ಶಿವಮೊಗ್ಗ ಲೋಕಸಭಾ ಚುನಾವಣೆ 2024 | ದೊಡ್ಡ ಸುದ್ದಿ ಕೊಟ್ಟ ಮಧು ಬಂಗಾರಪ್ಪ! ಅಖಾಡಕ್ಕೆ ಅಭ್ಯರ್ಥಿ ಫಿಕ್ಸ್?

Shivamogga Feb 19, 2024  ಶಿವಮೊಗ್ಗ ಲೋಕಸಭಾ ಅಖಾಡ ಸಿದ್ದಗೊಂಡಿದೆ. ಇಲ್ಲಿವರೆಗೂ ಬಿಜೆಪಿಯ ಹಾಲಿ ಸಂಸದ ಬಿ.ವೈ.ರಾಘವೇಂದ್ರ ರವರ ವಿರುದ್ಧ ಯಾರು ನಿಲ್ಲುತ್ತಾರೆ ಎಂಬುದು ಕಾಂಗ್ರೆಸ್​ ವಲಯದಲ್ಲಿ ಸಾಕಷ್ಟು ಚರ್ಚೆಯಾಗುತ್ತಿತ್ತು. ಆದರೆ ನಿನ್ನೆ  ಮಧು ಬಂಗಾರಪ್ಪ ನೀಡಿರುವ ಹೇಳಿಕೆ ಕುತೂಹಲ ಮೂಡಿಸಿದೆ. ಏಕೆಂದರೆ, ಇಲ್ಲಿವರೆಗೂ ಕಾಂಗ್ರೆಸ್​​ ಪಾಳಯದಲ್ಲಿ ಗೀತಾ ಶಿವರಾಜಕುಮಾರ್  ನಿಲ್ಲುತ್ತಾರೆ ಎಂಬ ಮಾತುಗಳೇ ಹೆಚ್ಚಾಗಿ ಕೇಳಿಬಂದಿತ್ತು. ಆದರೆ ಇದೀಗ ಸ್ವತಃ ಮಧು ಬಂಗಾರಪ್ಪ ನಾನೇ ನಿಲ್ಲುತ್ತೇನೆ ಎಂದಿದ್ದಾರೆ. 

ಉಸ್ತುವಾರಿ ಸಚಿವ ಮಧು ಬಂಗಾರಪ್ಪ

ಈ ಸಮಾವೇಶಗಳು ಲೋಕಸಭಾ ಚುನಾವಣೆಯ ಪ್ರಚಾರವೇ. ಹೌದು ಇಲ್ಲ ಎಂದು ನಾನೇಕೆ ಹೇಳಲಿ?  ನಾನು ಲೋಕಸಭಾ ಚುನಾವಣೆ ಪ್ರಚಾರಕ್ಕೆ ಮತ್ತೆ ಬರುತ್ತೇನೆ. ಗ್ಯಾರಂಟಿ ಇಟ್ಟುಕೊಂಡು ಮತ ಕೇಳುತ್ತೇನೆ. ಪಕ್ಷಕ್ಕಾಗಿ ಕತ್ತೆ ಥರ ದುಡಿಯುತ್ತಿದ್ದೇನೆ. ಪಕ್ಷ ಅವಕಾಶ ಕೊಟ್ರೆ ಚುನಾವಣೆ ನಿಲ್ಲುತ್ತೇನೆ ಅಂತಾ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ. 

ವಿರೋಧ ಪಕ್ಷದವರಿಗೆ ಜನರು ಉತ್ತರ ಕೊಡುತ್ತಾರೆ, ಶಿಕಾರಿಪುರ ಸೇರಿದಂತೆ ರಾಜ್ಯದಲ್ಲೆಡೆ ಕಾರ್ಯಕ್ರಮ ನಡೆಯುತ್ತಿದೆ. ಟೀಕಾ ಟಿಪ್ಪಣಿಗಳಿಗೆ ಈ ಸಮಾವೇಶ ಉತ್ತರ ಆಗುತ್ತದೆ ಎಂದಿದ್ದಾರೆ. ಧೈರ್ಯವಾಗಿ ಜನರ ಬಳಿ ಬಂದು ಆಶೀರ್ವಾದ ಕೇಳುತ್ತೇವೆ. 

ಇನ್ನೂ ಹೆಚ್ಚಿನ ಅನುದಾನ ಜಿಲ್ಲೆಗೆ ತರುತ್ತೇನೆ. ಈ ಕಾರ್ಯಕ್ರಮಕ್ಕೆ ವಿರೋಧ ಪಕ್ಷದವರು ಬರಬೇಕಿತ್ತು ಎಂದರು. 

ಇದು ಪಕ್ಷದ ಕಾರ್ಯಕ್ರಮ ಅಲ್ಲ‌ ಸರ್ಕಾರದ ಕಾರ್ಯಕ್ರಮ. ವಿರೋಧ ಪಕ್ಷದ ಟೀಕೆ ಟಿಪ್ಪಣಿ ನಮಗೆ ಕೇಳಬೇಡಿ.ಅಧಿಕಾರಕ್ಕಾಗಿ, ಚುನಾವಣೆಗಾಗಿ ಈ ಸಮಾವೇಶ ಅಲ್ಲ. ಬಿಜೆಪಿ ರಾಜ್ಯಾಧ್ಯಕ್ಷರು ಕಮಿಷನ್ ತಿನ್ನುತಿದ್ದಾರೆ ಅಂತಾರೆ. ನಾನು ಜನರಿಗೆ ಕೇಳಿದನಲ್ಲ ಯಾರಾದರೂ ಹೇಳಿದ್ರಾ ಕಮಿಷನ್ ಕೊಡುತ್ತಿದ್ದೇವೆ ಅಂತ ಎಂಧು ಪ್ರಶ್ನಿಸಿದ್ರು

ಯಾರು ವಿರೋದ ಪಕ್ಷದವರು ಕಂಡಮ್ ಮಾಡ್ತಾರೆ ಅವರೇ ಕಂಡಮ್ ಆಗ್ತಾರೆ ,ಜನರೇ ಬಂದು ನಮಗೆ ಯೋಜನೆ ತಲುಪುತ್ತಿದೆ ಅನ್ನುತ್ತಿದ್ದಾರೆ. ಪಕ್ಷ,ಜಾತಿ, ಧರ್ಮ ನೋಡಿ ಯೋಜನೆ ಕೊಡಲ್ಲ. ನುಡಿದಂತೆ ನಡೆದ ಸರ್ಕಾರಕ್ಕೆ ಜನ ಬೆಂಬಲ ಕೇಳುತ್ತಿದ್ದಾರೆ. ಬಿಜೆಪಿ ಅವರಿಗೆ ದುರ್ಬುದ್ದಿ ಜಾಸ್ತಿ . ರಾಮನನ್ನು ಬೀದಿಗೆ ತಂದು ಮತ ಕೇಳುತ್ತಿದ್ದಾರೆ. ಹಿಂದೂಗಳ ತೆರಿಗೆ ಹಿಂದೂಗಳಿಗೆ ಕೋಡ್ಬೇಕಂತೆ .ಮುಸ್ಲಿಮರು ಬಡವರು ತೆರಿಗೆ ಕಟ್ಟಿಲ್ವಾ. ನಾವೇಲ್ಲ ಭಾರತಾಂಬೆಯ ಮಕ್ಕಳು ಅಲ್ವ ಎಂದು ವ್ಯಾಖ್ಯಾನಿಸಿದ್ರು. 

ಇನ್ನೂ ಶಿಕಾರಿಪುರದ ತಾಲೂಕು ಆಡಳಿತ ಸಭಾಂಗಣದ ಹಿಂಭಾಗದಲ್ಲಿ ಏರ್ಪಡಿಸಲಾಗಿದ್ದ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಸಮಾವೇಶ  ಉದ್ಘಾಟಿಸಿ ಮಾತನಾಡುವ ಸಂದರ್ಭದಲ್ಲಿ ಮಧು ಬಂಗಾರಪ್ಪ ಚುನಾವಣಾ ಪೂರ್ವದಲ್ಲಿ ನೀಡಿದ ಭರವಸೆಯಂತೆ ಮಹತ್ವಕಾಂಕ್ಷಿ  ಐದು ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಗೊಳಿಸಿ ನುಡಿದಂತೆ ನಡೆದು ಮುಂದೆ ಸಾಗುತ್ತಿದೆ ಎಂದು ಎಂದು ರಾಜ್ಯ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಮಧು ಎಸ್ ಬಂಗಾರಪ್ಪ ಅವರು ಹೇಳಿದರು.

ಪೂಜ್ಯ ತಂದೆಯವರಾದ ಬಂಗಾರಪ್ಪನವರು  ತಮ್ಮ ಅಧಿಕಾರ ಅವಧಿಯಲ್ಲಿ ಆಶ್ರಯ ಆರಾಧನಾ ಕೃಪಾಕದಂತಹ ಹಲವಾರು ಜನಪರ ಯೋಜನೆಗಳನ್ನು ಜಾರಿಗೊಳಿಸಿದ್ದರು.  ಮೂರು ದಶಕಗಳ ಹಿಂದೆ ರೈತರ ಪಂಪ್ಸೆಟ್ಟುಗಳಿಗೆ ಉಚಿತ ವಿದ್ಯುತ್ ನೀಡುವ ಯೋಜನೆ ಎಂದು ಕೂಡ ಚಾಲ್ತಿಯಲ್ಲಿರುವುದು ಹರ್ಷದ ಸಂಗತಿಯಾಗಿದೆ.  ರಾಜ್ಯ ಬರಗಾಲದಿಂದ ತತ್ತರಿಸುತ್ತಿರುವ ಸಂದರ್ಭದಲ್ಲಿ ರೈತರ ಕೃಷಿ ಚಟುವಟಿಕೆಗಳಿಗೆ ಅನುಕೂಲವಾಗುವಂತೆ ಭತ್ತ ಜೋಳ ರಾಗಿಯಂತಹ ಬಿತ್ತನೆ ಬೀಜಗಳನ್ನು ಜಿಲ್ಲೆಯ ರೈತರ ಮನೆ ಬಾಗಿಲಿಗೆ ತಲುಪಿರುವುದು ವಿಶೇಷವಾಗಿತ್ತು.  ಅಂತಹ ಜನನಾಯಕರ ಮಾರ್ಗದರ್ಶನದಂತೆ ಆಡಳಿತರೂಢ ಸರಕಾರ ಚುನಾವಣಾ ಪೂರ್ವದಲ್ಲಿ  ಪ್ರಣಾಳಿಕೆ ಸಮಿತಿಯ ಸದಸ್ಯನಾಗಿದ್ದೆ ಎಂಬ ಹೆಮ್ಮೆ ನನಗಿದೆ ಎಂದರು.

ಮನೆ  ಒಡತಿಗೆ 2000 ರೂ.ಗಳ ಸಹಾಯಧನ ನೀಡುವ  ಗೃಹಲಕ್ಷ್ಮಿ, ರಾಜ್ಯದ ಪ್ರತಿ ಮನೆ ಮನೆಗೆ ಉಚಿತ ವಿದ್ಯುತ್ ಒದಗಿಸುವ ಗೃಹಜ್ಯೋತಿ,  ಮುಂತಾದ ಗ್ಯಾರಂಟಿ ಯೋಜನೆಗಳಿಂದ ಜನಸಾಮಾನ್ಯರ ನೆಮ್ಮದಿಯ ಬದುಕಿಗೆ ಸಹಕಾರಿಯಾಗಿದೆ. ಎಂದ ಅವರು,  ಇದು ನಿಮ್ಮದೇ ಸರ್ಕಾರ ಇದನ್ನು ಪೋಷಿಸಿ ಬೆಳೆಸುವ ಹೊಣೆಗಾರಿಕೆಯು ನಿಮ್ಮದೇ ಆಗಿದೆ ಎಂದವರು ನುಡಿದರು. ಮುಂದಿನ ದಿನಗಳಲ್ಲಿ ರಾಜ್ಯದ ಎಲ್ಲಾ ಸರ್ಕಾರಿ ಶಾಲೆಗಳನ್ನು ಯಾವುದೇ ಖಾಸಗಿ ಶಾಲೆಗಳಿಗೆ ಕಡಿಮೆ  ಇಲ್ಲದಂತೆ ಮೂಲಭೂತ ಸೌಕರ್ಯಗಳನ್ನು ಒದಗಿಸಿ ಅಭಿವೃದ್ದಿ ಪಡಿಸುವ ಉದ್ದೇಶ ಹೊಂದಲಾಗಿದೆ ಎಂದರು.

Leave a Comment

ಶಿವಮೊಗ್ಗ ಏರ್‌ಪೋರ್ಟ್ ಕಚೇರಿ ಉದ್ಘಾಟನೆ ಶಿವಮೊಗ್ಗ ಎಸ್​ಪಿ ನೈಟ್ ರೌಂಡ್ಸ್​ ಶಿವಮೊಗ್ಗಕ್ಕೆ ಬಂದ ಅಲೋಕ್​ ಕುಮಾರ್​ ಮಲೆನಾಡಲ್ಲಿ ಇಷ್ಟೆಲ್ಲಾ ಆಯ್ತು