ಮನೆ ಹತ್ತಿರ ಡ್ರಾಪ್‌ ಕೊಡ್ತೀನಿ ಅಂತಾ ಬಾಲಕನ ಕಿಡ್ನ್ಯಾಪ್!‌ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಹಲ್ಲೆ! ಫೋಷಕರೇ ಹುಷಾರ್!

ಹಂಚಿಕೊಳ್ಳಿ
WhatsApp Facebook X Telegram
ಮನೆ ಹತ್ತಿರ ಡ್ರಾಪ್‌ ಕೊಡ್ತೀನಿ ಅಂತಾ ಬಾಲಕನ ಕಿಡ್ನ್ಯಾಪ್!‌ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಹಲ್ಲೆ!  ಫೋಷಕರೇ ಹುಷಾರ್!

shivamogga Mar 22, 2024 ಶಿವಮೊಗ್ಗ ನಗರದಲ್ಲಿ ಆತಂಕಕಾರಿ ಘಟನೆಯೊಂದು ನಡೆದಿದೆ. ಅಪ್ರಾಪ್ತ ಬಾಲಕನೊಬ್ಬನನ್ನ ಆತನಿದ್ದ ಏರಿಯಾಕ್ಕೆ ಹೋಗುತ್ತೇನೆ ಎಂದು ಸ್ಕೂಟರ್‌ನಲ್ಲಿ ಕೂರಿಸಿಕೊಂಡು ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಆತನ ಬಳಿ ದುರ್ವರ್ತನೆ ತೋರಿದ ಸಂಬಂಶ ಮೂರು ಐಪಿಸಿ ಸೆಕ್ಷನ್‌ ಅಡಿಯಲ್ಲಿ ಶಿವಮೊಗ್ಗ  ಜಿಲ್ಲೆಯ ಸ್ಟೇಷನ್‌ ಒಂದರಲ್ಲಿ ಎಫ್‌ಐಆರ್‌ ದಾಖಲಾಗಿದೆ. (ಅಪ್ರಾಪ್ತನಿಗೆ ಸಂಬಂಧಿಸಿದ ವೈಯಕ್ತಿಕ ಮಾಹಿತಿಯನ್ನು ಗೌಪ್ಯವಾಗಿ ಇಡಲಾಗಿದೆ)

ನಡೆದಿದ್ದೇನು? 

ಸದ್ಯ ಪ್ರಕರಣವನ್ನು ಶಿವಮೊಗ್ಗ ಪೊಲೀಸರು ಗಂಭೀರವಾಗಿ ಪರಿಗಣಿಸಿದಂತೆ ಕಾಣುತ್ತಿದೆ. ಅಪ್ತಾಪ್ತನಿಂದ ವಿಷಯ ತಿಳಿದು ಆತನ ಕುಟುಂಬಸ್ಥರು ನೀಡಿದ ದೂರಿನಂತೆ ಇಬ್ಬರು ಅಪರಿಚಿತರ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ. ಇನ್ನೂ ನಡೆದ ಘಟನೆ ಗಮನಿಸುವುದಾದರೆ, ಅಪ್ತಾಪ್ತನೊಬ್ಬ ತನ್ನ ಮನೆಗೆ ಹೋಗಲು ಬಸ್‌ಗೆ ಕಾಯುತ್ತಿದ್ದ ಸಂದರ್ಭದಲ್ಲಿ ವ್ಯಕ್ತಿಯೊಬ್ಬ ಸ್ಕೂಟರ್‌ನಲ್ಲಿ ಅಲ್ಲಿಗೆ ಬಂದಿದ್ದಾನೆ. ಅಪ್ರಾಪ್ತನನ್ನ ಆತನ ಎರಿಯಾಕ್ಕೆ ಬಿಡುವುದಾಗಿ ಹೇಳಿ ಹತ್ತಿಸಿಕೊಂಡಿದ್ದಾನೆ. ಅದೇ ವೇಳೆ ಇನ್ನೊಬ್ಬ ಅಪ್ತಾಪ್ತನ ಹಿಂದೆ ಕೂತಿದ್ದಾನೆ. ಈ ವೇಳೆ ಬಾಲಕ ವಿರೋದ ವ್ಯಕ್ತಪಡಿಸಿ ಇಳಿಯಲು ಮುಂದಾದಾಗ, ಆತನ ಬಾಯಿ ಒತ್ತಿ ಅಲ್ಲಿಂದ ಕರೆದೊಯ್ದಿದ್ದಾರೆ.

ಪುಟಾಣಿಯ ಏರಿಯಾಕ್ಕೆ ಬಿಡುತ್ತೇನೆ ಎಂದು ಹೇಳಿದವರು ನಿರ್ಜನ ಪ್ರದೇಶವೊಂದಕ್ಕೆ ಕರೆದೊಯ್ದು ಬಾಲಕನ ಬಟ್ಟೆ ಹರಿದು ಆತನ ಮೇಲೆ ಹಲ್ಲೆ ಮಾಡಿದ್ದಾರೆ. ಅವರ ಹಲ್ಲೆಯಿಂದ ಬಾಲಕನಿಗೆ ಪ್ರಜ್ಞೆ ತಪ್ಪಿದೆ. ಆನಂತರ ಜ್ಞಾನ ಬಂದ ಬಳಿಕ ಜೋರಾಗಿ ಕೂಗಿದ್ದಾನೆ. ಆರ್ತನಾದ ಕೇಳಿದ ಸ್ಥಳೀಯರು ಕಟ್ಟಿಹಾಕಿದ್ದ ಸ್ಥಿತಿಯಲ್ಲಿದ್ದ ಬಾಲಕನ ಕಟ್ಟು ಬಿಚ್ಚಿ ಅವರ ತಂದೆ ಕರೆ ಮಾಡಿದ್ದಾರೆ. ತಂದೆ ಮಗನನ್ನ ಕರೆದುಕೊಂಡು ಆಸ್ಪತ್ರೆಯೊಂದಕ್ಕೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಈ ಸಂಬಂಧ IPC 1860 (U/s-363,323,342,34) ಅಡಿಯಲ್ಲಿ ಕೇಸ್‌ ದಾಖಲಾಗಿದೆ. 

ವಿಷಯಗಳು:
ಹಂಚಿಕೊಳ್ಳಿ
WhatsApp Facebook X Telegram
Malenadu Today
ಲೇಖಕರ ಬಗ್ಗೆ

Malenadu Today

Malenadu Today Contributor