ಆಂಬ್ಯುಲೆನ್ಸ್ ರೆಡಿ ಇಟ್ಕೊಳ್ಳಿ! ನ್ಯೂ ಇಯರ್ ಪಾರ್ಟಿ ಹಿನ್ನೆಲೆ, ಆರೋಗ್ಯ ಇಲಾಖೆ ಸುತ್ತೋಲೆ! ಏನಿದು ಓದಿ

This Article Written by / ajjimane ganesh / ಡಿಸೆಂಬರ್ 30, 2025

ಹೊಸ ವರ್ಷ 2026 ಆಚರಣೆ ಕರ್ನಾಟಕ ಆರೋಗ್ಯ ಇಲಾಖೆಯಿಂದ ತುರ್ತು ಚಿಕಿತ್ಸಾ ಮಾರ್ಗಸೂಚಿ ಪ್ರಕಟ New Year 2026 Celebration Karnataka Health Dept Issues Emergency Medical Protocol

ಶಿವಮೊಗ್ಗ :  ಬೆಂಗಳೂರು :  ಹೊಸ ವರ್ಷ 2026 ರ ಸಂಭ್ರಮಾಚರಣೆಯ ಸಂದರ್ಭದಲ್ಲಿ ಯಾವುದೇ ಸಮಸ್ಯೆ ಆಗದಂತೆ ಎಚ್ಚರವಹಿಸುತ್ತಿರುವ ರಾಜ್ಯ ಸರ್ಕಾರ ಈ ನಿಟ್ಟಿನಲ್ಲಿ ತುರ್ತು ವೈದ್ಯಕೀಯ ಸೇವೆಗಳನ್ನು ಒದಗಿಸಲು ಮುಂದಾಗಿದೆ.  ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು  ಈ ಕುರಿತಂತೆ ಮಹತ್ವದ ಸುತ್ತೋಲೆಯನ್ನು ಹೊರಡಿಸಿದೆ. ಈ ಸುತ್ತೋಲೆಯಲ್ಲಿ  ದಿನಾಂಕ 31-12-2025 ರಿಂದ 01-01-2026 ರವರೆಗೆ ರಾಜ್ಯದ ವಿವಿಧೆಡೆ ಆಚರಣೆಗಳ ಸಮಯದಲ್ಲಿ ಯಾವುದೇ ಅಹಿತಕರ ಘಟನೆಗಳು ಸಂಭವಿಸದಂತೆ ಮುನ್ನೆಚ್ಚರಿಕೆ ವಹಿಸುವಂತೆ ತುರ್ತು ಸಮಯದಲ್ಲಿ ತತ್ತಕ್ಷಣದ ವೈದ್ಯಕೀಯ ನೆರವು ನೀಡುವಂತೆ ತನ್ನ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದೆ. 

ಇನ್ಮುಂದೆ ಸೂಪರ್​ ಫಾಸ್ಟ್ ಆಗಿ ಓಡಲಿವೆ ಶಿವಮೊಗ್ಗ ಟ್ರೈನ್ಸ್! ಬೆಂಗಳೂರು, ಯಶವಂತಪುರ , ಎಂಜಿಆರ್​ ಚೆನ್ನೈ ಇನ್ನೂ ಹತ್ತಿರ

ಜಿಲ್ಲಾ ಮಟ್ಟದ ಎಲ್ಲಾ ಸರ್ಕಾರಿ ಆಸ್ಪತ್ರೆಗಳಿಗೆ ವಿಶೇಷ ಸೂಚನೆಗಳನ್ನು ಈ ಸಂಬಂಧ ನೀಡಲಾಗಿದ್ದು ಹೊಸವರ್ಷದ ಸಂಭ್ರಮಾಚರಣೆಯ ಸಮಯದಲ್ಲಿ ಅಸ್ವಸ್ಥಗೊಳ್ಳುವ ಅಥವಾ ಅಪಘಾತಕ್ಕೀಡಾಗುವ ಸಾರ್ವಜನಿಕರಿಗಾಗಿ ಆಸ್ಪತ್ರೆಗಳಲ್ಲಿ ಪುರುಷ ಮತ್ತು ಮಹಿಳೆಯರಿಗೆ ಪ್ರತ್ಯೇಕ ಚಿಕಿತ್ಸಾ ಕೊಠಡಿಗಳ ವ್ಯವಸ್ಥೆ ಮಾಡುವಂತೆ ಸೂಚಿಸಿದೆ. ಅಲ್ಲದೆ  ವಿಶೇಷವಾಗಿ ಮಹಿಳೆಯರ ಕೊಠಡಿಗಳಲ್ಲಿ ಚಿಕಿತ್ಸೆ ನೀಡಲು ಮಹಿಳಾ ವೈದ್ಯಕೀಯ ಸಿಬ್ಬಂದಿಯನ್ನೇ ನಿಯೋಜಿಸಬೇಕು ತಿಳಿಸಲಾಗಿದೆ. 

 

ಕೇಂದ್ರ ಸರ್ಕಾರದ ಮಹತ್ವದ ಆದೇಶ : ಜನವರಿ ಅಂತ್ಯದವರೆಗೆ ಬೆಳೆ ಖರೀದಿ! ವಿವರ ಓದಿ

Emergency Medical Protocol

  • ತುರ್ತು ಸಂದರ್ಭಗಳಲ್ಲಿ ರೋಗಿಗಳನ್ನು ಸಾಗಿಸಲು ಆಂಬ್ಯುಲೆನ್ಸ್ ವಾಹನಗಳ ಸೌಲಭ್ಯ ಸದಾ ಸಿದ್ಧವಿರಬೇಕು 
  • ಆಸ್ಪತ್ರೆಗಳಲ್ಲಿ ಅಗತ್ಯ ಔಷಧಗಳ ದಾಸ್ತಾನು ಲಭ್ಯವಿರುವಂತೆ ವ್ಯವಸ್ಥೆ ಮಾಡಿಕೊಳ್ಳಬೇಕು 
  • ಸಾರ್ವಜನಿಕರಿಗೆ ಯಾವುದೇ ಹಂತದಲ್ಲಿ ಚಿಕಿತ್ಸೆಯ ಕೊರತೆಯಾಗದಂತೆ ಮತ್ತು ತುರ್ತು ಪರಿಸ್ಥಿತಿಯನ್ನು ಸಮರ್ಥವಾಗಿ ಎದುರಿಸಲು ಸಿದ್ಧವಾಗಿರಬೇಕು ಎಂದು ತಿಳಿಸಿದೆ. 
Emergency Medical Protocol
Emergency Medical Protocol

malenadutoday add

ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ಶಿವಮೊಗ್ಗವನ್ನೂ ಕೇಂದ್ರಿಕರಿಸಿಕೊಂಡು ಸ್ಥಳೀಯ ವಿಷಯಗಳಿಂದ ಸಕಲ ವಿಚಾರಗಳನ್ನು ಜನರಿಗೆ ಮುಟ್ಟಿಸುವ ಮಾಹಿತಿ ಸಂಸ್ಥೆಯಾಗಿದೆ. ನೀವು ನಮ್ಮನ್ನು Facebook whatsapp whatsapp chanel  instagram youtube telegram  google business   malenadu today epaper malenadutoday web ನಲ್ಲಿ ಬೆಂಬಲಿಸಬಹುದು.. ಸಾದ್ಯವಾದಷ್ಟು ನಮ್ಮ ಪ್ರಯತ್ನಕ್ಕೆ ನಿಮ್ಮ ಬೆಂಬಲವನ್ನು ನೀಡಿ..ಇಲ್ಲಿ ನಿಮ್ಮ ಸಹಕಾರವೇ ಮುಖ್ಯ!

ಹೊಸ ವರ್ಷ 2026 ಆಚರಣೆ ಕರ್ನಾಟಕ ಆರೋಗ್ಯ ಇಲಾಖೆಯಿಂದ ತುರ್ತು ಚಿಕಿತ್ಸಾ ಮಾರ್ಗಸೂಚಿ ಪ್ರಕಟ New Year 2026 Celebration Karnataka Health Dept Issues Emergency Medical Protocol

This Article Written by / ಅಜ್ಜಮನೆ ಗಣೇಶ, ಪತ್ರಕರ್ತ, ಸಮಯ, ಟಿವಿ9, ನ್ಯೂಸ್​ ಫಸ್ಟ್​ನಲ್ಲಿ ವೃತ್ತಿ ನಿರ್ವಹಿಸಿರುವ ಅನುಭವವಿದೆ. ಗಳಿಸಿದ ಅನುಭವದ ಅನುಭಾವದ ಜೊತೆಗೆ ಮಲೆನಾಡು ಟುಡೆಯಲ್ಲಿ ಸೀನಿಯ್​ ಜರ್ನಲಿಸ್ಟ್​ ಆಗಿ ಕೆಲಸ ನಿರ್ವಹಿಸುತ್ತಿರುವೆ

Malenadu Today News,ಕರ್ನಾಟಕ ಸರ್ಕಾರ,ಮಲೆನಾಡು ಟುಡೆ ಸುದ್ದಿ

ಮುಂದಿನ ಸುದ್ದಿ ಒದಿ