ಶಿವಮೊಗ್ಗ : ಶಿವಮೊಗ್ಗದ ತುಂಗಾ ಜಲಾಶಯದಲ್ಲಿ ಒಳಹರಿವು ಹೊರಹರಿವು ಎಷ್ಟಿದೆ ಇವತ್ತು ?

ಹಂಚಿಕೊಳ್ಳಿ
WhatsApp Facebook X Telegram
Tunga Dam Shivamogga Tunga Dam
Tunga Dam Shivamogga Tunga Dam

ಮಲೆನಾಡುಟುಡೆ ಸುದ್ದಿ/ ಶಿವಮೊಗ್ಗ: ಮಲೆನಾಡು ಭಾಗದಲ್ಲಿ ಮಳೆಯ ಪ್ರಮಾಣ ತಗ್ಗಿದ್ದರೂ, ಜಲಾನಯನ ಪ್ರದೇಶಗಳಿಂದ ಹರಿದುಬರುತ್ತಿರುವ ನೀರಿನಿಂದಾಗಿ ಶಿವಮೊಗ್ಗ ತಾಲೂಕಿನ ಗಾಜನೂರಿನಲ್ಲಿರುವ ತುಂಗಾ ಮೇಲ್ದಂಡೆ ಜಲಾಶಯವು ತನ್ನ ಗರಿಷ್ಠ ಸಾಮರ್ಥ್ಯವನ್ನು ತಲುಪಿ ಸಂಪೂರ್ಣವಾಗಿ ಭರ್ತಿಯಾಗಿದೆ. 

ಪ್ರಸ್ತುತ ತುಂಗಾ ಜಲಾಶಯಕ್ಕೆ 11,015 ಕ್ಯೂಸೆಕ್ ನೀರು ಒಳಹರಿವಾಗಿ ದಾಖಲಾಗಿದೆ. ಜಲಾಶಯವು ಈಗಾಗಲೇ ಗರಿಷ್ಠ ಮಟ್ಟವಾದ 588.24 ಮೀಟರ್ ತಲುಪಿರುವುದರಿಂದ ಬಂದಷ್ಟೇ ಪ್ರಮಾಣದ, ಅಂದರೆ 11,015 ಕ್ಯೂಸೆಕ್ ನೀರನ್ನು ವಿವಿಧ ಮಾರ್ಗಗಳ ಮೂಲಕ ಹೊರಗೆ ಬಿಡಲಾಗುತ್ತಿದೆ. ಇದರಲ್ಲಿ ಗರಿಷ್ಠ ಭಾಗವಾದ 9,595 ಕ್ಯೂಸೆಕ್ ನೀರನ್ನು ಅಣೆಕಟ್ಟಿನ ಕ್ರಸ್ಟ್ ಗೇಟ್‌ಗಳ ಮೂಲಕ ನೇರವಾಗಿ ತುಂಗಾ ನದಿಗೆ ಹರಿಸಲಾಗುತ್ತಿದೆ. 

ಇನ್ನುಳಿದಂತೆ ಕೃಷಿ ಹಾಗೂ ಗೃಹಬಳಕೆಯ ಅಗತ್ಯಗಳನ್ನು ಪೂರೈಸಲು ಕಾಲುವೆಗಳಿಗೆ ನೀರು ಹರಿಸಲಾಗುತ್ತಿದೆ. ಯು.ಟಿ.ಪಿ ಕಾಲುವೆಗೆ 950 ಕ್ಯೂಸೆಕ್, ಎಡದಂಡೆ ಕಾಲುವೆಗೆ (LBC) 290 ಕ್ಯೂಸೆಕ್ ಹಾಗೂ ಬಲದಂಡೆ ಕಾಲುವೆಗೆ (RBC) 125 ಕ್ಯೂಸೆಕ್ ನೀರನ್ನು ಹರಿಬಿಡಲಾಗಿದೆ. ಜೊತೆಗೆ ಕುಡಿಯುವ ನೀರಿನ ಉದ್ದೇಶಕ್ಕೆ 35 ಕ್ಯೂಸೆಕ್ ನೀರು ವಿನಿಯೋಗವಾಗುತ್ತಿದ್ದು, ಪ್ರತಿದಿನ 20 ಕ್ಯೂಸೆಕ್‌ನಷ್ಟು ನೀರು ಆವಿಯಾಗುತ್ತಿದೆ.

ಕಳೆದ ವರ್ಷ ಇದೇ ಅವಧಿಯಲ್ಲಿ ಜಲಾಶಯಕ್ಕೆ ಬರೋಬ್ಬರಿ 26,278 ಕ್ಯೂಸೆಕ್ ಒಳಹರಿವು ಇತ್ತು ಹಾಗೂ 24,958 ಕ್ಯೂಸೆಕ್ ನೀರನ್ನು ಹೊರಗೆ ಬಿಡಲಾಗುತ್ತಿತ್ತು. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ನೀರಿನ ಒಳಹರಿವಿನ ಪ್ರಮಾಣ ತುಸು ಕಡಿಮೆಯಾಗಿದೆ.

ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor