ಶಿವಮೊಗ್ಗ: ಫೇಸ್‌ಬುಕ್ ಜಾಹೀರಾತು ನಂಬಿ 61 ಲಕ್ಷ ರೂ. ಕಳೆದುಕೊಂಡ ವ್ಯಕ್ತಿ

This Article Written by / Prathapa thirthahalli / ಫೆಬ್ರವರಿ 4, 2026

Investment Scam

ಶಿವಮೊಗ್ಗ |ನಗರದ ವ್ಯಕ್ತಿಯೊಬ್ಬರು ಫೇಸ್‌ಬುಕ್‌ನಲ್ಲಿ ಬಂದ ಜಾಹೀರಾತನ್ನು ನಂಬಿ ಬರೋಬ್ಬರಿ 61 ಲಕ್ಷ ರೂಪಾಯಿಗಳನ್ನು ಕಳೆದುಕೊಂಡಿರುವ ಘಟನೆ ನಡೆದಿದೆ. ಈ ವಂಚನೆಯ ಕುರಿತು ನಗರದ ಸಿಇಎನ್ (CEN) ಪೊಲೀಸ್ ಠಾಣೆಯಲ್ಲಿದೂರು ದಾಖಲಾಗಿದೆ. 

ಘಟನೆಯ ವಿವರ 

ಸಂತ್ರಸ್ತರು ಫೇಸ್‌ಬುಕ್ ಬಳಸುತ್ತಿದ್ದಾಗ LF Work ಎಂಬ ಹೆಸರಿನ ಕಂಪನಿಯ ಜಾಹೀರಾತು ಕಾಣಿಸಿಕೊಂಡಿದೆ. ಅದರಲ್ಲಿ ಚಿನ್ನ (Gold) ಮತ್ತು ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡಿದ್ರೆ ಕಡಿಮೆ ಸಮಯದಲ್ಲಿ ಹೆಚ್ಚಿನ ಲಾಭಾಂಶ ನೀಡುವುದಾಗಿ ನಂಬಿಸಲಾಗಿತ್ತು. ಈ ಆಮಿಷಕ್ಕೆ ಒಳಗಾದ ವ್ಯಕ್ತಿ, ವಂಚಕರು ನೀಡಿದ ಲಿಂಕ್ ಮೂಲಕ ಮೊಬೈಲ್ ಅಪ್ಲಿಕೇಶನ್ ಒಂದನ್ನ ಡೌನ್‌ಲೋಡ್ ಮಾಡಿಕೊಂಡಿದ್ದಾರೆ. 

ಅಪ್ಲಿಕೇಶನ್ ಇನ್‌ಸ್ಟಾಲ್ ಆದ ಕೂಡಲೇ ಅವರನ್ನು ‘LG(LF-work)4988 Official Group’ ಎಂಬ ವಾಟ್ಸಾಪ್ ಗುಂಪಿಗೆ ಸೇರಿಸಲಾಗಿದೆ. ಆಪ್‌ನಲ್ಲಿ ಕೇಳಲಾದ ಹೆಸರು, ವಿಳಾಸ, ಮೊಬೈಲ್ ಸಂಖ್ಯೆ ಮತ್ತು ಬ್ಯಾಂಕ್ ಖಾತೆ ವಿವರಗಳನ್ನು ಭರ್ತಿ ಮಾಡಿದ ನಂತರ, ವಂಚಕರು ಅವರಿಗೆ ವಿವಿಧ ಯುಪಿಐ (UPI) ಐಡಿಗಳನ್ನು ನೀಡಿ ಹಣ ವರ್ಗಾಯಿಸುವಂತೆ ಹೇಳಿದ್ದಾರೆ.

ಅದನ್ನು ನಂಬಿದ ವ್ಜಕ್ತಿ ಹಂವನ್ನು ಹಾಕಲು ಮುಂದಾಗಿದ್ದಾರೆ.  ಆಶ್ಚರ್ಯವೆಂದ್ರೆ ಸಂತ್ರಸ್ತರು ಹಣ ಪಾವತಿಸಿದ ತಕ್ಷಣವೇ ಆ ಯುಪಿಐ ಐಡಿಗಳನ್ನು ಡಿಲೀಟ್ ಮಾಡಲಾಗುತ್ತಿತ್ತು.ಹಂತ ಹಂತವಾಗಿ ಒಟ್ಟು 61,00,000 ರೂಪಾಯಿಗಳನ್ನು ಸಂತ್ರಸ್ತರಿಂದ ವರ್ಗಾಯಿಸಿಕೊಳ್ಳಲಾಗಿದೆ. ಲಾಭಾಂಶವೂ ಇಲ್ಲದೆ, ಅಸಲು ಹಣವೂ ವಾಪಸ್ ಬಾರದೇ ಇದ್ದಾಗ ತಾವು ವಂಚನೆಗೆ ಒಳಗಾಗಿರುವುದು ವ್ಯಕ್ತಿಗೆ ತಿಳಿದಿದ್ದು ಸೈಬರ್​ ಠಾಣೆಯಲ್ಲಿ ದೂರನ್ನು ನೀಡಿದ್ದಾರೆ. 

Investment Scam Shivamogga Man Loses 61 Lakh

Investment Scam
Investment Scam

This Article Written by / Prathapa thirthahalli - Malenadu Today : ತೀರ್ಥಹಳ್ಳಿ ತಾಲ್ಲೂಕು ಗಬಡಿ ಮೂಲದ ಪತ್ರಕರ್ತ ಪ್ರತಾಪ್ ತೀರ್ಥಹಳ್ಳಿ ಕಳೆದ ಮೂರು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸದ್ಯ ಮಲೆನಾಡು ಟುಡೆಯಲ್ಲಿ content producer ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಮುಂದಿನ ಸುದ್ದಿ ಒದಿ