Shivamogga Mar 9, 2024 Shimoga Traffic Police , Discovery Bike ಶಿವಮೊಗ್ಗ ಟ್ರಾಫಿಕ್ ಪೊಲೀಸರು ಉದ್ದುದ್ದ ರಸೀದಿ ಹರಿಯುವುದರ ಜೊತೆಜೊತೆಗೆ ಇದೀಗ ಕಿವಿ ತೂತು ಮಾಡುವಂತಹ ಶಬ್ಧಬರುವ ಸೈಲೆನ್ಸರ್ಗಳನ್ನು ಹೊಂದಿರುವ ವಾಹನ ಮಾಲೀಕರಿಗೂ ಶಾಕ್ ಕೊಟ್ಟಿದ್ದಾರೆ.
ಈ ಸಂಬಂಧ ಆಲ್ಟರ್ ಮಾಡಿದ ಡಿಸ್ಕವರಿ ಬೈಕ್ ಸವಾರನಿಗೆ ಬರೋಬ್ಬರಿ ಎಂಟುವರೆ ಸಾವಿರ ರೂಪಾಯಿ ದಂಡ ವಿಧಿಸಿದೆ. ಶಿವಮೊಗ್ಗದ ವಿವಿಧ ಸರ್ಕಲ್ಗಳಲ್ಲಿ ಈತ ಆಲ್ಟರ್ ಮಾಡಿದ ಸೈಲೆನ್ಸರ್ ಇರುವ ಡಿಸ್ಕವರಿ ಓಡಿಸಿಕೊಂಡು ಓಡಾಡುತ್ತಿದ್ದ ಈ ಬಗ್ಗೆ ದೂರುಗಳು ಕೇಳಿಬಂದ ಬೆನ್ನಲ್ಲೆ ಪೊಲೀಸರು ವಾಹನದ ಬೆನ್ನುಬಿದ್ದಿದ್ದಾರೆ. ಅದರ ಮಾಲೀಕರನ್ನ ಕರೆತಂದು ಕೇಸ್ ದಾಖಲಿಸಿದ್ದಾರೆ. ಈ ಸಂಬಂಧ ಕೋರ್ಟ್ ನ್ಯಾಯಾಲಯವು ಒಟ್ಟು 8200/- ರೂ ದಂಡ ವಿಧಿಸಿದೆ.
ಇನ್ನೊಂದೆಡೆ ಶಿವಮೊಗ್ಗ ಟ್ರಾಫಿಕ್ ಪೊಲೀಸ್ ರು ಒಂದೊಳ್ಳೆ ಕೆಲಸ ಸಹ ಮಾಡುತ್ತಿದ್ದಾರೆ. ಅಪಘಾತಗಳನ್ನು ತಡೆಗಟ್ಟುವ ಸಲುವಾಗಿ ಠಾಣಾ ವ್ಯಾಪ್ತಿಯ ವಾಹನಗಳ ಹಿಂಭಾಗಕ್ಕೆ ರೇಡಿಯಂ ಸ್ಟಿಕ್ಕರ್ ಆಂಟಿಸದೆ ಓಡಾಡುವ ವಾಹನಗಳಿಗೆ ಹಿಂಭಾಗಕ್ಕೆ ರೇಡಿಯಂ ಸ್ಟಿಕ್ಕರ್ ರನ್ನು ಆಂಟಿಸುವ ಮೂಲಕ ವಾಹನ ಚಾಲಕರಿಗೆ ಮತ್ತು ಮಾಲೀಕರಿಗೆ ತಮ್ಮ ವಾಹನಗಳಿಗೆ ರೇಡಿಯಂ ಸ್ಟಿಕ್ಕರ್ ಗಳನ್ನು ಆಂಟಿಸುವ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ.
ಅಲ್ಲದೆ ಸಾರ್ವಜನಿಕರು ಫೇಸ್ ಬುಕ್ ಅಲ್ಲಿ ಕೆ.ಆರ್.ಪುರಂ ಕಡೆಗಳಲ್ಲಿ ಸಂಚಾರಿ ನಿಯಮದ ಬಗ್ಗೆ ಸೂಚನಾ ಫಲಕಗಳ ಅಲಭ್ಯದ ಬಗ್ಗೆ ತಿಳಿಸಿದ್ದರ ಫಲವಾಗಿ , ಪಶ್ಚಿಮ ಸಂಚಾರ ಪೊಲೀಸ್ ಠಾಣೆಯ ಪಿಎಸ್ಐ ತಿರುಮಲೇಶ್ ರವರು ಮತ್ತು ಸಿಬ್ಬಂದಿಯವರು ವಾಹನಗಳ ಏಕಮುಖ ಸಂಚಾರ, ವಾಹನಗಳ ದಿನ ಬಿಟ್ಟು ದಿನ ಪಾರ್ಕಿಂಗ್ ಸೈನ್ ಬೋರ್ಡ್ ಗಳನ್ನ ಹಾಕಿಸಿ, ಸುಗಮ ಸಂಚಾರಕ್ಕೆ ಅನುವು ಮಾಡಿದ್ದಾರೆ.
ಶಿವಮೊಗ್ಗ ಟ್ರಾಫಿಕ್ ಪೊಲೀಸ್