ಜನವರಿ 14,15 ರಂದು ಸಿಗಂದೂರು ಶ್ರೀ ಚೌಡೇಶ್ವರಿ ದೇವಿಯ ಜಾತ್ರಾ ಮಹೋತ್ಸವ : ಏನೆಲ್ಲಾ ಕಾರ್ಯಕ್ರಮ ಇರಲಿದೆ. 

ಹಂಚಿಕೊಳ್ಳಿ
WhatsApp Facebook X Telegram
Sigandur Jatre 2026 Sigandur Chowdeshwari Temple
Sigandur Jatre 2026 Sigandur Chowdeshwari Temple

ಶಿವಮೊಗ್ಗ  ಸಿಗಂದೂರು ಶ್ರೀ ಚೌಡೇಶ್ವರಿ ದೇವಿಯ ಜಾತ್ರಾ ಮಹೋತ್ಸವವು ಜನವರಿ 14 ಮತ್ತು 15 ರಂದು ಅತ್ಯಂತ ವೈಭವದಿಂದ ಜರುಗಲಿದೆ. ವಿಶೇಷವೆಂದರೆ, ಬಹುನಿರೀಕ್ಷಿತ ಸಿಗಂದೂರು ಸೇತುವೆ ಲೋಕಾರ್ಪಣೆಯಾದ ನಂತರ ನಡೆಯುತ್ತಿರುವ ಮೊದಲ ಜಾತ್ರೆ ಇದಾಗಿದ್ದು, ಈ ಬಾರಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುವ ನಿರೀಕ್ಷೆಯಿದೆ.

ಶಿವಮೊಗ್ಗ ಇಂಟರ್​ ಸಿಟಿ ಟ್ರೈನ್​ ಸೇರಿದಂತೆ ಹತ್ತಕ್ಕೂ ಹೆಚ್ಚು ಟ್ರೈನ್​ಗಳ ನಂಬರ್​ ಬದಲಾವಣೆ! ಹೊಸ ಸಂಖ್ಯೆ ತಿಳಿದುಕೊಳ್ಳಿ 

Sigandur Jatre 2026 ಜನವರಿ 14: ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳ ವಿವರ

ಜಾತ್ರೆಯ ಮೊದಲ ದಿನವಾದ ಜನವರಿ 14 ರಂದು ಮುಂಜಾನೆ 4 ಗಂಟೆಯಿಂದಲೇ ದೇವಿಗೆ ಮಹಾಭಿಷೇಕ, ಆಭರಣ ಅಲಂಕಾರ, ಗೋಪೂಜೆ ಮತ್ತು ಗುರುಪೂಜೆಗಳು ನೆರವೇರಲಿವೆ. ಬೆಳಿಗ್ಗೆ 8 ಗಂಟೆಗೆ ರಥಪೂಜೆಯೊಂದಿಗೆ ರಥ ಮತ್ತು ಪಲ್ಲಕ್ಕಿ ಉತ್ಸವವು ದೇವಿಯ ಮೂಲ ಸ್ಥಾನಕ್ಕೆ ಹೊರಡಲಿದೆ. ಇದೇ ವೇಳೆ ಚಂಡಿಕಾ ಹೋಮವೂ ಆರಂಭವಾಗಲಿದೆ.

ಮಧ್ಯಾಹ್ನ ಧರ್ಮಸಭೆ ನಡೆದರೆ, ಸಂಜೆ 6 ಗಂಟೆಗೆ ಆಕರ್ಷಕ ‘ಗಂಗಾರತಿ’ ಕಾರ್ಯಕ್ರಮ ನೆರವೇರಲಿದೆ. ಸಾಂಸ್ಕೃತಿಕ ಲೋಕದ ರಸದೌತಣವಾಗಿ ಅಂದು ಸಂಜೆ 7 ಗಂಟೆಗೆ ಖ್ಯಾತ ‘ಶಿವದೂತ ಗುಳಿಗ’ ನಾಟಕ ಪ್ರದರ್ಶನ ಹಾಗೂ ಸರಿಗಮಪ ಮತ್ತು ಎದೆತುಂಬಿ ಹಾಡುವೆನು ಕಲಾವಿದರಿಂದ ‘ಗಾನ ಮಯೂರಿ’ ಸಂಗೀತ ಕಾರ್ಯಕ್ರಮ ನಡೆಯಲಿದೆ. 

ಜನವರಿ 15: ಯಕ್ಷಗಾನ ವೈಭವ ಮತ್ತು ದೀಪ ಪೂಜೆ

ಜಾತ್ರೆಯ ಎರಡನೇ ದಿನವಾದ ಜನವರಿ 15 ರಂದು ನವಚಂಡಿಕಾ ಹೋಮ, ಮಹಾಪೂಜೆಗಳು ಜರುಗಲಿವೆ. ಸಂಜೆ 5 ಗಂಟೆಗೆ ಶ್ರೀ ಚಕ್ರ ಸಹಿತ ದುರ್ಗಾ ದೀಪ ಪೂಜೆ ಹಾಗೂ ರಂಗಪೂಜೆ ಆಯೋಜಿಸಲಾಗಿದೆ. ರಾತ್ರಿ 7 ಗಂಟೆಯಿಂದ ಕಲಾಭಿಮಾನಿಗಳಿಗಾಗಿ ಪಟ್ಲ ಸತೀಶ್ ಶೆಟ್ಟಿ ಅವರ ಭಾಗವತಿಕೆಯಲ್ಲಿ ಪಾವಂಜಿ ಮೇಳದವರಿಂದ ‘ದೇವಿ ಲಲಿತೋಪಖ್ಯಾನ’ ಯಕ್ಷಗಾನ ಪ್ರದರ್ಶನ ಏರ್ಪಡಿಸಲಾಗಿದೆ.

ಸೇತುವೆಯ ಸೌಲಭ್ಯವಿರುವುದರಿಂದ ಈ ಬಾರಿ ವಾಹನ ಸವಾರರಿಗೆ ಹಾಗೂ ಭಕ್ತರಿಗೆ ದರ್ಶನ ಸುಲಭವಾಗಲಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಭಾಗವಹಿಸಬೇಕೆಂದು ದೇವಾಲಯದ ಆಡಳಿತ ಮಂಡಳಿ ಪ್ರಕಟಣೆಯಲ್ಲಿ ವಿನಂತಿಸಿದೆ. 

Sigandur Jatre 2026 First Festival Post Bridge

ವಿಷಯಗಳು:
ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor