ತುಂಗಾ ಸೇತುವೆ ಬಳಿ ದರೋಡೆ | ಎಣ್ಣೆ ಅಂಗಡಿ ಬಾಗಿಲು ತೆಗೆದಾಗ ಆಗಿದ್ದು ಆಘಾತ | ನಿಲ್ಲಿಸಿದ್ದ ಬೈಕ್ ನಾಪತ್ತೆ ! Today @news

ಹಂಚಿಕೊಳ್ಳಿ
WhatsApp Facebook X Telegram

Shivamogga Mar 7, 2024  ಶಿವಮೊಗ್ಗದಲ್ಲಿ ನಡೆದ ವಿವಿಧ ಕ್ರೈಂ ಪ್ರಕರಣಗಳ ವರದಿ ಇಲ್ಲಿದೆ 

ಟ್ರ್ಯಾಕ್ಟರ್  ಚಾಲಕನ ಮನೆ ಮುಂದೆ ನಿಲ್ಲಿಸಿದ್ದ ಬೈಕ್ ಕಳ್ಳತನ 

ಭದ್ರಾವತಿ ತಾಲ್ಲೂಕು ಹೊಸಮನೆ ಪೊಲೀಸ್ ಸ್ಟೇಷನ್  ಲಿಮಿಟ್ಸ್​ ನಲ್ಲಿ ಬೈಕ್​ವೊಂದನ್ನ ಕಳವು ಮಾಡಲಾಗಿದೆ.  ಇಲ್ಲಿನ ನಿವಾಸಿ  ತಮ್ಮ  ಹೋಂಡಾ ಶೈನ್ ಮೋಟಾರ್ ಬೈಕನ್ನು ದಿನಾಂಕ:01/03/2024 ರಂದು ರಾತ್ರಿ 11.30 ಗಂಟೆಗೆ ತಮ್ಮ ಟ್ರಾಕ್ಟರ್ ಚಾಲಕರ  ಮನೆಯ ಮುಂಭಾಗದಲ್ಲಿ ನಿಲ್ಲಿಸಿದ್ದರು. ಬಳಿಕ ಕೆಲಸದ ನಿಮಿತ್ತ ಹೊರಕ್ಕೆ ಹೋಗಿದ್ದರು,  ದಿನಾಂಕ:05/03/2024 ರಂದು ಬೆಳಿಗ್ಗೆ 04.30 ಗಂಟೆಗೆ ವಾಪಾಸ್ಸು ಬಂದು ನೋಡಿದಾಗ ಬೈಕ್ ಇರಲಿಲ್ಲ. ಹೀಗಾಗಿ  ಕಳುವಾದ ಬೈಕ್ ನ್ನು ಪತ್ತೆಮಾಡಿಕೊಡಬೇಕೆಂದು ನೀಡಿದ ದೂರು ನೀಡಿದ್ದಾರೆ 

ಎಣ್ಣೆ ಅಂಗಡಿಯಲ್ಲಿ ಕಳ್ಳತನ

ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಸ್ಟೇಷನ್​  ವ್ಯಾಪ್ತಿಯಲ್ಲಿ ಬರುವ  ದುರ್ಗಾ ಬಾರ್ & ರೆಸ್ಟೊರೆಂಟ್ ನಲ್ಲಿ  ಕಳ್ಳತನವಾಗಿದೆ.   04-03-2024 ರಂದು ರಾತ್ರಿ11-00 ಗಂಟೆಗೆ ಅಂಗಡಿಯ ಶೆಟರ್ ಗೆ ಬೀಗ ಹಾಕಿಕೊಂಡು ಕ್ಯಾಶಿಯರ್ ಮನೆಗೆ ಹೋಗಿದ್ದಾರೆ.  ಮಾರನೇ ದಿನ ದಿನಾಂಕ:05-03-2024 ರಂದು ಬೆಳಗ್ಗೆ 10-00 ಗಂಟೆಗೆ ಬಂದು ನೋಡಿದಾಗ ಕಳ್ಳತನವಾಗಿದ್ದು ಗೊತ್ತಾಗಿದೆ.  ಕಳ್ಳರು ಗೋಡೆಯನ್ನು ಕನ್ನ ಕೊರೆದು ಓಳಗೆ ಹೋಗಿದ್ದು, ಕ್ಯಾಶ್ ಕೌಂಟರ್ ನಲ್ಲಿದ್ದ ಸುಮಾರು 75,000/- ರೂ ನಗದು ಹಣ ಹಾಗೂ 74,300 ರೂ ಮೌಲ್ಯದ ಮದ್ಯವನ್ನು ಕಳ್ಳತನ ಮಾಡಿದ್ದಾಗಿ ತಿಳಿದು ಬಂದಿದೆ.  

ತುಂಗಾ ಸೇತುವೆ ಬಳಿಯಲ್ಲಿ ದರೋಡೆ 

ಶಿವಮೊಗ್ಗ ನಗರದ ತುಂಗಾ ಸೇತುವೆ ಬಳಿಯಲ್ಲಿ ವ್ಯಕ್ತಿಯೊಬ್ಬನನ್ನ ದರೋಡೆ ಮಾಡಲಾಗಿದೆ. ತಮ್ಮ ಅಣ್ಣನಿಗೆ ನೀಡಬೇಕಿದ್ದ ಹಣವನ್ನು ಒಟ್ಟು ಮಾಡಲು ಬಂದಿದ್ದ ವ್ಯಕ್ತಿಯನ್ನು ಅಡ್ಡಗಟ್ಟಿ ದರೋಡೆ ಮಾಡಲಾಗಿದೆ. ಅಣ್ಣನಿಗೆ ಹಣ ನೀಡಲು ತಮ್ಮ ಮೇಸ್ತ್ರಿ ಬಳಿ ದುಡ್ಡು ಪಡೆಯಲು ಬಂದಿದ್ದ ಕೂಲಿ ಕಾರ್ಮಿಕ ಹೊಳೆ ಬಸ್​ ಸ್ಟಾಪ್ ಬಳಿ ಇಳಿದಿದ್ದಾರೆ. ಅಲ್ಲಿಯೇ ಬಹಿರ್ದೆಸೆಗೆ ಅಂತಾ ತುಂಗಾನದಿ ಬ್ರಿಡ್ಜ್​ ಕೆಳಕ್ಕೆ ಇಳಿದು ವಾಪಸ್ ಆಗುವಾಗ ಅವರನ್ನ ದುಷ್ಕರ್ಮಿಗಳು ಅಡ್ಡಗಟ್ಟಿದ್ದಾರೆ. ಅಲ್​ಲದೆ ಮಾರಾಕಾಸ್ತ್ರ ತೋರಿಸಿ 12 ಸಾವಿರ ರೂಪಾಯಿ ಹಾಗೂ ಮೊಬೈಲ್ ದೋಚಿ ಪರಾರಿಯಾಗಿದ್ದಾರೆ. 

ಹಂಚಿಕೊಳ್ಳಿ
WhatsApp Facebook X Telegram
Malenadu Today
ಲೇಖಕರ ಬಗ್ಗೆ

Malenadu Today

Malenadu Today Contributor