Wheeling penalties in Shimoga/ ಬೈಕ್ ವೀಲಿಂಗ್ ಮಾಡಿದ ಮತ್ತೊಬ್ಬ ಯುವಕ ! ಕೋರ್ಟ್ ಹಾಕಿದ ದಂಡವೆಷ್ಟು ಗೊತ್ತಾ

This Article Written by / Malenadu Today / ಜನವರಿ 14, 2024

SHIVAMOGGA  |  Jan 14, 2024  | Wheeling penalties in Shimoga  ಶಿವಮೊಗ್ಗ ಟ್ರಾಫಿಕ್ ಪೊಲೀಸ್ ವೀಲೀಂಗ್​ ಮಾಡುತ್ತಿದ್ದವರ ವಿರುದ್ಧ ಕೇಸ್ ಜಡಿದು ಕೋರ್ಟ್​ಗೆ ಚಾರ್ಜ್ ಶೀಟ್​ ಸಲ್ಲಿಸಿದ್ದಾರೆ. ಕೋರ್ಟ್ ಸಹ ಬರೋಬ್ಬರಿ ಫೈನ್ ಹಾಕಿ ಮಾಡಿದ ತಪ್ಪಿದ ದಂಡ ತೆತ್ತುವಂತೆ ಮಾಡಿದೆ. 

ಶಿವಮೊಗ್ಗ ಕೋರ್ಟ್​ /Wheeling penalties in Shimoga

ವೀಲಿಂಗ್‌ ಮಾಡುತ್ತ ಅಪಾಯಕಾರಿ ಸ್ಥಿತಿಯಲ್ಲಿ ಬೈಕ್‌ ಚಲಾಯಿಸಿದ ಯುವಕನಿಗೆ ಶಿವಮೊಗ್ಗ ಕೋರ್ಟ್​ ದಂಡ ವಿಧಿಸಿದೆ.  

ಏನಿದು ಪ್ರಕರಣ?

ಶಿವಮೊಗ್ಗದ ಪುರದಾಳು ಸಮೀಪ ರಿಂಗ್‌ ರೋಡ್​ನಲ್ಲಿ ಯುವಕನೊಬ್ಬ ಬೈಕ್‌ ವೀಲಿಂಗ್‌ ಮಾಡಿಕೊಂಡು ಓಡಾಡಿದ್ದಾನೆ. ಅಲ್ಲದೆ ಇದರ ವಿಡಿಯೋ ರೆಕಾರ್ಡ್​ ಮಾಡಿಕೊಂಡು ಸೋಶಿಯಲ್ ಮೀಡಿಯಾಗೆ ಅಪ್​ಲೋಡ್ ಆಗಿದೆ. ಇದು ಶಿವಮೊಗ್ಗದ  ಪಶ್ಚಿಮ ಸಂಚಾರ ಪೊಲೀಸರಿಗೆ ಲಭ್ಯವಾಗಿತ್ತು.

ಶಿವಮೊಗ್ಗ ಪಶ್ಚಿಮ ಸಂಚಾರಿ ಪೊಲೀಸ್ ಸ್ಟೇಷನ್

ಪಶ್ಚಿಮ ಸಂಚಾರ ಠಾಣೆಯ ಹೆಚ್‌.ಸಿ. ಸಂದೀಪ್‌ ಬೈಕ್‌ ಮತ್ತು ಚಾಲಕನನ್ನು ಪತ್ತೆ ಹಚ್ಚಿ  ಪ್ರಕರಣದ ವಿಚಾರಣೆ ನಡೆಸಿದ್ರು. ಆನಂತರ  ಪಿಎಸ್‌ಐ ತಿರುಮಲೇಶ್‌, ಪ್ರಕರಣ ದಾಖಲಿಸಿ ಈ ಸಂಬಂಧ ಶಿವಮೊಗ್ಗ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.

ಸದ್ಯ ಈ ಸಂಬಂಧ  ಶಿವಮೊಗ್ಗ ಕೋರ್ಟ್ ಬೈಕ್ ವೀಲಿಂಗ್ ಮಾಡಿದ ಆರೋಪಿಗೆ ಬರೋಬ್ಬರಿ ಹನ್ನೊಂದುವರೆ ಸಾವಿರ ದಂಡ ವಿಧಿಸಿದೆ.. 


ಮುಂದಿನ ಸುದ್ದಿ ಒದಿ

Leave a Comment