shivamogga Mar 17, 2024 ನಾಳೆ ಶಿವಮೊಗ್ಗಕ್ಕೆ ಪ್ರಧಾನಿ ನರೇಂದ್ರ ಮೋದಿ ಆಗಮಿಸ್ತಿದ್ದಾರೆ. ಶಿವಮೊಗ್ಗದಲ್ಲಿ ಅಲ್ಲಮಪ್ರಭು ಮೈದಾನದಲ್ಲಿ ನರೇಂದ್ರ ಮೋದಿಯವರ ಸಮಾವೇಶ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಶಿವಮೊಗ್ಗ ಪೊಲೀಸ್ ಇಲಾಖೆ ಬಂದೋಬಸ್ತ್ ಕೈಗೊಂಡಿದ್ದು, ಹೈ ಅಲರ್ಟ್ ಆಗಿದೆ. ಚುನಾವಣೆ ನೀತಿ ಸಂಹಿತೆಯ ಡ್ಯೂಟಿ ಜೊತೆಗೆ ಪ್ರಧಾನಿ ಸಮಾವೇಶದ ಬಂದೋಬಸ್ತ್ನಲ್ಲಿರುವ ಪೊಲೀಸ್ ಇಲಾಖೆ ಕಾರ್ಯಕ್ರಮಕ್ಕೆ ಆಗಮಿಸುವ ಜನರಿಗೆ ಕೆಲವೊಂದು ವಸ್ತುಗಳನ್ನ ತರಬಾರದು ಎಂದು ನಿಷೇಧ ಹೇರಿದ್ದು, ಈ ಸಂಬಂಧ ಪತ್ರಿಕಾ ಪ್ರಕಟಣೆ ನೀಡಿದೆ.
ಪತ್ರಿಕಾ ಪ್ರಕಟಣೆ
ದಿನಾಂಕ: 18-03-2024 ರಂದು ನರೇಂದ್ರ ಮೋದಿ, ಮಾನ್ಯ ಪ್ರಧಾನ ಮಂತ್ರಿಗಳು ಭಾರತ ಸರ್ಕಾರ ರವರು ಶಿವಮೊಗ್ಗ ಜಿಲ್ಲೆಗೆ ಆಗಮಿಸಿ ಶಿವಮೊಗ್ಗ ನಗರದ ಫ್ರೀಡಂ ಪಾರ್ಕ್ ನಲ್ಲಿ ನಡೆಯುವ ಸಾರ್ವಜನಿಕ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಈ ಕಾರ್ಯಕ್ರಮಕ್ಕೆ ಬರುವ ಸಾರ್ವಜನಿಕರು ತಮ್ಮ ಮೊಬೈಲ್ ಫೋನ್ ಮತ್ತು ಪರ್ಸ್ ಗಳನ್ನು ಹೊರತು ಪಡಿಸಿ, ನೀರಿನ ಬಾಟಲಿ, ಬ್ಯಾಗ್, ಪೇಪರ್(ಚೀಟಿ), ಪೆನ್, ಕಪ್ಪು ಬಣ್ಣದ ಬಟ್ಟೆ / ಶರ್ಟ್ / ಕರವಸ್ತ್ರ, ಪ್ಲೇ ಕಾರ್ಡ್, ಬೆಂಕಿ ಪೊಟ್ಟಣ / ಲೈಟರ್, ಯಾವುದೇ ಸ್ಪೋಟಕ, ಅಪಾಯಕಾರಿ ವಸ್ತುಗಳು ಹಾಗೂ ಇತರೆ ಯಾವುದೇ ವಸ್ತುಗಳನ್ನು ತರುವಂತಿರುವುದಿಲ್ಲ.
