ರಂಗಾಯಣದಲ್ಲಿ ನಾಟಕ ಸಿದ್ಧತಾ ಶಿಬಿರ ! ಇಲ್ಲಿದೆ ವಿಶೇಷ ಅವಕಾಶ

SHIVAMOGGA  |  Jan 6, 2024  |    ರಂಗಾಯಣದಲ್ಲಿ ನಾಟಕ ಸಿದ್ಧತಾ ಶಿಬಿರ: ಸೂಚನೆ

ಶಿವಮೊಗ್ಗ: ಶಿವಮೊಗ್ಗ ರಂಗಾಯಣವು ರಂಗಾಸ್ತಕರಿಗಾಗಿ ಫೆಬ್ರವರಿಯಲ್ಲಿ 20 ದಿನಗಳ ಕಾಲ ಪೂರ್ಣಾವಧಿ ನಾಟಕ ಸಿದ್ಧತಾ ಶಿಬಿರವನ್ನು ಆಯೋಜಿಸಿದೆ. 

READ : ಶಿವಮೊಗ್ಗದಲ್ಲಿಯೇ ರೈತರಿಗೆ ಎರಡು ದಿನ ವಿಶೇಷ ಟ್ರೈನಿಂಗ್! ವಿವರ ಇಲ್ಲಿದೆ

ಈ ಹಿನ್ನೆಲೆಯಲ್ಲಿ  ಆಸಕ್ತರಿಂದ ಅರ್ಜಿ ಆಹ್ವಾನಿಸಿದೆ. ಶಿಬಿರಾರ್ಥಿಗಳು 20ರಿಂದ 40 ವರ್ಷ ದವರು ಆಗಿರಬೇಕು. 12 ಅಭ್ಯರ್ಥಿಗಳಿಗೆ ಮಾತ್ರ ಅವಕಾಶ. ಅನುಭವ, ಆಸಕ್ತಿ, ಬದ್ಧತೆ ಆಧಾರದ ಮೇಲೆ ಸಂದರ್ಶನದ ಮೂಲಕ ಅಂತಿಮ ಆಯ್ಕೆ ಮಾಡಲಾಗುವುದು. ಸಂದರ್ಶನಕ್ಕೆ ಸ್ವಂತ ಖರ್ಚಿನಲ್ಲಿ ಬರಬೇಕು ಹಾಗೂ ಆಯ್ಕೆಯಾದ ಅಭ್ಯರ್ಥಿಗಳು ಕನಿಷ್ಠ 5 ಪ್ರದರ್ಶನಗಳಿಗೆ ಒಪ್ಪಿಗೆ ಸೂಚಿಸಬೇಕು. 

ಶಿಬಿರದಲ್ಲಿ ಪಾಲ್ಗೊಳ್ಳುವ ಅಭ್ಯರ್ಥಿಗಳು ತಮ್ಮ ಇತ್ತೀಚಿನ ಭಾವಚಿತ್ರದೊಂದಿಗೆ ಹೆಸರು, ವಿಳಾಸ, ದೂರವಾಣಿ ವಿದ್ಯಾರ್ಹತೆ, ರಂಗಭೂಮಿ ಅನುಭವ ವಿವರ, ಶಿಬಿರಾರ್ಥಿಯಾಗಿ ತರಬೇತಿ ಪಡೆಯುವ ಉದ್ದೇಶ ಹಾಗೂ ವಯಸ್ಸಿನ ದಾಖಲೆಯೊಂದಿಗೆ ಅರ್ಜಿ ಸಲ್ಲಿಸಬಹುದು.

Leave a Comment

ಶಿವಮೊಗ್ಗ ಏರ್‌ಪೋರ್ಟ್ ಕಚೇರಿ ಉದ್ಘಾಟನೆ ಶಿವಮೊಗ್ಗ ಎಸ್​ಪಿ ನೈಟ್ ರೌಂಡ್ಸ್​ ಶಿವಮೊಗ್ಗಕ್ಕೆ ಬಂದ ಅಲೋಕ್​ ಕುಮಾರ್​ ಮಲೆನಾಡಲ್ಲಿ ಇಷ್ಟೆಲ್ಲಾ ಆಯ್ತು