ಸುದ್ದಿಯ ಸ್ಥಳ: Shivamogga district, Karnataka
SHIVAMOGGA | Dec 13, 2023 | ಶಿವಮೊಗ್ಗದ ಸುರಭಿ ಸ್ವಾಧಾರ ಗೃಹದಿಂದ ಓರ್ವ ಯುವತಿ ಹಾಗೂ ಮತ್ತೊಬ್ಬಳು ಮಹಿಳೆ ಕಾಣೆಯಾಗಿದ್ದಾರೆ. ಅವರ ಬಗ್ಗೆ ಪ್ರಕಟಣೆ ನೀಡಿದ್ದು ಗುರುತು ಪರಿಚಯ ನೀಡಲಾಗಿದೆ. ಯಾರಿಗಾದರೂ ಇವರ ಸುಳಿವು ಸಿಕ್ಕಲ್ಲ ವಿನೋಬನಗರ ಪೊಲೀಸ್ ಸ್ಟೇಷನ್ ಸಿಬ್ಬಂದಿಯನ್ನ ಸಂಪರ್ಕಿಸಲು ಕೋರಲಾಗಿದೆ.
ವಿನೋಬನಗರ ಪೊಲೀಸ್ ಸ್ಟೇಷನ್
ಶಾಂತಲ ಕೋಂ ಬಸವನಗೌಡ, 44 ವರ್ಷ ಇವರು ದಿ: 14-05-2023 ರಂದು ಸುರಭಿ ಸ್ವಾಧಾರ ಗೃಹದಿಂದ ಕಾಣೆಯಾಗಿರುತ್ತಾರೆ. ಶಾಂತಲ ಸುಮಾರು 5.4 ಅಡಿ ಎತ್ತರ, ದುಂಡು ಮುಖ, ಕಪ್ಪು ಕೂದಲು, ಗೋಧಿ ಮೈಬಣ್ಣ ಹೊಂದಿದ್ದು ಸ್ವಾಧಾರ ಗೃಹದಿಂದ ಹೋಗುವಾಗ ಬಿಳಿ ಬಣ್ಣದ ಚೂಡಿಧಾರ್ ಧರಿಸಿರುತ್ತಾರೆ.
READ : BIG NEWS | ಟ್ರಾನ್ಸಫರ್ ಆದರೂ ಸೂಚಿಸಿದ ಸ್ಥಳದಲ್ಲಿ ಡ್ಯೂಟಿಗೆ ಹಾಜರಾಗದ 44 ಪೊಲೀಸ್ ಇನ್ಸ್ಪೆಕ್ಟರ್ಗಳಿಗೆ ನೋಟಿಸ್!
ಕುಮಾರಿ ಯಶೋಧ, 19 ವರ್ಷ ಈಕೆ ಸಾಗರ ಗ್ರಾಮಾಂತರ ಠಾಣೆ ಮೂಲಕ ಸುರಭಿ ಸ್ವಾಧಾರ ಗೃಹದಲ್ಲಿ ಆಶ್ರಯ ಪಡೆದಿದ್ದು ದಿ: 27-09-2023 ರಂದು ಕಾಣೆಯಾಗಿರುತ್ತಾರೆ. ಯಶೋಧ 5 ಅಡಿ ಎತ್ತರ, ದುಂಡು ಮುಖ, ಕಪ್ಪು ಕೂದಲು, ಗೋಧಿ ಮೈಬಣ್ಣ ಹೊಂದಿದ್ದು, ಸ್ವಾಧಾರ ಗೃಹದಿಂದ ಹೋಗುವಾಗ ಕ್ರೀಮ್ ಕಲರಿನ ಟಾಪ್ ಮತ್ತು ಕಪ್ಪು ಬಣ್ಣದ ಪ್ಯಾಂಟ್ ಧರಿಸಿರುತ್ತಾಳೆ.
ಇವರ ಸುಳಿವು ಯಾರಿಗಾದರೂ ಸಿಕ್ಕಲ್ಲಿ ವಿನೋಬನಗರ ಪೊಲೀಸ್ ಠಾಣೆ ದೂರವಾಣಿ ಸಂಖ್ಯೆ : 9480803300, 9480803308 ನ್ನು ಸಂಪರ್ಕಿಸಬಹುದೆಂದು ವಿನೋಬನಗರ ಪೊಲೀಸ್ ಸ್ಟೇಷನ್ ಸಬ್ ಇನ್ಸ್ಪೆಕ್ಟರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.