KARNATAKA NEWS/ ONLINE / Malenadu today/ Apr 27, 2023 GOOGLE NEWS
ಶಿವಮೊಗ್ಗ/ ಶಿವಮೊಗ್ಗ ನಗರದಲ್ಲಿ ನಾಳೆ ಅಂದರೆ ಏಪ್ರಿಲ್ 28 ರಂದು ನಿರ್ದಿಷ್ಟ ಬಡಾವಣೆಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ. ಈ ಸಂಬಂಧ ಮೆಸ್ಕಾಂ ಶಿವಮೊಗ್ಗ ಪ್ರಕಟಣೆಯನ್ನು ಹೊರಡಿಸಿದ್ದು, ಸಾರ್ವಜನಿಕರು ಸಹಕರಿಸುವಂತೆ ವಿನಂತಿಸಿದೆ.
ಓದಿ / ಶಿವಮೊಗ್ಗದಲ್ಲಿ ಬಸ್ ಹತ್ತಿದ ಎಸ್ಪಿ ಮಿಥುನ್ ಕುಮಾರ್, ಡಿಸಿ ಡಾ.ಆರ್ ಸೆಲ್ವಮಣಿ! ವಿವರ ಇಲ್ಲಿದೆ
ಪ್ರಕಟಣೆಯಲ್ಲಿ ಏನಿದೆ?
ಆಲ್ಕೊಳ ವಿದ್ಯುತ್ ವಿತರಣಾ ಕೇಂದ್ರದಿಂದ ಸರಬರಾಜಾಗುವ ಫೀಡರ್ ಎ.ಎಫ್-11 ರಲ್ಲಿ ತುರ್ತು ಕಾಮಗಾರಿ ಹಮ್ಮಿಕೊಂಡಿರುವುದರಿಂದ ಏ.28 ರ ಬೆಳಿಗ್ಗೆ 10 ರಿಂದ ಸಂಜೆ 6 ಗಂಟೆವರೆಗೆ ಈ ಕೆಳಕಂಡ ಪ್ರದೇಶದಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ.
ಇದನ್ನು ಕೂಡ ಓದಿ- ಶಿವಮೊಗ್ಗದಲ್ಲಿ ಬಸ್ ಹತ್ತಿದ ಎಸ್ಪಿ ಮಿಥುನ್ ಕುಮಾರ್, ಡಿಸಿ ಡಾ.ಆರ್ ಸೆಲ್ವಮಣಿ! ವಿವರ ಇಲ್ಲಿದೆ
ಎಲ್ಲೆಲ್ಲಿ?
ಪೊಲೀಸ್ ಚೌಕಿ, ಶಿವಾಲಯ ಮತ್ತು ಮುಂಭಾಗ, ಮೇದಾರ್ ಕೇರಿ, ಲಕ್ಷ್ಮೀ ಟಾಕೀಸ್ ಎದುರು, ಡಿವಿಎಸ್ ಶಾಲೆ, ಬೊಮ್ಮನಕಟ್ಟೆ ರಸ್ತೆ, ವಿನೋಬನಗರ 100 ಅಡಿ ರಸ್ತೆ,
ವಿನೋಬನಗರ 60 ಅಡಿ ರಸ್ತೆ, ಸಾಯಿ ಬಾಬಾ ದೇವಸ್ಥಾನ, ಶುಭಮಂಗಳ ಕಲ್ಯಾಣ ಮಂದಿರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಮೆಸ್ಕಾಂ ತಿಳಿಸಿದೆ.
ಇದನ್ನು ಕೂಡ ಓದಿ- ಶಿವಮೊಗ್ಗದಲ್ಲಿ ಬಸ್ ಹತ್ತಿದ ಎಸ್ಪಿ ಮಿಥುನ್ ಕುಮಾರ್, ಡಿಸಿ ಡಾ.ಆರ್ ಸೆಲ್ವಮಣಿ! ವಿವರ ಇಲ್ಲಿದೆ
ಆಕಾಶವಾಣಿಯಲ್ಲಿ ಶಿವಮೊಗ್ಗ ಡಿಸಿ
ಆಕಾಶವಾಣಿ ಭದ್ರಾವತಿ FM 103.5 MHZ ಹಾಗೂ MW 675 Khz ನಲ್ಲಿ ಶುಕ್ರವಾರ (28-04-23) ಬೆಳಿಗ್ಗೆ 7.15 ರಿಂದ 7.30 ರ ವರೆಗೆ ಮೇ 10ರಂದು ನಡೆಯುವ ವಿಧಾನ ಸಭೆ ಚುನಾವಣೆಗೆ ಸಂಭಂದಿಸಿದಂತೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.
ಚುನಾವಣೆಯಲ್ಲಿ ಮತದಾನದ ಮಹತ್ವ ಸಾರ್ವಜನಿಕರ ಕರ್ತವ್ಯ ಮತ್ತು ಜವಾಬ್ದಾರಿ ಮತ್ತು ಯಾವದಖಲೆಯೊಂದಿಗೆ ಮತ ಚಲಾಯಿಸಬಹುದು ಹಾಗೂ ಚುನಾವಣಾ ತಯಾರಿ ಕುರಿತು ಈ ಕಾರ್ಯಕ್ರಮ ಆಯೋಜಿಸಲಾಗಿದೆ.
ಶಿವಮೊಗ್ಗ ಜಿಲ್ಲಾ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಚುನಾವಣಾ ಆಧಿಕಾರಿಗಳಾದ ಡಾ.ಸೆಲ್ವಮಣಿ ಆರ್ (IAS) ಹಾಗೂ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಗಳಾದ ಸ್ನೇಹಲ್ ಸುಧಾಕರ ಲೋಖಂಡೆ (IAS) ಅವರೊಂದಿಗೆ ವಿಶೇಷ ಸಂದರ್ಶನ ಪ್ರಸಾರವಾಗಲಿದೆ.
ಶುಕ್ರವಾರ ಬೆಳಿಗ್ಗೆ 7.15 ರಿಂದ 7.30 ರವರೆಗೆ ಈಕಾರ್ಯಕ್ರಮವನ್ನು .ಪ್ರಸಾರ ಸಮಯದಲ್ಲಿ App ನಲ್ಲೂ ಕೇಳಬಹುದು. Listen to AIR Kannada Radio live on Prasar Bharati’s NewsOnAir App. Download the App from https://plaapps/details?id=com.parsarbharti.airnews. .
Malenadutoday.com Social media