Shivamogga BJP news / ಪೊರಕೆ ಹಿಡಿದು ದೇವಸ್ಥಾನದ ಅಂಗಳ ಗುಡಿಸಿದ ಬಿಜೆಪಿ ಸಂಸದ & ಶಾಸಕ

ಹಂಚಿಕೊಳ್ಳಿ
WhatsApp Facebook X Telegram

SHIVAMOGGA  |  Jan 14, 2024  |   ಅಯೋಧ್ಯೆಯಲ್ಲಿ ಶ್ರೀರಾಮಮಂದಿರ ಉದ್ಘಾಟನೆ  ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಈಗಾಗಲೇ ವೃತಾಚರಣೆ ಆರಂಭಿಸಿದ್ದಾರೆ. ಉಪಸವಾಸವಿದ್ದು ದೇಗುಲಗಳ ಅಂಗಳವನ್ನು ಸ್ವಚ್ಚಗೊಳಿಸುತ್ತಿರುವ ಅವರ ವೈಖರಿಯನ್ನು ಶಿವಮೊಗ್ಗದಲ್ಲಿಯು ಸಂಸದ ಬಿ.ವೈ.ರಾಘವೇಂದ್ರ  ಹಾಗೂ ಶಿವಮೊಗ್ಗ ಬಿಜೆಪಿ ಮುಖಂಡರು ಮುಂದುವರಿಸಿದ್ದಾರೆ. 

ಶಿವಮೊಗ್ಗ ದೇವಾಲಯಗಳ ಸ್ವಚ್ಚತೆ 

ಜಿಲ್ಲಾ ಬಿಜೆಪಿಯಿಂದ ದೇವಾಲಯ ಪರಿಸರ ಸ್ವಚ್ಚತಾ ಅಭಿಯಾನ ಆರಂಭಿಸಲಾಗಿದೆ. ಈ ಸಂಬಂಧ  ಸಂಸದ ರಾಘವೇಂದ್ರ, ಶಾಸಕ‌ ಚೆನ್ನಬಸಪ್ಪ‌ ನೇತೃತ್ವದಲ್ಲಿ ದೇವಾಲಯದ ಆವರಣ ಸ್ವಚ್ಚತೆಗೆ ಚಾಲನೆ ನೀಡಲಾಯ್ತು. 

ಅರಕೇಶ್ವರ  ದೇವಸ್ಥಾನ 

ಶಿವಮೊಗ್ಗದ ಹೊಳೆಹೊನ್ನೂರು ರಸ್ತೆಯ ವಿದ್ಯಾನಗರ ರೈಲ್ವೆ ಸ್ಟೇಷನ್ ಸಮೀಪದ ಅರಕೇಶ್ವರ ದೇವಾಲಯದ ಆವರಣವನ್ನು ಅಭಿಯಾನದ ನಿಟ್ಟಿನಲ್ಲಿ ಇಂದು ಸ್ವಚ್ಚಗೊಳಿಸಲಾಯ್ತು. ಶಾಸಕರು ಹಾಗೂ ಸಂಸದರು ಇಬ್ಬರು ಸಹ ಪೊರಕೆ ಹಿಡಿದು ದೇಗುಲದ ಆವರಣವನ್ನು ಸ್ವಚ್ಚ ಮಾಡಿದರು. 


ಹಂಚಿಕೊಳ್ಳಿ
WhatsApp Facebook X Telegram
Malenadu Today
ಲೇಖಕರ ಬಗ್ಗೆ

Malenadu Today

Malenadu Today Contributor