮಾತನಾಡಿದ ಶಾಸಕರು, ಗಾಂಧೀಜಿಯವರ ತತ್ವಗಳನ್ನು ಕಾಂಗ್ರೆಸ್ ದಿನನಿತ್ಯ ಕಗ್ಗೊಲೆ ಮಾಡುತ್ತಿದೆ ಎಂದು ದೂರಿದರು. ಗಾಂಧೀಜಿಯವರು ಅಂದೇ ಕಾಂಗ್ರೆಸ್ ಅನ್ನು ವಿಸರ್ಜಿಸಿ ಎಂದಿದ್ದರು. ಆದರೆ ಇಂದು ಅವರ ಹೆಸರಿನಲ್ಲಿಯೇ ಯೋಜನೆಗಳನ್ನು ತಂದು ಬೊಬ್ಬೆ ಹೊಡೆಯುತ್ತಿದ್ದೀರಿ. ರಾಹುಲ್, ಪ್ರಿಯಾಂಕಾ ಮತ್ತು ಸೋನಿಯಾ ವಾದ್ರಾ ಅವರ ಹಿಡಿತದಲ್ಲಿರುವ ಇಂದಿನ ಕಾಂಗ್ರೆಸ್ ದೇಶದಲ್ಲಿ ಮಾಯವಾಗುತ್ತಿದೆ ಎಂದು ಟೀಕಿಸಿದರು.

ರಾಜ್ಯದ ಮತದಾರರು ಕಾಂಗ್ರೆಸ್ ಸರ್ಕಾರದ ವಿರುದ್ಧ ಈಗಾಗಲೇ ನಿರ್ಣಯ ಮಾಡಿದ್ದಾರೆ. ಇಡೀ ಕಾಂಗ್ರೆಸ್ ಪಕ್ಷವು ಕರ್ನಾಟಕಕ್ಕೆ ಅಪಮಾನ ಮಾಡುತ್ತಿದೆ ಎಂದು ಕಿಡಿಕಾರಿದ ಶಾಸಕರು, ಮುಂಬರುವ ದಿನಗಳಲ್ಲಿ ಮತದಾರರು ಇವರಿಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಭವಿಷ್ಯ ನುಡಿದರು.

Excise Scam Shivamogga ಕಾಂಗ್ರೆಸ್​ ಎಂದರೆ  ಕಲೆಕ್ಷನ್,​ ಕರಪ್ಷನ್,​ ಕಮಿಷನ್​, : ಸರ್ಜಿ 

ನಂತರ ಮಾತನಾಡಿದ ಶಾಸಕ ಡಾ. ಧನಂಜಯ ಸರ್ಜಿ ಅವರು ಆಡಳಿತಾರೂಢ ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಕಾಂಗ್ರೆಸ್ ಎಂಬ ಪದದ ಇಂಗ್ಲಿಷ್ ಅಕ್ಷರ C ಅನ್ನು ಬಳಸಿಕೊಂಡು ವ್ಯಂಗ್ಯವಾಡಿದ ಅವರು, C ಎಂದರೆ ಕಲೆಕ್ಷನ್, C ಎಂದರೆ ಕರಪ್ಷನ್ ಮತ್ತು ಮತ್ತೊಂದು C ಎಂದರೆ ಕಮಿಷನ್” ಎಂದು ಟೀಕಿಸಿದರು.

Excise Scam Shivamogga BJP Protests Against Congress Govt

Excise Scam Shivamogga BJP Protests Against Congress Govt
Excise Scam Shivamogga BJP Protests Against Congress Govt

This Article Written by / Prathapa thirthahalli - Malenadu Today : ತೀರ್ಥಹಳ್ಳಿ ತಾಲ್ಲೂಕು ಗಬಡಿ ಮೂಲದ ಪತ್ರಕರ್ತ ಪ್ರತಾಪ್ ತೀರ್ಥಹಳ್ಳಿ ಕಳೆದ ಮೂರು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸದ್ಯ ಮಲೆನಾಡು ಟುಡೆಯಲ್ಲಿ content producer ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

MLA Channabasappa

ಮುಂದಿನ ಸುದ್ದಿ ಒದಿ