KARNATAKA | Jan 4, 2024 | ನಟ ದರ್ಶನ್ ಅಭಿನಯದ ಕಾಟೇರ ಸಿನಿಮಾಕ್ಕೆ Kaatera Piracy Link ನ ಕಾಟ ಶುರುವಾಗಿದೆ. ಇತ್ತೀಚೆಗೆ ತಮ್ಮ ಸಿನಿಮಾದ ಸಕ್ಸಸ್ ಮೀಟ್ ಕರೆದಿದ್ದ DBOSS ದರ್ಶನ್ ಹಾಗೂ ಚಿತ್ರತಂಡ ಪೈರಸಿ ಮಾಡುವವರಿಗೆ ಹಾಗೂ ಮಾರುವವರಿಗೆ ಎಚ್ಚರಿಕೆ ನೀಡಿದ್ದರು. ಇದರ ನಡುವೆ ದರ್ಶನ್ ಅಭಿನಯದ ಕಾಟೇರ ಸಿನಿಮಾದ ಪೈರಸಿ ವಿಡಿಯೋ ಲಿಂಕ್ ನನ್ನ ಮಾರಾಟ ಮಾಡುತ್ತಿದ್ದ ವ್ಯಕ್ತಿಯ ವಿರುದ್ದ ರಾಯಚೂರಿನಲ್ಲಿ ದೂರು ದಾಖಲಾಗಿದ.ಎ
READ : Kannada Rajyotsava Award / ಕವಿ ಸತ್ಯನಾರಾಯಣ ಅವರಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ! ಅಭಿನಂದನೆ
Kaatera Piracy Link
Kaatera Piracy Link ಹೆಸರಿನಲ್ಲಿ ಯುವಕನೊಬ್ಬರ 40 ರೂಪಾಯಿಗೆ ಸಿನಿಮಾದ ಪೈರಸಿ ಲಿಂಕ್ನ್ನ ಮಾರಾಟ ಮಾಡುತ್ತಿದ್ದ ಎನ್ನಲಾಗಿದೆ, ಈ ಸಂಬಂಧ ರಾಯಚರೂರು ಸದರ್ ಬಜಾರ್ ಪೊಲೀಸ್ ಸ್ಟೇಷನ್ನಲ್ಲಿ ಕಂಪ್ಲೆಂಟ್ ಸಹ ದಾಖಲಾಗಿತ್ತು. ಸೈಬರ್ ಕ್ರೈಂ ಆದ್ದರಿಂದ ಆರೋಪಿಯ ಅಡ್ರೆಸ್ ತಟ್ಟನೆ ಸಿಕ್ಕಿದೆ ಹೀಗಾಗಿ ಕಾರ್ಯಾಚರಣೆಗೆ ಇಳಿದ ಪೊಲೀಸರು ಓರ್ವನನ್ನ ಬಂಧಿಸಿದ್ದಾರೆ. ಅಲ್ಲದೆ ಈ ಸಂಬಂಧ ಇನ್ನಷ್ಟು ಮಂದಿಗಾಗಿ ಹುಡುಕಾಡುತ್ತಿದ್ದಾರೆ.
ಸಾಮಾನ್ಯವಾಗಿ ಇಂತಹ ಕೃತ್ಯವೆಸಗುವವರು ಟೊರೆಂಜ್ಸ್ ಅಥವಾ ಟೆಲಿಗ್ರಾಂಗಳ ಮೂಲಕ ಲಿಂಕ್ ಷೇರ್ ಮಾಡಿ ಮಾರುತ್ತಾರೆ. ಆದರೆ ಇವುಗಳಲ್ಲಿ ಬಹುತೇಕ ಮೋಸದ ಲಿಂಕ್ ಆಗಿರುತ್ತದೆ. ಕೆಲವೊಮ್ಮೆ ಅಕೌಂಟ್ ಹ್ಯಾಕ್ ಆಗುವ ಸಾಧ್ಯತೆ ಇರುತ್ತದೆ. GOOGLE ನಲ್ಲಿ ಸರ್ಚ್ ಕೊಟ್ಟು ಹುಡುಕುವರು ಇರುತ್ತಾರೆ. ಆದರೆ ಗೂಗಲ್ ಇಂತಹ ಕೃತ್ಯಗಳಿಗೆ ಬಹುತೇಕ ಸಪೋರ್ಟ್ ಮಾಡುವುದಿಲ್ಲ.
ಇನ್ನೂ ಪ್ರಕರಣದಲ್ಲಿ ಆರೋಪಿಯು ವಾಟ್ಸ್ಯಾಪ್ನಲ್ಲಿ 40 ರೂಪಾಯಿ ಪೇ ಮಾಡಿದರೆ, ಅವರಿಗೆ ಕಾಟೇರಾ ಸಿನಿಮಾದ ಲಿಂಕ್ ಕಳುಹಿಸಿಕೊಡುತ್ತಿದ್ದನಂತೆ. ಹೀಗೆ ಆತನಿಂದ ಪೈರಸಿ ಲಿಂಕ್ ಕಳುಹಿಸಿಕೊಂಡ ವ್ಯಕ್ತಿಯೊಬ್ಬರು ಸಾಕ್ಷಿ ಸಮೇತ ಪೊಲೀಸರಿಗೆ ದೂರು ನೀಡಿದ್ದಾರೆ. ಸದ್ಯ ಆತನ ವಿರುದ್ಧ ಕಾಪಿ ರೈಟ್ ಆ್ಯಕ್ಟ್ ಮತ್ತು ಐಪಿಸಿ ಸೆಕ್ಷನ್ 420 ಅಡಿಯಲ್ಲಿ ಪ್ರಕರಣ ದಾಖಲಾಗಿದೆ
Kaatera Movie Review
ಇನ್ನೂ ಸದ್ಯ ಹೊರಬರುತ್ತಿರುವ ವಿಮರ್ಶೆಗಳ ಪ್ರಕಾರ, ಸಿನಿಮಾ ಕ್ಲಾಸ್ ಆಗಿ ಮಾಸ್ ಆಡಿಯನ್ಸ್ನ ಸಿನಿಮಾ ಥಿಯೇಟರ್ಗೆ ಬರುವಂತೆ ಮಾಡುತ್ತಿದೆ. ಅದರಲ್ಲಿಯು ದರ್ಶನರವರ ಸಿಂಪಲ್ ಸ್ಪೆಷಲ್ ಆಕ್ಟಿಂಗ್ ಜನರನ್ನ ಮರುಳಾಗಿಸುತ್ತಿದೆ. ನಿರ್ದೇಶನ, ಕ್ಯಾಮರಾ ಹಾಗೂ ಟೆಕ್ನಿಕಲ್ ಆಸ್ಪೆಕ್ಟ್ಗಳು ಸಿನಿಮಾದಲ್ಲಿ ಹಳ್ಳಿಗಾಡಿನ ಸೊಗಸನ್ನ ವಿಶೇಷವಾಗಿ ಮೂಡುವಂತೆ ಮಾಡಿದೆ. ಒಟ್ಟಾರೆ ಸಿನಿಮಾ ಪ್ರೇಕ್ಷಕನ ಬಾಯಲ್ಲಿಯೇ ಅಬ್ಬರ ಪ್ರಚಾರ ಗಿಟ್ಟಿಸಿಕೊಳ್ಳುತ್ತಿದ್ದು, ಸಿನಿಮಾ ಚೆನ್ನಾಗಿದೆ