ಶಿವಮೊಗ್ಗದ ನಿರಂಜನಿ ರವೀಂದ್ರ ಅವರಿಗೆ ಸೌತ್ ಇಂಡಿಯನ್ ವುಮೆನ್ ಅಚೀವರ್ಸ್ ಅವಾರ್ಡ್

ಶಿವಮೊಗ್ಗ : ಟ್ವೆಲ್ ಮ್ಯಾಗಜೀನ್ ವತಿಯಿಂದ ಬೆಂಗಳೂರಿನಲ್ಲಿ ಆಯೋಜಿಸಲಾಗಿದ್ದ ಸೌತ್ ಇಂಡಿಯನ್ ವುಮೆನ್ ಅಚೀವರ್ಸ್ ಅವಾರ್ಡ್ (SIWAA) ವಿತರಣಾ ಸಮಾರಂಭದಲ್ಲಿ ನಗರದ ನಿರಂಜನಿ ರವೀಂದ್ರ ಅವರಿಗೆ ಔದ್ಯೋಗಿಕ ಸಾಧನೆಗಾಗಿ ಅತ್ಯುತ್ತಮ ಉದ್ಯಮಶೀಲ ಮಹಿಳೆ ಪ್ರಶಸ್ತಿ (Outstanding Entrepreneur Award) ನೀಡಿ ಗೌರವಿಸಲಾಯಿತು.

Shivamogga Entrepreneur Wins SIWAA 2025
Shivamogga Entrepreneur Wins SIWAA 2025

ರೈಲು ಪ್ರಯಾಣಿಕರ ಗಮನಕ್ಕೆ! ಶಿವಮೊಗ್ಗ-ಬೆಂಗಳೂರು ಜನಶತಾಬ್ದಿ ಸೇರಿ ಹಲವು ರೈಲುಗಳ ಸಂಚಾರದಲ್ಲಿ ವ್ಯತ್ಯಯ

ಸಾಮಾಜಿಕ ಉದ್ಯಮಿಯಾಗಿರುವ ನಿರಂಜನಿ ರವೀಂದ್ರ ಅವರು ಅರ್ಬನ್ ಇಂಡಿಯಾ ಎಕ್ಸಿಬಿಷನ್ ಸಂಸ್ಥೆಯ ಸಂಸ್ಥಾಪಕರಾಗಿದ್ದು, ಕರ್ನಾಟಕದ 15 ಟು-ಟೈರ್ ನಗರಗಳಿಗೆ ವಿನ್ಯಾಸಕಾರರು ಹಾಗೂ ಕರಕುಶಲ ಕಲಾವಿದರನ್ನು ಪರಿಚಯಿಸುವ ಮೂಲಕ ಸ್ಥಳೀಯ ಕಲಾವಿದರು, ನೇಕಾರರು ಹಾಗೂ ಹೊಸ ಮಹಿಳಾ ಉದ್ಯಮಿಗಳಿಗೆ ಅವಕಾಶ ಕಲ್ಪಿಸುತ್ತಿದ್ದಾರೆ. ಇವರು ಜರ್ಮನ್ ಸಿಲ್ವರ್ ಉತ್ಪನ್ನಗಳನ್ನು ಮಾರಾಟ ಮಾಡುವ House of Thanira ಇನ್ ಸ್ಟಾಗ್ರಾಂ ಸ್ಟೋರ್ ಹೊಂದಿದ್ದಾರೆ.

 ಗ್ರೋ ಗ್ರೀನ್ ಅಸೋಸಿಯೇಷನ್‌ನ ಅಧ್ಯಕ್ಷೆಯಾಗಿ ಪರಿಸರ ಸಂರಕ್ಷಣಾ ಕಾರ್ಯಕ್ರಮಗಳು, ಸಮುದಾಯ ಸೇವೆ ಮತ್ತು ಪುನರ್ವಸತಿ ಯೋಜನೆಗಳನ್ನು ನಡೆಸುತ್ತಿದ್ದಾರೆ. ಇವರು ಯೂತ್ ಫಾರ್ ಸೇವಾ ಸಂಸ್ಥೆಯ ಸಲಹಾ ಮಂಡಳಿಯ ಸದಸ್ಯೆಯೂ ಆಗಿದ್ದಾರೆ.

ಸಮಾವೇಶಿತ ಬೆಳವಣಿಗೆ, ಸ್ಥಿರ ಅಭಿವೃದ್ಧಿ ಮತ್ತು ಮಹಿಳಾ ನೇತೃತ್ವದ ಉದ್ಯಮಗಳಿಗೆ ನೀಡಿದ ಮಹತ್ವದ ಕೊಡುಗೆಗಾಗಿ ನಿರಂಜನಿ ರವೀಂದ್ರ ವರಿಗೆ ಈ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

Shivamogga Entrepreneur Wins SIWAA 2025

Shivamogga Entrepreneur Wins SIWAA 2025
Shivamogga Entrepreneur Wins SIWAA 2025