ವಿದೇಶದಿಂದ ಚಿನ್ನ ತರುವವರಿಗೆ ಗುಡ್ ನ್ಯೂಸ್ : ಏನದು

ಹಂಚಿಕೊಳ್ಳಿ
WhatsApp Facebook X Telegram
Baggage Rules 2026 Big Relief for Gold Import
Baggage Rules 2026 Big Relief for Gold Import

ವಿದೇಶದಿಂದ ತವರಿಗೆ ಮರಳುವ ಭಾರತೀಯರಿಗೆ ಮತ್ತು ಪ್ರವಾಸಿಗರಿಗೆ ಕೇಂದ್ರ ಸರ್ಕಾರವು ಬ್ಯಾಗೇಜ್ ನಿಯಮ 2026 ಅಡಿಯಲ್ಲಿ ಸಿಹಿ ಸುದ್ದಿಯೊಂದನ್ನು ನೀಡಿದೆ. ಹೊಸ ಅಧಿಸೂಚನೆಯ ಪ್ರಕಾರ, ವಿದೇಶದಿಂದ ಚಿನ್ನದ ಆಭರಣಗಳನ್ನು ತರುವಾಗ ಅನ್ವಯವಾಗುತ್ತಿದ್ದ ಮೌಲ್ಯದ ಮಿತಿ’ಯನ್ನು (Value Cap) ಸಂಪೂರ್ಣವಾಗಿ ತೆಗೆದುಹಾಕಲಾಗಿದ್ದು, ಕೇವಲ ತೂಕದ ಮಿತಿಯನ್ನು ಮಾತ್ರ ಉಳಿಸಿಕೊಳ್ಳಲಾಗಿದೆ. 

ವಿದೇಶದಲ್ಲಿ ಒಂದು ವರ್ಷಕ್ಕಿಂತ ಹೆಚ್ಚು ಕಾಲ ನೆಲೆಸಿ ಭಾರತಕ್ಕೆ ಮರಳುವ ಅರ್ಹ ನಿವಾಸಿಗಳು ಅಥವಾ ಭಾರತೀಯ ಮೂಲದ ಪ್ರವಾಸಿಗರು ಇನ್ನು ಮುಂದೆ ಆಭರಣದ ಬೆಲೆಯನ್ನು ಲೆಕ್ಕಿಸದೆ, ಕೇವಲ ತೂಕದ ಆಧಾರದ ಮೇಲೆ ಸುಂಕ ರಹಿತವಾಗಿ ಚಿನ್ನವನ್ನು ತರಬಹುದು. ಪರಿಷ್ಕೃತ ನಿಯಮದಂತೆ ಮಹಿಳಾ ಪ್ರಯಾಣಿಕರು ಗರಿಷ್ಠ 40 ಗ್ರಾಂ, ಪುರುಷರು 20 ಗ್ರಾಂ ಮತ್ತು 15 ವರ್ಷದೊಳಗಿನ ಮಕ್ಕಳು ಕೂಡ 40 ಗ್ರಾಂ ವರೆಗೆ ಚಿನ್ನದ ಆಭರಣಗಳನ್ನು ಯಾವುದೇ ಕಸ್ಟಮ್ಸ್ ಸುಂಕವಿಲ್ಲದೆ ತರಲು ಅವಕಾಶವಿದೆ. 

ಹಳೆಯ ಮತ್ತು ಹೊಸ ನಿಯಮಗಳ ವ್ಯತ್ಯಾಸ

 ಹಳೆಯ ನಿಯಮದಂತೆ ಮಹಿಳೆಯರಿಗೆ 40 ಗ್ರಾಂ ಚಿನ್ನಕ್ಕೆ 1 ಲಕ್ಷ ರೂಪಾಯಿ ಹಾಗೂ ಪುರುಷರಿಗೆ 20 ಗ್ರಾಂಗೆ 50,000 ರೂಪಾಯಿ ಮೌಲ್ಯದ ಮಿತಿ ಇತ್ತು. ಪ್ರಸ್ತುತ ಚಿನ್ನದ ಬೆಲೆ ಗಗನಕ್ಕೇರಿರುವುದರಿಂದ, ಹಳೆಯ ನಿಯಮದಡಿ ಪುರುಷರು ಕೇವಲ 3 ಗ್ರಾಂ ಚಿನ್ನವನ್ನಷ್ಟೇ ತರಲು ಸಾಧ್ಯವಾಗುತ್ತಿತ್ತು. ಈಗ ಮೌಲ್ಯದ ಮಿತಿ ರದ್ದಾಗಿರುವುದರಿಂದ, ಮಹಿಳೆಯರು ಇಂದಿನ ದರದಲ್ಲಿ ಸುಮಾರು 6 ಲಕ್ಷ ರೂಪಾಯಿ ಮೌಲ್ಯದ ಚಿನ್ನವನ್ನು ನಿರ್ಭೀತಿಯಿಂದ ತರಬಹುದಾಗಿದೆ.

ನಿಗದಿಪಡಿಸಿದ ತೂಕಕ್ಕಿಂತ ಹೆಚ್ಚಿನ ಪ್ರಮಾಣದ ಚಿನ್ನ ಅಥವಾ ಬೆಳ್ಳಿಯನ್ನು ತರಲು ಬಯಸುವವರು ಅನ್ವಯವಾಗುವ ಆಮದು ಸುಂಕವನ್ನು ಪಾವತಿಸಬೇಕಾಗುತ್ತದೆ. ಸೆಸ್ ಮತ್ತು ಜಿಎಸ್‌ಟಿ ಸೇರಿದಂತೆ ಒಟ್ಟು ಕಸ್ಟಮ್ಸ್ ಸುಂಕವು ಸುಮಾರು ಶೇಕಡಾ 9 ರಷ್ಟಾಗಲಿದ್ದು, ಇದಕ್ಕೆ ಸಂಬಂಧಿಸಿದ ಅಧಿಕೃತ ಖರೀದಿ ರಸೀದಿಗಳನ್ನು ಹಾಜರುಪಡಿಸುವುದು ಕಡ್ಡಾಯವಾಗಿದೆ ಎಂದು ಸರ್ಕಾರ ಸ್ಪಷ್ಟಪಡಿಸಿದೆ.

Baggage Rules 2026 Big Relief for Gold Import

Baggage Rules 2026 Big Relief for Gold Import
Baggage Rules 2026 Big Relief for Gold Import
ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor