ಕೈಯಲ್ಲಿ ಖಾರದ ಪುಡಿ, ಡ್ರಾಗರ್‌ ಹಿಡಿದು ಶರಾವತಿ ನಗರದಲ್ಲಿ ದರೋಡೆಗೆ ಸ್ಕೆಚ್‌! ರೌಡಿಶೀಟರ್‌ ಎಸ್ಕೇಪ್‌! ಇಬ್ಬರು ಅರೆಸ್ಟ್

ಹಂಚಿಕೊಳ್ಳಿ
WhatsApp Facebook X Telegram

Shivamogga  Mar 26, 2024 robbery in Sharavathi Nagar  ಶಿವಮೊಗ್ಗ ದೊಡ್ಡಪೇಟೆ ಪೊಲೀಸರು ಮಹತ್ವದ ಕಾರ್ಯಾಚರಣೆಯೊಂದನ್ನ ನಡೆಸಿ ದರೋಡೆಗೆ ಸ್ಕೆಚ್‌ ಹಾಕಿದ್ದವರ ವಿರುದ್ಧ ಕೇಸ್‌ ದಾಖಲಿಸಿದೆ. ಶಿವಮೊಗ್ಗ ನಗರದ ಶರಾವತಿ ನಗರ ಚಾನಲ್‌ ಬಳಿ ದರೋಡೆ ಸ್ಕೆಚ್‌ ರೂಪಿಸಿದ ಆರೋಪದ ಮೇರೆಗೆ ಪೊಲೀಸರು ರೇಡ್‌ ನಡೆಸಿದ್ದಾರೆ. ಕಳೆದ ಮಾರ್ಚ್‌ 23 ರಂದು ಈ ಘಟನೆ ನಡೆದಿದೆ. 

ಅಪಾಯಕಾರಿಯಾದ ಮಾರಕಾಸ್ತ್ರ ಹಿಡಿದು, ಕಾರದ ಪುಡಿಯೊಂದಿಗೆ ಶರಾವತಿ ನಗರದಿಂದ ವಿನೋಬನಗರಕ್ಕೆ ಹೋಗುವವರ ಮೇಲೆ ಅಟ್ಯಾಕ್‌ ಮಾಡಲು ಟೀಂ ಸಿದ್ದವಾಗಿತ್ತು ಎನ್ನಲಾಗಿದೆ. ಇದೇ ವೇಳೇ ಪೊಲೀಸರು ಹೊಂಚು ಹಾಕುತ್ತಿದ್ದ ಟೀಂ ಮೇಲೆ ದಾಳಿ ಮಾಡಿದ್ದಾರೆ. ಈ ರೇಡ್‌ನಲ್ಲಿ ಇಬ್ಬರನ್ನ ಅರೆಸ್ಟ್‌ ಮಾಡಲಾಗಿದ್ದು ಒಟ್ಟು ಐವರ ವಿರುದ್ಧ ಕೇಸ್‌ ದಾಖಲಾಗಿದೆ ಮೂವರು ಎಸ್ಕೇಪ್‌ ಆಗಿರುವುದಾಗಿ ತಿಳಿದು ಬಂದಿದೆ. 

ಶಿವಮೊಗ್ಗ ನಗರದ ರೌಡಿಶೀಟರ್‌ ಸೇರಿದಂತೆ ಮೂವರು ಎಸ್ಕೇಪ್‌ ಆಗಿರುವ ಮಾಹಿತಿ ಪೊಲೀಸರ  (Doddpete Police Station) ಬಳಿಯಿದ್ದು, ಆತನನ್ನು ಅರೆಸ್ಟ್‌ ಮಾಡಲು ಟೀಂ ರಚಿಸಲಾಗಿದೆ. 

ಹಂಚಿಕೊಳ್ಳಿ
WhatsApp Facebook X Telegram
Malenadu Today
ಲೇಖಕರ ಬಗ್ಗೆ

Malenadu Today

Malenadu Today Contributor