3 ತಿಂಗಳಿಂದ ವಿದ್ಯಾರ್ಥಿನಿಯನ್ನ ಫಾಲೋ ಮಾಡ್ತಿದ್ದ ಕಿಡಿಗೇಡಿ ಅಕ್ಕಪಡೆ ಬಲೆಗೆ! ಎಚ್ಚರ, ಮೊನ್ನೆ ಬ್ಬ, ನಿನ್ನೆ ಮತ್ತೊಬ್ಬ

Shivamogga Akka Pade Operation  ಶಿವಮೊಗ್ಗದಲ್ಲಿ ಮಹಿಳೆಯರ ಸುರಕ್ಷತೆಗೆ ಎಂದೆ ಚಾಲನೆಗೆ ತಂದಿರುವ ‘ಅಕ್ಕ ಪಡೆ’ (Akka Pade) ಇನ್ನೊಂದು ಕಾರ್ಯಾಚರಣೆಯಲ್ಲಿ ಯಶಸ್ಸು ಕಂಡಿದೆ. ಅಕ್ಕಪಡೆ ಸಿಬ್ಬಂಧಿ ಫುಲ್ ಆಕ್ಟಿವ್ ಆಗಿದ್ದು, ಮಹಿಳೆಯರಿಗೆ ಕಿರುಕುಳ ನೀಡುವ ಪುಂಡರ ವಿರುದ್ಧ ಸರಣಿ ಕಾರ್ಯಾಚರಣೆ ನಡೆಸಿದೆ. ಎರಡು ದಿನಗಳ ಹಿಂದೆ ಮಹಿಳೆಯೊಬ್ಬರಿಗೆ ರಸ್ತೆಯಲ್ಲಿ ಕಿರುಕುಳ ನೀಡುತ್ತಿದ್ದ ವ್ಯಕ್ತಿಯೊಬ್ಬನನ್ನ ವಶಕ್ಕೆ ಪಡೆದು ವಾರ್ನಿಂಗ್ ಕೊಟ್ಟು ಪಿಟ್ಟಿ ಕೇಸ್​​ ಹಾಕಿತ್ತು ಅಕ್ಕಪಡೆ ಇದೀಗ ಹಾಸ್ಟೆಲ್ ಒಂದರ ವಿದ್ಯಾರ್ಥಿನಿಯನ್ನು ಹಿಂಬಾಲಿಸುತ್ತಿದ್ದ ಮತ್ತೋರ್ವನನ್ನು ಠಾಣೆಗೆ ಎಳೆದು ತಂದು ಕೇಸ್ ಹಾಕಿದೆ. 

SUNCONTROL_FINAL-scaled

ಕಳೆದ ಮೂರು ತಿಂಗಳಿನಿಂದ ವ್ಯಕ್ತಿಯೊಬ್ಬ ಹಾಸ್ಟೆಲ್ ಒಂದರ ವಿದ್ಯಾರ್ಥಿನಿಯನ್ನು ಹಿಂಬಾಲಿಸಿಕೊಂಡು ಬರುತ್ತಿದ್ದನಂತೆ. ಅಕ್ಕಪಡೆ ಶಾಲೆ ಹಾಸ್ಟೆಲ್​ಗಳಲ್ಲಿ ಜಾಗೃತಿ ಮೂಡಿಸುತ್ತಿದ್ದರ ಫಲವಾಗಿ ವಿದ್ಯಾರ್ಥಿನಿ ಒಬ್ಬಳಿಗೆ ಮಾನಸಿಕ ಕಿರುಕುಳದ ಬಗ್ಗೆ ಅಕ್ಕಪಡೆಗೆ ಗೊತ್ತಾಗಿದೆ. ಹಾಗಾಗಿ ರೆಡ್ ಹ್ಯಾಂಡ್ ಆಗಿ ಹಿಡಿಯಲು ನಿರ್ಧರಿಸಿದ ಅಕ್ಕಪಡೆ ಫೆಬ್ರವರಿ 03 ರಂದು ಬೆಳಿಗ್ಗೆ ಕಾರ್ಯಾಚರಣೆ ನಡೆಸಿ, ಆರೋಪಿಯನ್ನು ರೆಡ್ ಹ್ಯಾಂಡ್ ಆಗಿ ಹಿಡಿದು ಠಾಣೆಗೆ ಕರೆತಂದಿದ್ದಾರೆ. ವಿಚಾರಣೆಗೆ ಒಳಪಡಿಸಿ  Petty Case ದಾಖಲಿಸಿ ವಾರ್ನಿಂಗ್ ಕೊಟ್ಟಿದ್ದಾರೆ.

Shivamogga Akka Pade Operation
Shivamogga Akka Pade Operation

ಶಿವಮೊಗ್ಗ ಸೋಗಾನೆ ಜೈಲಿನಲ್ಲಿ ಗೋಡೆ ಮೇಲಿಂದ ಹಾರಿಬಂತು 230 ಗ್ರಾಂ ಗಾಂಜಾ-ಮೊಬೈಲ್..?

ಎರಡು ದಿನಗಳ ಹಿಂದೆಯಷ್ಟೇ ನಗರದಲ್ಲಿ ಇದೇ ರೀತಿಯ ಘಟನೆಯೊಂದು ವರದಿಯಾಗಿತ್ತು. ಸಾರ್ವಜನಿಕ ಸ್ಥಳದಲ್ಲಿ ಮಹಿಳೆಯರಿಗೆ ಅನಗತ್ಯವಾಗಿ ತೊಂದರೆ ನೀಡುತ್ತಿದ್ದ ಮತ್ತು ಕಿರುಕುಳ ಕೊಡುತ್ತಿದ್ದ ವ್ಯಕ್ತಿಯೊಬ್ಬನನ್ನು ಅಕ್ಕ ಪಡೆ ಪೊಲೀಸರು ವಶಕ್ಕೆ ಪಡೆದು ಬಿಸಿ ಮುಟ್ಟಿಸಿದ್ದರು. ಇನ್ನೂ  ಸಾರ್ವಜನಿಕ ಸ್ಥಳಗಳಲ್ಲಿ ಮಹಿಳೆಯರಿಗೆ ಮತ್ತು ವಿದ್ಯಾರ್ಥಿನಿಯರಿಗೆ ಯಾರೇ ಆಗಲಿ ತೊಂದರೆ ಕೊಡುವುದು, ಹಿಂಬಾಲಿಸುವುದು ಅಥವಾ ಅಸಭ್ಯವಾಗಿ ವರ್ತಿಸುವುದು ಕಂಡುಬಂದರೆ ಅಂತಹವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಶಿವಮೊಗ್ಗ ಜಿಲ್ಲಾ ಪೊಲೀಸ್ ಇಲಾಖೆ ಎಚ್ಚರಿಕೆ ನೀಡಿದೆ. ಸಾರ್ವಜನಿಕರು ಇಂತಹ ಘಟನೆಗಳು ಕಂಡುಬಂದಲ್ಲಿ ಕೂಡಲೇ 112 ಸಹಾಯವಾಣಿಗೆ ಕರೆ ಮಾಡಬಹುದು 

ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ದ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಸುದ್ದಿಗಳಿಂದ ಸ್ತಳೀಯ ವಿಶೇಷ ವಿಡಿಯೋ ಸುದ್ದಿಗಳನ್ನು ನೀವು ನೋಡಬಹುದು…ಇಲ್ಲಿದೆ ಅವುಗಳ ಲಿಂಕ್  Facebook whatsapp  , whatsapp chanel  instagram,  youtube,  telegram , ನಮ್ಮದು ಅಧಿಕೃತವಾದ ಮತ್ತು ಉತ್ಪ್ರೇಕ್ಷೆಗಳಲ್ಲಿದ ನೈಜ ಸುದ್ದಿಯ ಸಂಸ್ಥೆ. ನಮ್ಮ ಬಗ್ಗೆ  google business, ನಲ್ಲಿ ಮಾಹಿತಿ ಪಡೆಯಬಹುದು. ಅಲ್ಲದೆ   malenadu today epaper malenadutoday web ನಲ್ಲಿ ಆಯಾ ದಿನದ ಈ ಪೇಪರ್​ಗಳನ್ನು ಕ್ಲಿಕ್ ಮಾಡಿ ಓದಬಹುದು. 

Shivamogga Akka Pade Operation
Shivamogga Akka Pade Operation

ಶಿವಮೊಗ್ಗದ ಬೀನಾಗೆ ಪಿ ಹೆಚ್ ಡಿ

ಶಿವಮೊಗ್ಗ ನ್ಯೂಸ್: ಅಕ್ಕ ಪಡೆಯಿಂದ ಮತ್ತೊಂದು ಕಾರ್ಯಾಚರಣೆ, ಹಾಸ್ಟೆಲ್ ವಿದ್ಯಾರ್ಥಿನಿಗೆ ಕಾಡುತ್ತಿದ್ದವನ ಬಂಧನ. Shivamogga Akka Pade Operation Man Arrested for Stalking Hostel Student – Malenadu Today News.
SUNCONTROL_FINAL-scaled
ಶಿವಮೊಗ್ಗ ಏರ್‌ಪೋರ್ಟ್ ಕಚೇರಿ ಉದ್ಘಾಟನೆ ಶಿವಮೊಗ್ಗ ಎಸ್​ಪಿ ನೈಟ್ ರೌಂಡ್ಸ್​ ಶಿವಮೊಗ್ಗಕ್ಕೆ ಬಂದ ಅಲೋಕ್​ ಕುಮಾರ್​ ಮಲೆನಾಡಲ್ಲಿ ಇಷ್ಟೆಲ್ಲಾ ಆಯ್ತು