ಶಿವಮೊಗ್ಗ: ಪ್ರತಿನಿತ್ಯ ಇ,ಆರ್,ವಿ ಪೊಲೀಸರಿಗೆ ಒಂದಲ್ಲಾ ಒಂದು ಕೇಸ್ಗಳ ಸಲುವಾಗಿ ಫೋನ್ ಕರೆಗಳು ಬರುತ್ತಲೇ ಇರುತ್ತವೆ. ಈ ಹಿನ್ನೆಲೆ ಪೊಲೀಸರು ತಕ್ಷಣವೇ ಸ್ಥಳಕ್ಕೆ ತಲುಪಿ ಅದನ್ನು ಬಗೆಹರಿಸಿ ಬರುತ್ತಾರೆ. ಅದರಲ್ಲಿ ಕೆಲವೊಂದು ಆಯ್ದ ಸುದ್ದಿಗಳು ಈ ಚಟ್ ಪಟ್ ನ್ಯೂಸ್ನಲ್ಲಿವೆ ಓದಿ.
ಮದ್ಯಪಾನ ಮಾಡಿ ಕಾರಿನಲ್ಲಿ ಮಗುವಿನೊಂದಿಗೆ ಮಲಗಿದ ವ್ಯಕ್ತಿ
ಹೊಸಮನೆ ವ್ಯಾಪ್ತಿಯಲ್ಲಿ ವ್ಯಕ್ತಿಯೊಬ್ಬರು ಮದ್ಯಪಾನ ಮಾಡಿ ತನ್ನ ಎರಡು ವರ್ಷದ ಮಗುವಿನೊಂದಿಗೆ ಕಾರಿನಲ್ಲಿ ಮಲಗಿರುವ ಬಗ್ಗೆ ಸಾರ್ವಜನಿಕರು ಇ ಆರ್ ವಿ ಪೊಲೀಸರಿಗೆ ದೂರು ನೀಡಿದ್ದರು. ಸ್ಥಳಕ್ಕೆ ಧಾವಿಸಿದ ಪೊಲೀಸರು, ಆ ವ್ಯಕ್ತಿಯ ಮೊಬೈಲ್ ಮೂಲಕ ಕುಟುಂಬಸ್ಥರನ್ನು ಸಂಪರ್ಕಿಸಿ, ಮಗುವನ್ನು ಸುರಕ್ಷಿತವಾಗಿ ತಾಯಿಗೆ ಒಪ್ಪಿಸಿದ್ದಾರೆ. ಬಳಿಕ ಮದ್ಯಪಾನ ಮಾಡಿದ್ದ ವ್ಯಕ್ತಿಯನ್ನು ಬೇರೆ ವಾಹನದ ಮೂಲಕ ಅವರ ಮನೆಗೆ ತಲುಪಿಸುವ ವ್ಯವಸ್ಥೆ ಮಾಡಿದ್ದಾರೆ
Shivamogga 112 Police ಸಾಕು ನಾಯಿಯನ್ನು ಹೊರಬಿಟ್ಟಿದ್ದಕ್ಕೆ ಕಂಪ್ಲೆಂಟ್
ಜನೆವರಿ 17ರಂದು ತುಂಗಾನಗರ ಪೊಲೀಸ್ ಠಾಣಾ ವ್ಯಾಪ್ತಿಯ ಸಾರ್ವಜನಿಕರೊಬ್ಬರು ಕರೆ ಮಾಡಿ, ನೆರೆಮನೆಯ ವ್ಯಕ್ತಿಯೊಬ್ಬರು ತಮ್ಮ ಸಾಕು ನಾಯಿಯನ್ನು ಹೊರಗೆ ಬಿಟ್ಟಿರುವುದರಿಂದ ಸಾರ್ವಜನಿಕರ ಓಡಾಟಕ್ಕೆ ಹಾಗೂ ಅಕ್ಕಪಕ್ಕದವರಿಗೆ ತೀವ್ರ ತೊಂದರೆಯಾಗುತ್ತಿದೆ ಎಂದು ದೂರು ಪೊಲೀಸರಿಗೆ ದೂರು ನೀಡಿದ್ದರು. ಕೂಡಲೇ ಕಾರ್ಯಪ್ರವೃತ್ತರಾದ ಇಆರ್ವಿ ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ, ನಾಯಿಯ ಮಾಲೀಕರಿಗೆ ಇತರರಿಗೆ ತೊಂದರೆಯಾಗದಂತೆ ನಾಯಿಯನ್ನು ಕಟ್ಟಿಹಾಕಲು ಎಚ್ಚರಿಕೆ ಹಾಗೂ ಸೂಕ್ತ ತಿಳುವಳಿಕೆ ನೀಡಿದ್ದಾರೆ.
ಇಂಟರ್ ಲಾಕ್ ಮುರಿದು ಕಳ್ಳತನ
ಅದೇ ದಿನ ತುಂಗಾನಗರ ವ್ಯಾಪ್ತಿಯಲ್ಲಿ, ಮನೆಯೊಂದರ ಇಂಟರ್ ಲಾಕ್ ಮುರಿದು ಕಳ್ಳತನ ನಡೆದಿರುವ ಬಗ್ಗೆ ಮಾಲೀಕರು 112ಕ್ಕೆ ಮಾಹಿತಿ ನೀಡಿದ್ದರು. ಸ್ಥಳ ಪರಿಶೀಲನೆ ನಡೆಸಿದ ಸಿಬ್ಬಂದಿಗಳು ತಕ್ಷಣವೇ ಠಾಣೆಯ ಕ್ರೈಮ್ ವಿಭಾಗ ಹಾಗೂ ಬೆರಳಚ್ಚು ತಜ್ಞರ ತಂಡವನ್ನು ಕರೆಸಿ ತನಿಖೆಗೆ ಅಗತ್ಯ ಕ್ರಮ ಕೈಗೊಂಡು ದೂರನ್ನು ಮುಂದಿನ ಹಂತಕ್ಕೆ ವರ್ಗಾಯಿಸಿದ್ದಾರೆ.
Shivamogga 112 Police Emergency Response

