shivamogga Mar 15, 2024 :MLC seat for KE Kantesh ಶಿವಮೊಗ್ಗ ಲೋಕಸಭಾ ಕ್ಷೇತ್ರ ಚುನಾವಣೆ ಕದನ ಕುತೂಹಲ ಇನ್ನಷ್ಟು ಹೆಚ್ಚಾಗುತ್ತಿದೆ. ಒಂದು ಹಂತಕ್ಕೆ ಮಾಜಿ ಡಿಸಿಎಂ ಕೆಎಸ್ ಈಶ್ವರಪ್ಪ ಶಿವಮೊಗ್ಗದಿಂದ ಪಕ್ಷೇತರವಾಗಿ ಕಣಕ್ಕಿಳಿಯುವ ತೀರ್ಮಾನವಾಗಿ ಪರೋಕ್ಷವಾಗಿ ತಿಳಿಸಿದ್ದು, ಸಂಜೆ ಈ ಬಗ್ಗೆ ಅಂತಿಮವಾಗಲಿದೆ.
ಇದರ ನಡುವೆ ಕೆ.ಎಸ್.ಈಶ್ವರಪ್ಪನವರ ಪುತ್ರ ಕೆ.ಇ. ಕಾಂತೇಶ್ರವರಿಗೆ ಎಂಎಲ್‌ಸಿ ಮಾಡುವ ಆಫರ್ ನೀಡಲಾಗಿದೆ. ಈ ಬಗ್ಗೆ ಮಲೆನಾಡು ಟುಡೆ ವರದಿ ಮಾಡಿತ್ತು. ಸದ್ಯ ಇದರ ಬಗ್ಗೆ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಬೆಂಗಳೂರಿನಲ್ಲಿ ಪ್ರತಿಕ್ರಿಯಿಸಿದ್ದಾರೆ.
ಬೆಂಗಳೂರಿನಲ್ಲಿ ತಮ್ಮ ವೈಯಕ್ತಿಕ ವಿಚಾರದ ಬಗ್ಗೆ ವರದಿಯಾದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಈಶ್ವರಪ್ಪರವರ ಜತೆಗೆ ನಾನು ಮಾತನಾಡುತ್ತೇನೆ. ಅಲ್ಲದೆ, ಹೈಕಮಾಂಡ್ ನಾಯಕರು ಸಹ ಮಾತನಾಡಲಿದ್ದಾರೆ ಎಂದಿದ್ದಾರೆ. ಅಲ್ಲದೆ ಈಶ್ವರಪ್ಪನವರ ಮಗ ಕೆಇ ಕಾಂತೇಶ್ರರವರನ್ನು ಎಂಎಲ್‌ಸಿ ಮಾಡಲಿದ್ದಾರೆ ಎಂದುತ ತಿಳಿಸಿದ್ದಾರೆ.
ಇನ್ನೂ ಇದೇ ವಿಚಾರದ ಬಗ್ಗೆ ಪ್ರತಿಕ್ರಿಯಿಸಿರುವ ಕೆ.ಎಸ್.ಈಶ್ವರಪ್ಪ ಈಗ ನಾನು ಯಾರ ಮಾತನ್ನು ಸಹ ನಂಬುವುದಿಲ್ಲ. ಎಂಎಲ್ಎ ಮಾಡುತ್ತೇನೆ ಎಂದಿದ್ದರು, ಎಂಪಿ ಮಾಡುತ್ತೇನೆ ಎಂದಿದ್ದರು. ಯಡಿಯೂರಪ್ಪನವರು ಆಡಿದ ಮಾತಿನಂತೆ ನಡೆದುಕೊಂಡಿಲ್ಲ. ಅವರು ಮೋಸ ಮಾಡಿದ್ದಾರೆ. ಈಗ ಎಂಎಲ್‌ಸಿ ಮಾಡುತ್ತೇನೆ ಎಂದಿದ್ದಾರೆ. ನಾನು ಈ ಮಾತನ್ನು ನಂಬುವುದಿಲ್ಲ ಎಂದಿದ್ದಾರೆ.